ಕುಡಿಯುವ ನೀರಿನ ಬಾವಿಗಳಲ್ಲಿ ಸೇರುತ್ತಿದೆ ಶೌಚದ ನೀರು : ಸ್ಮಾರ್ಟ್ ಸಿಟಿ ಪಟ್ಟಕ್ಕೇರಿದರು ತಪ್ಪಿಲ್ಲ ಬೆಳಗಾವಿಗರಿಗೆ ಗೋಳು
ಪಾರೇಶ ಭೋಸಲೆ
ಬೆಳಗಾವಿ : ಸರಕಾರಗಳು ಸಾವಿರಾರು ಕೋಟಿ ರೂಗಳ ಹಣ ಖರ್ಚು ಮಾಡಿ ಬೆಳಗಾವಿ ನಗರವನ್ನು ಸ್ಮಾರ್ಟ್ ಸಿಟಿ ಎಂದು ಸಿದ್ದಪಡಿಸಲು ಯೋಜನೆ ರೂಪಿಸಿದೆ. ಆದರೆ ಬೆಳಗಾವಿ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಗೊಂಡಿದ್ದು, ಬೆಳಗಾವಿ ನಗರದಲ್ಲಿ ಜನರಿಗೆ ಶೌಚ ಮಿಶ್ರಿತ ನೀರು ಕುಡಿಯುವ ಹಾಗೂ ಬಳಕೆ ಮಾಡುವ ಪರಿಸ್ಥಿತಿ ಎದುರಾಗಿದೆ.

ಹೌದು ಓದುಗರೇ ನಗರದ ಕೋನವಾಳ ಬೀದಿಯ ನಾಗರಿಕರು ಶೌಚಾಲಯ (ಒಳಚರಂಡಿ)ಯ ನೀರು ಮಿಶ್ರಿತ ನೀರು ಕುಡಿಯುವ ಮತ್ತು ಬಳಕೆ ಮಾಡುವ ಪರಿಸ್ಥಿತಿ ಎದುರಾಗಿದ್ದು, ಈ ಸಮಸ್ಯೆ ಸರಿಪಡಿಸಬೇಕಾದ ಅಧಿಕಾರಿಗಳು ಮಾತ್ರ ಇದಕ್ಕು ತಮಗು ಸಂಬಂಧ ಇಲ್ಲದಂತೆ ವರ್ತಿಸುತ್ತಿರುವದು ದುರಂತ ಎನ್ನಲಾಗಿದೆ. ಈ ಸಮಸ್ಯೆ ಸರಿಪಡಿಸುವಂತೆ ಕೋನವಾಳ ಬೀದಿಯ ನಾಗರಿಕರು ಕಳೆದ ಒಂದು ವರ್ಷದಿಂದ ಒತ್ತಾಯಿಸುತ್ತಾ ಬಂದರು ಅಧಿಕಾರಿಗಳು ಮಾತ್ರ ಗಾಡ್ ನಿದ್ರೆಗೆ ಜಾರಿರುವದು ಸ್ಪಷ್ಟವಾಗಿದೆ.
ನೂರಾರು ವರ್ಷಗಳಿಂದ ಬೆಳಗಾವಿ ನಗರದ ರೇಡಿಯೋ ಕಾಂಪ್ಲೆಕ್ಸ್ ಹಿಂದಿರುವ ಕೋನವಾಳ ಬೀದಿಯಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತಿದ್ದು, ಈ ಕುಟುಂಬಗಳ ಮನೆಗಳ ಮುಂದೆ ಹಾಗೂ ಹಿಂದೆ ಕುಟುಂಬಗಳಿಗೆ ಸೇರಿದ ತೆರೆದ ಬಾವಿಗಳಿವೆ. ಈ ಬಾವಿಗಳಿಗೆ ನೂರಾರು ವರ್ಷಗಳ ಇತಿಹಾಸ ಇದೆ.
ಇಲ್ಲಿನ ನಾಗರಿಕರು ಕುಡಿಯಲು ಹಾಗೂ ಗೃಹಬಳಕೆಗಾಗಿ ಈ ಬಾವಿಗಳ ನೀರನ್ನೆ ಅವಲಂಬಿಸಿಕೊಂಡು ಬಂದಿವೆ. ಸದ್ಯ ಬೇಸಿಗೆ ಕಾಲ ಇರುವ ಹಿನ್ನೆಲೆಯಲ್ಲಿ ಸರಕಾರಿ ನಳಗಳಿಗೆ 8 ದಿನಕ್ಕೆ ಒಂದು ಬಾರಿ ಕುಡಿಯುವ ನೀರು ಪೂರೈಕೆಯಾಗುತ್ತಿವೆ.

ಕೋನವಾಳ ಬೀದಿಯ ನಾಗರಿಕರು ತಮ್ಮ ಬಾವಿಯ ನೀರು ಬಳಕೆ ಮಾಡಬೇಕಾದರೆ ಈ ಬಾವಿಗಳಿಗೆ ಸಾರ್ವಜನಿಕರ ಶೌಚಾಲಯದ ನೀರು ಮಿಶ್ರಿತವಾಗುತ್ತಿದೆ. ಈ ಹಿನ್ನಲೆಯಲ್ಲಿ ಕೋನವಾಳ ಬೀದಿಯ ಬಾವಿಗಳಲ್ಲಿ ಶೌಚಾದ ನೀರಿನಂತೆ ಭಾಸವಾಗುತ್ತಿದ್ದು, ಸ್ನಾನಕ್ಕೆ ಮತ್ತು ಗೃಹಬಳಕೆಗೆ ಉಪಯೋಗಿಸಿದರೆ ಪಾತ್ರೆಗಳು ಗಬ್ಬೆದ್ದು ನಾರುವ ಪರಿಸ್ಥಿತಿ ಉಂಟಾಗುತ್ತಿದೆ.
