ಬಳ್ಳಾರಿ

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರ ಪ್ರವಾಸ ಕಾರ್ಯಕ್ರಮ

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರ ಪ್ರವಾಸ ಕಾರ್ಯಕ್ರಮ

ಬಳ್ಳಾರಿ,ನ.24:ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್‌.ಚಲುವರಾಯಸ್ವಾಮಿ ಅವರು, ನ.28 ಮತ್ತು 29ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ನ.28ರಂದು ಮಧ್ಯಾಹ್ನ 03.05 ಕ್ಕೆ ಬೆಂಗಳೂರಿನಿಂದ ವಾಯುಮಾರ್ಗದ ಮೂಲಕ 04.10ಕ್ಕೆ ತೋರಣಗಲ್ಲಿಗೆ ಆಗಮಿಸುವರು. ಅಲ್ಲಿಂದ 04.15ಕ್ಕೆ ಹೊರಟು, 04.40ಕ್ಕೆ ಸಂಡೂರು ತಾಲ್ಲೂಕಿನ ಕೋಡಾಲು ಮತ್ತು ರಾಜಾಪುರ ಗ್ರಾಮ ವ್ಯಾಪ್ತಿಯ ಹತ್ತಿ, ನವಣೆ ಮತ್ತು ಸಜ್ಜೆ ಬೆಳೆ ಹಾನಿ ಹಾಗೂ ಬರ ಪರಿಸ್ಥಿತಿ ವೀಕ್ಷಣೆ ನಡೆಸುವರು. ಸಂಜೆ 06ಕ್ಕೆ ತೋರಣಗಲ್ಲಿನ ಜಿಂದಾಲ್ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು. ನ.29ರಂದು ಬೆಳಿಗ್ಗೆ 09 ಗಂಟೆಗೆ ಹೊರಟು, 09.30ಕ್ಕೆ ಬಳ್ಳಾರಿ ತಾಲ್ಲೂಕು ವ್ಯಾಪ್ತಿಯ ಬೆಳಗಲ್ಲು ಮತ್ತು ಹಲಕುಂದಿ ಗ್ರಾಮ ವ್ಯಾಪ್ತಿಯ ತೊಗರಿ ಮತ್ತು ಸಜ್ಜೆ ಬೆಳೆ ಹಾನಿ ಹಾಗೂ ಬರ ಪರಿಸ್ಥಿತಿ ವೀಕ್ಷಣೆ ಮಾಡುವರು. 

ನಂತರ ಬೆಳಿಗ್ಗೆ 10.30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲೆಯ ಕೃಷಿ ಇಲಾಖೆಯ ಪ್ರಗತಿ ಪರೀಶೀಲನಾ ಸಭೆ ನಡೆಸುವರು. ಬಳಿಕ 11.30ಕ್ಕೆ ಪತ್ರಿಕಾಗೋಷ್ಠಿ ನಡೆಸುವರು. ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ಹಾಗೂ ಕಾರ್ಯಕರ್ತರ ಅಹವಾಲು ಆಲಿಸುವರು. ನಂತರ ಮಧ್ಯಾಹ್ನ 12.30 ಕ್ಕೆ ಬಳ್ಳಾರಿಯಿಂದ ನಿರ್ಗಮಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಅವರು ತಿಳಿಸಿದ್ದಾರೆ. 

------ 

ಸಕ್ರಿಯ ಕ್ಷಯರೋಗ ಪತ್ತೆ ಚಿಕಿತ್ಸಾ ಆಂದೋಲನ ಯಶಸ್ವಿಗೆ ಸಹಕರಿಸಿ: ಡಿಹೆಚ್‌ಒ ಡಾ.ವೈ ರಮೇಶ್‌ಬಾಬು  

ಬಳ್ಳಾರಿ,ನ.24:ಮೈಕ್ರೋ ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್ ಎಂಬ ರೋಗಾಣುನಿಂದ ಹರಡುವ ಕ್ಷಯರೋಗವನ್ನು ನಿರ್ಮೂಲನೆ ಮಾಡಲು, ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದ ಸಂದರ್ಭದಲ್ಲಿ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿಗೆ ದಯವಿಟ್ಟು ಮಾಹಿತಿ ನೀಡಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶ್ ಬಾಬು ಅವರು ಹೇಳಿದರು. 

