ಪಿಕೆಪಿಎಸ್ನಿಂದ ರೈತರಿಗೆ ಟ್ರ್ಯಾಕ್ಟರ್ ವಿತರಣೆ
ಪಿಕೆಪಿಎಸ್ ಮೂಲಕ ಸಾಕಷ್ಟು ನೆರವು ನೀಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಿ: ಸವದಿ
ಮಹಾಲಿಂಗಪುರ08: ರೈತರಿಗೆ ಸರಕಾರಗಳು ಡಿಸಿಸಿ ಬ್ಯಾಂಕ್, ಪಿಕೆಪಿಎಸ್ ಮೂಲಕ ಸಾಕಷ್ಟು ನೆರವು ನೀಡುತ್ತಿದ್ದು, ಇದರ ಪ್ರಯೋಜನ ಪಡೆದು ಆರ್ಶ ಒಕ್ಕಲುತನದೊಂದಿಗೆ ತಾವು ಬೆಳೆಯಬೇಕು ಎಂದು ತೇರದಾಳ ಶಾಸಕ ಸಿದ್ದು ಸವದಿ ರೈತರಿಗೆ ಕರೆಕೊಟ್ಟರು.ಇತ್ತೀಚೆಗೆ ಜರುಗಿದ ಸಮೀಪದ ಕೆಸರಗೊಪ್ಪ ಗ್ರಾಮದ ಪಿಕೆಪಿಎಸ್ ವತಿಯಿಂದ ಇಬ್ಬರು ರೈತರಿಗೆ ಸಬ್ಸಿಡಿ ಟ್ರ್ಯಾಕ್ಟರ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಘದ ಸದಸ್ಯ ರೈತ ಫಲಾನುಭವಿ ಮಹಾದೇವ ಶಿರೋಳ ಮತ್ತು ಸಿದಗಿರೆಪ್ಪ ಉಳ್ಳಾಗಡ್ಡಿ ಅವರಿಗೆ ಶಾಸಕ ಸಿದ್ದು ಸವದಿ ಮತ್ತು ಬಿಡಿಸಿಸಿ ಬ್ಯಾಂಕ್ ನರ್ದೇಶಕ ಬಸನಗೌಡ ಪಾಟೀಲ ಟ್ರ್ಯಾಕ್ಟರ್ ಚಾವಿ ಹಸ್ತಾಂತರಿಸಿದರು. ಇದೇ ಸಂರ್ಭದಲ್ಲಿ ಕೋವಿಡ್ನಿಂದ ಮೃತ ಪಟ್ಟ ಪಿಕೆಪಿಎಸ್ 7ಸದಸ್ಯರ ಪರಿವಾರಗಳಿಗೆ ಸರಕಾರ ಪರಿಹಾರ ನೀಡಬೇಕೆಂದು ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಪಿಕೆಪಿಎಸ್ ಅಧ್ಯಕ್ಷ ಈರಪ್ಪ ಭದ್ರಶೆಟ್ಟಿ, ನರ್ದೇಶಕರಾದ ಮಾರುತಿ ತೇಜಪ್ಪಗೋಳ, ಭೀಮಪ್ಪ ಸಸಾಲಟ್ಟಿ, ಶ್ರೀಶೈಲ ಚಿನಗುಂಡಿ, ಸದಾಶಿವ ಜಗದಾಳ, ಶ್ರೀಶೈಲ ಚಿನಗುಂಡಿ, ಯಮನಪ್ಪ ಹೋಂಕಳಿ, ಶ್ರೀಶೈಲ್ ಬ್ಯಾಕೋಡ, ಮುಖ್ಯ ಕರ್ಯನರ್ವಾಹಕ ಬಸವರಾಜ ಮರ್ಜಿ, ಅಲ್ಲಪ್ಪ ದಡ್ಡಿಮನಿ, ಹಿರಿಯರಾದ ಪರಪ್ಪ ಬ್ಯಾಕೋಡ, ಗ್ರಾಪಂ ಸದಸ್ಯ ಮಾರುತಿ ಕರೋಶಿ, ಶ್ರೀಶೈಲ ಸತ್ತಿಗೇರಿ, ಪರಪ್ಪ ಸತ್ತಿಗೇರಿ, ಪಾಪು ಉಳ್ಳಾಗಡ್ಡಿ ಮತ್ತಿತರರು ಇದ್ದರು. ಮಹಾಲಿಂಗಪುರ ಸಮೀಪದ ಕೆಸರಗೊಪ್ಪ ಗ್ರಾಮದ ಪಿಕೆಪಿಎಸ್ ವತಿಯಿಂದ ಇಬ್ಬರು ರೈತರಿಗೆ ಸಬ್ಸಿಡಿ ಟ್ರ್ಯಾಕ್ಟರ್ ವಿತರಿಸಲಾಯಿತು. ಶಾಸಕ ಸಿದ್ದು ಸವದಿ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಡಿಸಿಸಿ ಬ್ಯಾಂಕ್ ನರ್ದೇಶಕ ಬಸನಗೌಡ ಪಾಟೀಲ, ಮಹಾದೇವ ಶಿರೋಳ, ಸಿದಗಿರೆಪ್ಪ ಉಳ್ಳಾಗಡ್ಡಿ ಇದ್ದರು