ಹಗರಿಬೊಮ್ಮನಹಳ್ಳಿ

ವಿದ್ಯುತ್ ಕಂಬಕ್ಕೆ ಟ್ರ್ಯಾಕ್ಟರ್ ಡಿಕ್ಕಿ : ತಪ್ಪಿದ ಭಾರಿ ಅನಾಹುತ

ವಿದ್ಯುತ್ ಕಂಬಕ್ಕೆ ಟ್ರ್ಯಾಕ್ಟರ್ ಡಿಕ್ಕಿ : ತಪ್ಪಿದ ಭಾರಿ ಅನಾಹುತ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ.ನ.20 : ಪಟ್ಟಣದ 17ನೇ ವಾರ್ಡ್‌ನ ಮಿಲಿಟರಿ ಬಯಲಿನಲ್ಲಿರುವ ವಿದ್ಯುತ್ ಕಂಬಕ್ಕೆ ಟ್ರ್ಯಾಕ್ಟ್‌ರ್ ಡಿಕ್ಕಿ ಹೊಡೆದ ಪರಿಣಾಮ ಭಾರಿ ಅನಾಹುತ ತಪ್ಪಿದ್ದು ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. 

ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ತಪ್ಪಿಸಿಕೊಳ್ಳುಲು ಚಾಲಕ ಲೋಡ್ ಅಗಿರುವ ಟ್ರ್ಯಾಕ್ಟ್‌ರ್ ಬಿಟ್ಟು ಆಸರೆ ಪಡೆಯುವುದಕ್ಕೆ ಮುಂದಾದಾಗ, ಇಳಿಜಾರು ಪ್ರದೇಶವಾಗಿದ್ದರಿಂದ ಟ್ರ್ಯಾಕ್ಟರ್ ಸಾಗಿ ಕಂಬಕ್ಕೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ, ಈ ಟ್ರ್ಯಾಕ್ಟ್‌ರ್‌ಗೆ ನಂಬರ್ ಇಲ್ಲದಿರುವುದು ಕಾಣಬಹುದಾಗಿದೆ.ಕಂಬ ಬಾಗಿದ್ದು ನಿವಾಸಿಗಳು ಆತಂಕಕ್ಕೊಳಗಾಗಿದ್ದು ಜೆಸ್ಕಾಂ ಇಲಾಖೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರೀಶೀಲನೆ ಮಾಡಿದ್ದು ಕೂಡಲೇ ಕಂಬವನ್ನು ತೆರವುಗೊಳಿಸಿ ನೂತನ ಕಂಬ ಹಾಕಲಾಗುವುದು ಎಂದು ತಿಳಿಸಿದ್ದಾರೆ. 

ಅಲ್ಲಿನ ನಿವಾಸಿಗಳು ಚಾಲಕನಿಗೆ ಹಿಡಿಶಾಪ ಹಾಕುತ್ತಾ ಪ್ರತಿದಿನ ಅಕ್ಕ ಪಕ್ಕದ ಮನೆಯ ಮಕ್ಕಳೆಲ್ಲ ಇಲ್ಲಿಯೇ ಅಟವಾಡುತ್ತಿದ್ದರು ಆದರೆ ಮಳೆಯ ಪರಿಣಾಮ ಕಂಬದ ಬಳಿ ಯಾವ ಮಕ್ಕಳು ಇಲ್ಲದಿರುವುದು ನಮ್ಮ ಪುಣ್ಯವಾಗಿದೆ ಎಂದು ನಿವಾಸಿಗಳು ಮಾತಾಡಿಕೊಳ್ಳುತ್ತಿದ್ದರು. 

ಲೋಕದರ್ಶನ ವರದಿ 


ಸುದ್ದಿ ಓದಿ