ಯಾರಿಗಾದರೂ ಎರಡು ವಾರಗಳಿಗಿಂತ ಹೆಚ್ಚು ದಿನದ ಕೆಮ್ಮು, ಉಸಿರಾಟದಲ್ಲಿ ತೊಂದರೆ, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಮೈ ಬೆವರುವುದು, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಹಸಿವಾಗದಿರುವುದು, ತೂಕ ಇಳಿಕೆ, ರೋಗದ ಪ್ರಮುಖ ಲಕ್ಷಣಗಳಿದ್ದಲ್ಲಿ ತಕ್ಷಣ ಕಫ ಪರೀಕ್ಷೆ ಕೈಗೊಂಡು ಸೂಕ್ತ ಚಿಕಿತ್ಸೆ ಪಡೆಯಲು ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿ ಸಮೀಕ್ಷೆಯ  ಸಂದರ್ಭದಲ್ಲಿ ಜೀವಿತ್ ಎಂಟರ್‌ಪ್ರೈಸಸ್ ವತಿಯಿಂದ ಬಹು ಓಷಧಿ ರೋಗ ನಿರೋಧಕ (ಎಂಡಿಆರ್ ಟಿಬಿ ರೋಗಿ) ಓಷಧಿಯ ಚಿಕಿತ್ಸೆ ಪಡೆಯುತ್ತಿರುವ 60 ಜನ  ಕ್ಷಯರೋಗಿಗಳಿಗೆ ಚಿಕಿತ್ಸಾ ಅವಧಿ ಮುಗಿಯುವವರೆಗೆ ಪೌಷ್ಟಿಕಾಂಶವುಳ್ಳ ಕಿಟ್ ವಿತರಣೆ ಮಾಡಿ, ಅವರು ಮಾತನಾಡಿದರು. 

ಪ್ರಸ್ತುತ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದಡಿ 3,10,963 ಜನರನ್ನು ತಪಾಸಣೆಯ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ 2,44,103 ಜನರ ತಪಾಸಣೆ ಮಾಡಲಾಗಿದೆ, ಇವರಲ್ಲಿ ರೋಗಲಕ್ಷಣವುಳ್ಳ 1926 ಜನರ ಕಫ ಪರೀಕ್ಷೆ ಮಾಡಿದ್ದು, 24 ಜನರಿಗೆ ಕ್ಷಯರೋಗವಿರುವುದು ದೃಢಪಟ್ಟಿದ್ದು, ಇವರಿಗೆ ಚಿಕಿತ್ಸೆ ಆರಂಭಿಸಲಾಗಿದೆ ಎಂದು ತಿಳಿಸಿದರು.  

ಕಫದಲ್ಲಿ ಪರೀಕ್ಷೆ ಮೂಲಕ ಕ್ಷಯರೋಗ ಪತ್ತೆಯಾದಾಗ ಆರು ತಿಂಗಳ ಕಾಲ ಚಿಕಿತ್ಸೆ ನೀಡಲಾಗುವುದು. ಒಂದು ವೇಳೆ ಕ್ಷಯರೋಗಿಯು ಚಿಕಿತ್ಸೆ ನಿರ್ಲಕ್ಷಿಸಿದರೆ, ಮಧ್ಯದಲ್ಲಿ ಚಿಕಿತ್ಸೆ ಬಿಟ್ಟಲ್ಲಿ  ಬಹು ಓಷಧಿ ರೋಗ ನಿರೋಧಕ ಕ್ಷರ ರೋಗದಲ್ಲಿ 18 ತಿಂಗಳಿನಿಂದ 24 ತಿಂಗಳ ಕಾಲ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ ಎಂದು ಡಾ.ರಮೇಶ್ ಬಾಬು ಅವರು ವಿವರಿಸಿದರು. 

