ಮಹಲಿಂಗಪುರ

55 ಎಚ್‌.ಪಿ ಸಾಮರ್ಥ್ಯದ ಟ್ರ್ಯಾಕ್ಟರ್‌ಗಳ ಮುಖಾಮುಖಿ ಜಗ್ಗಾಟ ಸ್ಪರ್ಧೆ

55 ಎಚ್‌.ಪಿ ಸಾಮರ್ಥ್ಯದ ಟ್ರ್ಯಾಕ್ಟರ್‌ಗಳ ಮುಖಾಮುಖಿ ಜಗ್ಗಾಟ ಸ್ಪರ್ಧೆ

ಮಹಾಲಿಂಗಪುರ 06: ಶಿವು ವುಡ್ಸ್‌ ಇಂಡಸ್ಟ್ರೀಸ್ ಸಹಯೋಗದಲ್ಲಿ ಸಮೀಪದ ಬೆಳಗಲಿ ಪಟ್ಟಣದ ಗಜಾನನ ಗೆಳೆಯರ ಬಳಗದ ವತಿಯಿಂದ 4 ಟನ್ ಮಿತಿಯೊಳಗಿನ 55 ಎಚ್‌.ಪಿ ಸಾಮರ್ಥ್ಯದ ಟ್ರ್ಯಾಕ್ಟರ್‌ಗಳ ಮುಖಾಮುಖಿ ಜಗ್ಗಾಟ ಪ್ರಥಮ ಸ್ಪರ್ಧೆಯು ಮಂಗಳವಾರ ಸಂಜೆ ಶಿವಬಸವ ನಗರದಲ್ಲಿ ಏರ್ಪಸಿಡಲಾಗಿತ್ತು. 

ಈ ಸ್ಪರ್ಧೆಯಲ್ಲಿ ಅಂತರ್ ಜಿಲ್ಲಾ ಟ್ಯಾಕ್ಟರ್ ಸ್ಪರ್ಧೆಯಲ್ಲಿ 16 ಹವ್ಯಾಸಿ ಟ್ಯಾಕ್ಟರ್ ಮಾಲೀಕರು ಭಾಗವಹಿಸಿದ್ದರು.ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮಾಜಿ ಯೋಧ ಶ್ರೀಶೈಲ ಭಜಂತ್ರಿ ನೀಡಿದ 25ಸಾವಿರ ರೂಗಳು ಹಾಗೂ ಚಾಂಪಿಯನ್ ಪಾರಿತೋಷಕವನ್ನು ಜಮಖಂಡಿ ತಾಲೂಕಿನ ಕೊಣ್ಣೂರ್ ಗ್ರಾಮದ ಟಿಪ್ಪುಸುಲ್ತಾನ್ ಟ್ರ್ಯಾಕ್ಟರ್ ಪಡೆಯಿತು.ಅದೇ ರೀತಿ ದ್ವಿತೀಯ ಸ್ಥಾನ ಇಂಗಳಗಿ ಗ್ರಾಮದ ಜೈ ಹನುಮಾನ್ ಟ್ರ್ಯಾಕ್ಟರ್ ನಗದು 20ಸಾವಿರ, ತೃತಿಯ ಸ್ಥಾನ ಅವರಾದಿ ಗ್ರಾಮದ ದಾದಾ ಹುಲಿ ಟ್ರ್ಯಾಕ್ಟರ್ ನಗದು 15ಸಾವಿರ, ಚತುರ್ಥ ಆಲಕನೂರ ಗ್ರಾಮದ ಕರಿಸಿದ್ದೇಶ್ವರ ಟ್ರ್ಯಾಕ್ಟರ್ ನಗದು 10ಸಾವಿರ, ಪಂಚಮ ನಗದು 5 ಸಾವಿರ ಮಾಚಕನೂರ ಗ್ರಾಮದ ಹುಲಿ ಟ್ರ್ಯಾಕ್ಟರ್ ಹೀಗೆ ಪಾರಿತೋಷಕಗಳೊಂದಿಗೆ ಬಹುಮಾನಗಳನ್ನು ಪಡೆದವು. 

ಈ ಪಂದ್ಯಾವಳಿಯ ಕಾರ್ಯಕ್ರಮದಲ್ಲಿ ಭಾರತೀಯ ಮಾಜಿ ಯೋಧ ಶ್ರೀಶೈಲ ಭಜಂತ್ರಿ, ಕಿಶೋರಬೈ ಪಟೇಲ್, ಶಂಕರ್ ಗುಳೇದ, ಲಕ್ಷ್ಮಣ ಮಟಗಾರ, ಯಲ್ಲಪ್ಪ ನಜರ್, ಮೆಹಬೂಬ ಸಿಂದಗಿ, ನಾರಾಯಣ ದಂಡಿನ್, ಮುತ್ತಪ್ಪ, ಅಶೋಕ್, ಪ್ರಕಾಶ್, ಸಣ್ಣಟ್ಟಿ, ಬೀರ​‍್ಪ ಕುಂಬಾಳೆ, ಅಡಿವೆಪ್ಪ ಕುಂಬಾಳೆ, ಶ್ರೀಶೈಲ ಪೂಜಾರಿ, ಗುರು ಗುಳೇದ, ಮಹಾಂತೇಶ್ ಕಂಜಾರ, ಸುರೇಶ್ ರಬಕವಿ, ಗಜು ಅಮಾತಿ, ಬಂದಕನವರ್, ಸುಭಾಸ ಹಂಜಿ, ರಾಮನಗೌಡ ಪಾಟೀಲ, ಇಸ್ಮಾಯಿಲ್ ಇದ್ದರು. ಶಿಕ್ಷಕ ಶಂಕರ ಹಾದಿಮನಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