ನಾಳೆ ದಿ. ೧೦ ರಂದು ವಾಸವಿ ಕಲ್ಯಾಣ ಮಂಟಪದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ
ಮಹಾಲಿಂಗಪುರ 09: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ 1988-89 ನೇ ಸಾಲಿನ sslc ಸಹಪಾಠಿಗಳಿಂದ ಶನಿವಾರ ಮುಂಜಾನೆ 10 ಗಂಟೆಗೆ ಗುರುವಂದನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಲಿದೆ.
ಈಗಾಗಲೇ ಪಟ್ಟಣದ ವಾಸವಿ ಕಲ್ಯಾಣ ಮಂಟಪ ಭವ್ಯವೇದಿಕೆಯೊಂದಿಗೆ ನವ ವಧುವಿನಂತೆ ಶೃಂಗಾರಗೊಂಡಿದೆ. ಈ ಕಾರ್ಯಕ್ರಮದಲ್ಲಿ ಅಂದು ಗುರುಭೋದೆ ನೀಡಿದ ಶಿಕ್ಷಕ ವೃಂದ ಭಾಗವಹಿಸಿ ಹಳೆಯ ವಿದ್ಯಾರ್ಥಿಗಳ ಕುರಿತು ಆಶೀರ್ವಚನ ನೀಡಲಿದ್ದು ಮತ್ತು ಇದೆ ಸಂದರ್ಭದಲ್ಲಿ ವಿಧ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಲಿ ಎಂದು ನಿಷ್ಕಲ್ಮಶ ಮನಸ್ಸಿನಿಂದ ವಿದ್ಯೆಯನ್ನು ಧಾರೆ ಎರೆದ ಎಲ್ಲ ಶಿಕ್ಷಕ ವೃಂದವನ್ನು ಸತ್ಕರಿಸಿ ಗೌರವಿಸಲಾಗುತ್ತದೆ.
34 ವರ್ಷಗಳ ನಂತರ ಅಪರೂಪವಾಗಿ ಬಣ್ಣ ಬಣ್ಣದ ದಿರಿಷಿನೊಂದಿಗೆ ಸಹಪಾಠಿಗಳು ಪಾಲ್ಗೊಂಡು ತಮ್ಮ ಜೀವನದ ಅನುಭವಾಮೃತವನ್ನು ಪರಸ್ಪರ ಹಂಚಿಕೊಂಡು, ಸ್ವ- ಗಾಯನಗಳೊಂದಿಗೆ ವಿವಿಧ ರೀತಿಯ ಸಭಾಕರ್ಷಣೀಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿ, ಶಿಕ್ಷಕ ಬಳಗ ಮತ್ತು ಗೆಳೆಯ,ಗೆಳತಿಯರನ್ನು ರಂಜಿಸಲಿದ್ದಾರೆ. ನಂತರ ಮಧ್ಯಾಹ್ನ ಮೃಷ್ಟಾನ ಭೋಜನ ಸವಿದು ಸಮೂಹ ಭಾವಚಿತ್ರದೊಂದಿಗೆ ಕಾರ್ಯಕ್ರಮಕ್ಕೆ ಮಂಗಲ ಹಾಡಲಿದ್ದಾರೆ.
ಪ್ರೌಢ ಶಾಲೆಯ ಮಾಜಿ ಮುಖ್ಯಗುರುಮಾತೆ ಎಂ. ಕುಂಟೋಜಿ ಮತ್ತು ಶಿಕ್ಷಕರಾದ ಎ ಎನ್.ಪಡತಾರೆ, ಎನ್ ಎಸ್. ಚಿಕ್ಕನರಗುಂದ, ಜಿ ಜಿ. ಹುಬ್ಬಳ್ಳಿ, ಬಿ ಜಿ.ಬಿರಾದಾರ, ಶಿಕ್ಷಕಿ ಹುಲಕುಂದ ಮೇಡಂ, ಎಂ ಎಸ್.ಮಠಪತಿ, ಸಿ ಎಚ್.ಹುಕ್ಕೇರಿ, ಮ.ಗು.ಮಣ್ಣಯ್ಯನವರಮಠ, ಪುಕಾಳೆ ಮೇಡಂ, ಶೋಭಾ ಕೋರಿಶೆಟ್ಟಿ, ಎಸ್ ಎಚ್.ಹಳ್ಳಿ, ಎಸ್ ಎಂ.ಹಳ್ಳಿ, ಬಿಸ್ನಾಳ ಸರ್, ಎಸ್ ಆಯ್.ಮಠಪತಿ ಪ್ರಾಥಮಿಕ ಶಾಲೆಯ ಎನ್ ಬಿ.ಗೋಲಬಾವಿ, ಎ.ಸಿ.ಹೊಸ್ಮಠ, ದುಗ್ಗಾನಿ ಸರ್, ಕೆರಕಲಮಟ್ಟಿ ಸರ್, ಮುಂತಾದವರು ಆಗಮಿಸಲಿದ್ದಾರೆ ಎಂದು ಸಹಪಾಠಿಗಳ ಸಮಿತಿ ತಿಳಿಸಿದೆ.