ವಿಶೇಷವಾಗಿ ಕ್ಷಯರೋಗ ಚಿಕಿತ್ಸೆ ಪಡೆಯುತ್ತಿರುವರಿಗೆ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವುದರಿಂದ ಕುಟುಂಬದ ಮುಖ್ಯ ವ್ಯಕ್ತಿಯು ದುಡಿಮೆ ಇಲ್ಲದೆ ಕುಟುಂಬ ಆರ್ಥಿಕ ತೊಂದರೆ ಈಡಾಗುವ ಪರಿಸ್ಥಿತಿ ಬರುತ್ತದೆ. ಇಂಥ ಸಂದರ್ಭದಲ್ಲಿ  ಪೂರಕ ಪೌಷ್ಟಿಕ ಆಹಾರದ ಅವಶ್ಯಕತೆ ಇದ್ದು, ದಾನಿಗಳಾಗಿ ಮುಂದೆ ಬಂದು ಕ್ಷಯರೋಗಿಗಳನ್ನು ನಿರ್ದಿಷ್ಟ ಅವಧಿಯೊಳಗೆ ರೋಗವನ್ನು ಗುಣಪಡಿಸುವ ಕಾರ್ಯದಲ್ಲಿ ಕೈಜೋಡಿಸಿ, ಜಿಲ್ಲೆಯನ್ನು ಕ್ಷಯಮುಕ್ತ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡಲು ಭಾಗಿಯಾಗಬೇಕಿದೆ ಎಂದು ವಿನಂತಿಸಿದರು. 

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ ಅವರು ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 55 ದಾನಿಗಳಿಂದ 611 ಜನರಿಗೆ 1878 ಪೌಷ್ಠಿಕ ಆಹಾರ ಕಿಟ್‌ಗಳನ್ನು ಒದಗಿಸಲಾಗಿದೆ. ವಿಶೇಷವಾಗಿ ಸಂಡೂರು ತಾಲೂಕಿನಲ್ಲಿ ಗಣಿಬಾಧಿತ ಹಾಗೂ ಕಾರ್ಖಾನೆಗಳು ಹೊಂದಿರುವ  ಪ್ರದೇಶವಾಗಿರುವುದರಿಂದ ಸಂಡೂರು ತಾಲ್ಲೂಕಿನ ಎಲ್ಲ 162 ರೋಗಿಗಳನ್ನು ಬಿಕೆಜಿ, ಶ್ರೀ ಕುಮಾರಸ್ವಾಮಿ ಮೈನಿಂಗ್ ಮತ್ತು  ಮಿನರಲ್ ಕಂಪನಿ ದತ್ತು ತೆಗೆದುಕೊಂಡಿರುತ್ತಾರೆ ಎಂದು ತಿಳಿಸಿದ ಅವರು, ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಸಹ ದತ್ತು ತೆಗೆದುಕೊಳ್ಳಲು ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದು ವಿನಂತಿಸಿದರು. 

ಈ ಸಂದರ್ಭದಲ್ಲಿ ಡಬ್ಲ್ಯೂಹೆಚ್‌ಓ ಪ್ರತಿನಿಧಿಗಳಾದ ಡಾ.ಹಂಸವೇಣಿ, ಡಾ.ಸಂಗೀತಾ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್,  ರಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ..ಬಸವರಾಜ್, ಜೀವಿತ್ ಎಂಟಪ್ರೈಸಸ್ ಅಧಿಕಾರಿಗಳಾದ ಹೊನ್ನೇಶ್ ಮತ್ತು ರಮೇಶ್, ಜಿಲ್ಲಾ ಪ್ರತಿನಿಧಿ ಚಂದ್ರಶೇಖರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ.ಹೆಚ್  ದಾಸಪ್ಪನವರ ಹಾಗೂ ವಿಭಾಗದ ಡಿಪಿಎಸ್ ಗೂಡದಯ್ಯ, ಟಿಬಿಎಚ್‌ವಿ ಪುಷ್ಪಾವತಿ, ರಾಮಾಂಜಿನೇಯ ಸೇರಿದಂತೆ ಇತರರು ಹಾಜರಿದ್ದರು. 

------ 

ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ನ.27 ರಂದು 

ಬಳ್ಳಾರಿ,ನ.24 :ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯಲ್ಲಿನ 220 ಕೆ.ವಿ ಅಲ್ಲೀಪುರ-ಸ್ವೀಕರಣಾ ಕೇಂದ್ರದಲ್ಲಿ 220 ಕೆ.ವಿ ಮಾರ್ಗದ ಉಪಕರಣಗಳನ್ನು ಪರೀಕ್ಷಿಸುವ ಕಾಮಗಾರಿ ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ, 220ಕೆ.ವಿ. ಅಲ್ಲಿಪುರ ಸ್ವೀಕರಣ ಕೇಂದ್ರದಿಂದ ಸಂಪರ್ಕ ಹೊಂದಿರುವ 110/33/11ಕೆ.ವಿ ಉಪ-ಕೆಂದ್ರಗಳು ಮತ್ತು ಉಪ-ಕೇಂದ್ರಗಳಿಂದ ಹೊರಹೊಮ್ಮುವ ಎಲ್ಲಾ 33/11ಕೆ.ವಿ ಮಾರ್ಗಗಳಲ್ಲಿ ನ.27 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಮೋಹನಬಾಬು ಅವರು ತಿಳಿಸಿದ್ದಾರೆ. 

*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* 110/11 ಕೆ.ವಿ ವಿದ್ಯುತ್ ಉಪಕೇಂದ್ರಗಳಾದ ದಕ್ಷಿಣ, ಉತ್ತರ, ಹಲಕುಂದಿ, ಮೀನಹಳ್ಳಿ, ಬಿಸಿಲಹಳ್ಳಿ, ಮೋಕ, ಶ್ರೀಧರಗಡ್ಡೆ ಮತ್ತು ಕುರುಗೋಡು. 33/11ಕೆ.ವಿ ವಿದ್ಯುತ್ ಉಪಕೇಂದ್ರಗಳಿಂದ ಗುಡದೂರು, ಎಮ್ಮಿಗನೂರು, ರೂಪನಗುಡಿ, ಯರ‌್ರಗುಡಿ ಹಾಗೂ 220/11 ಕೆ.ವಿ.ಯ ಅಲ್ಲಿಪುರ ಸ್ವೀಕರಣಾ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

------- 

ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯ ನ.27ರಂದು 

ಬಳ್ಳಾರಿ,ನ.24:ಬಳ್ಳಾರಿ ನಗರ ಜೆಸ್ಕಾಂ ವ್ಯಾಪ್ತಿಯಲ್ಲಿ 220/110/11 ಕೆವಿ ಅಲ್ಲೀಪುರ ವಿದ್ಯುತ್ ಉಪಕೇಂದ್ರದಲ್ಲಿ ವಿದ್ಯುತ್ ಲೈನುಗಳ ನಿರ್ವಹಣೆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ನ.27ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ಸಹಾಯಕ ಇಂಜಿನಿಯರ್ ಅಶೋಕ ರೆಡ್ಡಿ ಅವರು ತಿಳಿಸಿದ್ದಾರೆ. 

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: 

ಎಫ್‌-1 ಫೀಡರ್‌ನ ಕಪ್ಪಗಲು ರಸ್ತೆ, ಸಿದ್ದಾರ್ಥ ನಗರ ಕಾಲೋನಿ, ಹೌಸಿಂಗ್ ಬೋರ್ಡ್‌, ಬೀಚಿನಗರ, ಕೆ.ಇ.ಬಿ. ಕ್ವಾಟರ್ಸ್‌, ಭಗತ್‌ಸಿಂಗ್ ನಗರ, ಹೆಚ್‌ಡಿಎಫ್‌ಸಿ ಬ್ಯಾಂಕ್, ಎಸಿ ಸ್ಟ್ರೀಟ್, ಬಾಲಾಜಿ ನರ್ಸಿಂಗ್ ಹೋಮ್, ಲಾ ಕಾಲೇಜು, ಮುಲ್ಲಂಗಿ ಲೇಓಟ್, ಕನಕದುರ್ಗ ಲೇಓಟ್‌. 

ಎಫ್‌-2 ಫೀಡರ್‌ನ ಗಾಂಧಿನಗರ, ಬಿ.ಎಸ್‌.ಕೌಪೌಂಡ್, ಎರಿ​‍್ರತಾತ ನಗರ, ಸೆಂಟ್ರಲ್‌ಜೈಲ್, ಪಾರ್ವತಿ ನಗರ, ಮಾರುತಿ ಕಾಲೋನಿ, ಮೋಕ ರಸ್ತೆ, ಸೊಂತಲಿಂಗಣ್ಣ ಕಾಲೋನಿ, ರೈಲ್ವೆ ಸ್ಟೇುಷನ್, ಎಸ್‌.ಪಿ. ಬಂಗ್ಲೆ, ಮಹಿಳಾ ಕಾಲೇಜು ರಸ್ತೆ,  ಗಾಂಧಿನಗರ, ಸೂರ್ಯಕಾಲೋನಿ. 

ಎಫ್‌-7 ಫೀಡರ್‌ನ ಸಂಗನಕಲ್ಲು ರಸ್ತೆ, ಎಸ್‌.ಎನ್‌.ಪೇಟ್ 3ನೇ ಕ್ರಾಸ್, ಜಿಲ್ಲಾ ಆಸ್ಪತ್ರೆ, ರಾಘವ ಕಲಾಮಂದಿರ, ಅನಂತಪುರ ರಸ್ತೆ, ವಡ್ಡರ ಬಂಡೆ, ಅಗಡಿ ಮಾರೆಪ್ಪ ಕಾಂಪೌಂಡ್, ರೂಪನಗುಡಿ ರಸ್ತೆ, ಮುಬರಕ್ ಟಾಕೀಸ್, ಬಾಲಾಜಿರಾವ್ ರಸ್ತೆ, ಕೆ.ಸಿ.ರೋಡ್, ಮೀನಾಕ್ಷಿ ಸರ್ಕಲ್, ಬೆಂಗಳೂರು ರಸ್ತೆ, ದುಗ್ಗಪ್ಪ ಬೀದಿ, ರೆಡ್ಡಿ ಬೀದಿ, ಆಲ್ಲಂ ಬೀದಿ, ಮುಲ್ಲಂಗಿ ಸಂಜೀವಪ್ಪ ಬೀದಿ, ರೂಪನಗುಡಿ ನರ​‍್ಪ ಬೀದಿ, ತಾಯಮ್ಮಕಟ್ಟೆ. 

ಎಫ್‌-8 ಫೀಡರ್‌ನ ಬಸವೇಶ್ವರ ನಗರ, ಎಂ.ಅರ್‌.ವಿ. ಲೇಓಟ್, ಸದ್ಗುರು ಕಾಲೋನಿ, ರೇಣುಕಾಚಾರ್ಯ ನಗರ, ಅಲ್ಲಂ ಲೇಓಟ್, ಬಿ.ಎಂ.ಎಸ್ ಲೇಓಟ್, ತಿರುಮಲ ಲೇಓಟ್, ಹರಿಪ್ರಿಯ ನಗರ, ಸುಷ್ಮಸ್ವರಾಜ್ ಕಾಲೋನಿ. 

ಎಫ್‌-14 ಫೀಡರ್‌ನ ಗಣೇಶ ಕಾಲೋನಿ, ಸಿದ್ಗಿಕಾಲೋನಿ, ಗೊಲ್ಲನರಸಪ್ಪ ಕಾಲೋನಿ, ಎಂಎಂಟಿಸಿ ಕಾಲೋನಿ, ಮಾರುತಿ ನಗರ, ಹುಸೇನ ನಗರ, ರಾಮಯ್ಯ ಕಾಲೋನಿ, ರಾಘವೇಂದ್ರ ಕಾಲೋನಿ 1ನೇ ಹಂತ, ಅನಂತಪುರ ರಸ್ತೆ, ಪಟೇಲ್ ನಗರ, ಹದ್ದಿನಗುಂಡು ರಸ್ತೆ, ಎಸ್‌.ಎನ್‌.ಪೇಟೆ 1ನೇ, 2ನೇ ಅಡ್ಡರಸ್ತೆ, ವಿಶಾಲ ನಗರ, ದತ್ತಸಾಯಿ ನಗರ, ಹನುಮಾನ್ ನಗರ, ಎಚ್‌.ಎಲ್‌.ಸಿ ಕಾಲೋನಿ. 

ಎಫ್‌-9 ಫೀಡರ್‌ನ ನೆಹರು ಕಾಲೋನಿ 1ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, ಶಂಕರ್ ಕಾಲೋನಿ, ಎಸ್‌.ಎನ್‌.ಪೇಟೆ 6ನೇ, 5ನೇ ಮತ್ತು 4ನೇ, 3ನೇ ಅಡ್ಡರಸ್ತೆ, ಡಿಅರ್ ಗ್ರೌಂಡ್, ಕೂಲ್ ಕಾರ್ನರ್, ಡಬಲ್ ರಸ್ತೆ, ಕೋಲಾಚಾಲಂ ಕಾಂಪೌಂಡ್, ರಾಯಲ್ ಸರ್ಕಲ್, ಗಾಂಧಿ ಭವನ, ಸಿಎಂಸಿ, ಅಂಬಲಿ ಬಾಗ್, ತಾಲೂಕು ಕಚೇರಿ, ಡಿಸಿ ಕಚೇರಿ. ಎಫ್‌-12 ಫೀಡರ್‌ನ ನಿಜಲಿಂಗಪ್ಪ ಕಾಲೋನಿ, ಲಲಿತಾ ಲೇಓಟ್, ಗೊಲ್ಲರ ನರಸಪ್ಪ ಕಾಲೋನಿ, ರಾಘವೇಂದ್ರ ಕಾಲೋನಿ 2ನೇ ಹಂತ, ದೀಪಕ್ ಕಾಲೋನಿ, ಕೆವಿಟಿ ನಗರ, ವೆಂಕಟೇಶ್ವರ ನಗರ, ಅನಂತಪುರ ರಸ್ತೆ, ಶೇಕ್ಷಾವಲಿ ದರ್ಗಾ, ಕುಬೇರ ಲೇಓಟ್‌. ಎಫ್‌-13 ಫೀಡರ್ ಏರಿಯಾಗಳಾದ ದೇವಿನಗರ, ಸಿರುಗುಪ್ಪಾ ರಸ್ತೆ, ಇಂದಿರಾ ನಗರ, ಸಂಜಯನಗರ, ಶಿವಲಿಂಗ ನಗರ, ಶಾಸ್ತ್ರೀನಗರ, ಬಸವನಕುಂಟೆ, ಎಂ.ಕೆ.ನಗರ, ಹವಂಬಾವಿ, ಅಶೋಕ ನಗರ, ಶ್ರೀನಿವಾಸ ನಗರ, ಕುರಿಹಟ್ಟಿ, ಎಸ್‌.ಪಿ. ಸರ್ಕಲ್, ವೀರಣ್ಣಗೌಡ ನಗರ, ರಾಜೇಶ್ವರಿ ನಗರ, ಕೆ.ಎಂ.ಎಫ್, ಭುವನಗಿರಿ ಕಾಲೋನಿ, ಎಸ್‌.ಎಲ್‌.ವಿ ಕಾಲೋನಿ, ಶಿವಗಿರಿ ಕಾಲೋನಿ, ರಾಮನಗರ, ಶ್ರೀನಿವಾಸ ನಗರ. ಸೂರ್ಯ ಕಾಲೋನಿ. 

ಎಫ್‌-10 ಫೀಡರ್ ಏರಿಯಾ ವಾಟರ್ ಬೂಸ್ಟರ್‌. 

ಎಫ್‌-11 ಫೀಡರ್ ಏರಿಯಾಗಳಾದ ರಾಘವೇಂದ್ರ ಕಾಲೋನಿ 2ನೇ ಹಂತ, ಅಯ್ಯಪ್ಪ ಸ್ವಾಮಿ ಕಾಲೋನಿ, ಇಂಟೋರಿ ನಗರ್, ಅನಂತಪುರ ರೋಡ್, ಶೇಕ್ಷವಲಿ ದರ್ಗಾ, ತಾರಾನಾಥ ಆಸ್ಪತ್ರೆ. 

ಎಫ್‌-4 ಫೀಡರ್ ಏರಿಯಾಗಳಾದ ಆಟೋ ನಗರ, ಎಸ್‌.ಆರ್‌.ಎಮ್ ಲೇಓಟ್, ಕನಕದಾಸ್ ನಗರ, ಕೆ.ಎ.ಐ.ಡಿ.ಬಿ ಕೈಗಾರಿಕಾ ಪ್ರದೇಶ ಸೇರಿದಂತೆ ಇನ್ನೂ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ. 

------ 

ನ.27ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ 

ಬಳ್ಳಾರಿ:ನಗರ ಜೆಸ್ಕಾಂ ಉಪವಿಭಾಗ-1ರ 220/11ಕೆ.ವಿ ವ್ಯಾಪ್ತಿಯಲ್ಲಿ ಅಲ್ಲಿಪುರ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬ್ಯಾಂಕ್‌-2 ಮೇಲೆ ಇರುವ ಫೀಡರ್‌ಗಳ ಸಿ.ಟಿಗಳನ್ನು ಬದಲಾಯಿಸುವ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನ.27ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಎಫ್‌-34, ಎಫ್‌-36, ಎಫ್‌-40, ಎಫ್‌-62, ಎಫ್‌-75, ಎಫ್‌-76, ಎಫ್‌-77 ಮತ್ತು ಎಫ್‌-39 ಫೀಡರ್‌ಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಇಂಜಿನಿಯರ್ ಅಶೋಕ ರೆಡ್ಡಿ ಅವರು ತಿಳಿಸಿದ್ದಾರೆ. 

*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು:* 

ರೂಪನಗುಡಿ, ಗ್ರಾಂಡ್ ಫಂಕ್ಷನ್ ಹಾಲ್, ವೆಂಕಟರಮಣ ನಗರ, ನಬೀ ಕಾಲೋನಿ, ಅಂಜಿನಪ್ಪ ನಗರ, ಶ್ರೀರಾಂಪುರ ಕಾಲೋನಿ, ಗೋನಾಳ್, ವರಬಸಪ್ಪ ಗುಡಿ, ವಿನಾಯಕ ನಗರ, ಕಾಂಟೋನ್‌ಮೆಂಟ್, ಐಶ್ವರ್ಯ ಕಾಲೋನಿ, ಐಟಿಐ ಕಾಲೇಜ್, ರೇಡಿಯೋ ಪಾರ್ಕ್‌, ಕೌಲ್‌ಬಜಾರ್ ಮೇನ್ ರೋಡ್, ಟೈಲರ್ ಬೀದಿ, ಕುವೆಂಪು ನಗರ, ಜಯನಗರ, ಚಂದ್ರ ಕಾಲೋನಿ, ರಾಮಾಂಜನೇಯ ನಗರ, ಸಿ.ಎಮ್‌.ಸಿ ಕಾಲೋನಿ, ಎಕ್ಸ್‌ ಸರ್ವಿಸ್‌ಮೆನ್ ಕಾಲೋನಿ, ಅರಣ್ಯ ಕ್ವಾಟರ್ಸ್‌, ಜಾಗೃತಿ ನಗರ, ಟ್ರಾಮಾ ಕೇರ್ ಸೆಂಟರ್, ವಿಮ್ಸ್‌ ಆಸ್ಪತ್ರೆ, ಜಲ ಶುದ್ದೀಕರಣ ಕೇಂದ್ರ, ಕೊಳಗಲ್ಲು ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 

ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

------ 

ವಿದ್ಯುತ್ ವ್ಯತ್ಯಯ ನ.27ರಂದು  

ಬಳ್ಳಾರಿ,ನ.24: 

ನಗರ ಜೆಸ್ಕಾಂ ಉಪವಿಭಾಗ-1ರ ವ್ಯಾಪ್ತಿಗೆ ಬರುವ 110/11ಕೆ.ವಿ ಸೌತ್ ವಿದ್ಯುತ್ ವಿತರಣ ಕೇಂದ್ರ ದಿಂದ ವಿದ್ಯಾತ್ ಸರಬರಾಜು ಆಗುವ ಎಫ್‌-23, ಎಫ್‌-24, ಎಫ್‌-25, ಎಫ್‌-46, ಎಫ್‌-47 ಮತ್ತು ಎಫ್‌-48 ಫೀಡರ್‌ಗಳ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನ.27ರಂದು ಬೆಳಿಗ್ಗೆ 11ರಿಂದ ಸಂಜೆ 04ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 

*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು:* 

ಬೆಂಗಳೂರು ರಸ್ತೆ, ಅಂದ್ರಾಳ್ ರಸ್ತೆ, ಕೊಲ್ಮಿ ಚೌಕ್, ಕಾರ್ಕಲ ತೋಟ, ಬಾಪೂಜಿ ನಗರ, ಮಿಲ್ಲರ್ ಪೇಟೆ, ಮೋತಿ ವೃತ್ತ, ತೇರು ಬೀದಿ, ಇಂಡಸ್ಟ್ರಿಯಲ್‌ಏರಿಯಾ ಹಂತ-1, ಮಹೇಶ್ ಪೈಪ್ಸ್‌, ಲಾರಿಟರ್ಮಿನಲ್, ಜೈನ್ ಮಾರ್ಕೆಟ್, ಸಾಯಿ ಕಾಲೋನಿ, ಎಪಿಎಮ್‌ಸಿ, ರಾಣಿತೋಟ, ಮರಿಸ್ವಾಮಿ ಮಠ, ದೊಡ್ಡ ಮಾರ್ಕೆಟ್, ತೋಪಿಗಲ್ಲಿ, ಬೊಮ್ಮನಾಳ್ ರೋಡ್ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