ನಳಗಳ ನೀರು ಸಿಗುತ್ತಿಲ್ಲ ಬಾವಿ ನೀರನ್ನಾದರು ಉಪಯೋಗಿಸಿ ಅಡುಗೆ ಮಾಡುವದಾಗಲಿ ಅಥವಾ ಗೃಹಬಳಕೆಗೆ ಉಪಯೋಗಿಸಲು ಸಾದ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಕೋನವಾಳ ಬೀದಿಯಲ್ಲಿ ರಸ್ತೆ ಕೆಳಗೆ ಇರುವ ಶೌಚಾಲಯದ (ಒಳಚರಂಡಿ) ನೀರಿನ ಪೈಪ್ ಲೈನ್ ಒಡೆದು ನೆಲದಲ್ಲಿಂದ ಶೌಚಾಲಯದ ನೀರು ಬಾವಿಗಳಲ್ಲಿ ಮಿಶ್ರಣವಾಗುತ್ತಿದೆ.
ಕಳೆದ 6 ತಿಂಗಳ ಹಿಂದೆ ಇಲ್ಲಿನ ನಾಗರಿಕರು ತಮ್ಮ ಬಾವಿಗಳಿಗೆ ಪಂಪಸೆಟ್ ಕ್ರೂರಿಸಿ ಬಾವಿಗಳಲ್ಲಿ ನೀರು ಸ್ವಚ್ವ ಮಾಡಿದ್ದರೂ ಕೂಡ ಕೆಲ ದಿನಗಳ ಬಳಿಕ ಮತ್ತೆ ಬಾವಿಗಳಲ್ಲಿನ ನೀರು ಗಬ್ಬೇದ್ದು ನಾರುತ್ತಿವೆ.
ಸರಕಾರಗಳು ಸಾವಿರಾರು ಕೋಟಿ ರೂಗಳನ್ನು ಖರ್ಚು ಮಾಡಿ ಸ್ಮಾರ್ಟ್ ಸಿಟಿಯನ್ನಾಗಿ ಬೆಳಗಾವಿ ನಗರವನ್ನು ಮಾರ್ಪಡಿಲು ಕಾರ್ಯ ಮಾಡುತ್ತಿದ್ದರೆ ಇತ್ತ ಅಧಿಕಾರಿಗಳು ಒಳಚರಂಡಿ ನೀರಿನ ಪೈಪ್ ಲೈನ್ ಬದಲಿಸಿ ನಾಗರಿಕರಿ ನೀರಿನ ಸಮಸ್ಯೆ ಪರಿಹರಿಸಲು ಮುಂದೆ ಬರುತ್ತಿಲ್ಲ ಎನ್ನುವದು ದೌರ್ಭಾಗ್ಯ ಸರಿ.
ಒಳ ಚರಂಡಿ ಪೈಪ್ ಲೈನ್ ಒಡೆದು ನೆಲದಲ್ಲಿಂದ ಬಾವಿಗಳಿಗೆ ಶೌಚದ ನೀರು ಸೇರುತ್ತಿದ್ದು ಈ ಪೈಪ್ ಲೈನ್ ಸರಿಪಡಿಸಿ ತಮಗೆ ತಮ್ಮ ಬಾವಿಯ ನೀರನ್ನು ಉಪಯೋಸಲು ಅನುವು ಮಾಡಿಕೊಡುವಂತೆ ಇಲ್ಲಿನ ನಾಗರಿಕರು ಕಳೆದ ಒಂದು ವರ್ಷದಿಂದ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡುತ್ತ ಬಂದಿದ್ಸರೂ ಇಲ್ಲಿಯ ವರೆಗೆ ಯಾವ ಪ್ರಯೋಜನ ಆಗಿಲ್ಲ ಎನ್ನುವದು ದುರಂತ ಎನ್ನಲಾಗಿದೆ.
ಬೆಳಗಾವಿಯ ಕೋನವಾಳ ಬೀದಿಯ ನಾಗರಿಕರು ಕಳೆದ ಒಂದು ವರ್ಷದಿಂದ ನೀರಿನ ಸಮಸ್ಯೆಗಾಗಿ ಅಲೇದಾಟ ಮಾಡುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ಇದಕ್ಕೆ ತಮಗೂ ಯಾವದೇ ಸಂಬಂಧ ಇಲ್ಲದಂತೆ ಕಣ್ಮಚ್ಚಿ ಕುಳಿತಿರುವದು ದುರ್ಧೈವದ ಸಂಗತಿಯಾಗಿದ್ದು, ಅಧಿಕಾರಿಗಳ ಈ ನಡೆಗೆ ಕೋನವಾಳ ಬೀದಿಯ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಪಾಲಿಕೆ ಅಧಿಕಾರಿಗಳು ಬೇಗನೆ ಬಂದು ಈ ಸಮಸ್ಯೆ ಪರಿಹರಿಸದೆ ಇದ್ದಲ್ಲಿ ಕೋನವಾಳ ಬೀದಿಯ ನಾಗರಿಕರು ರಸ್ತೆಗೆ ಇಳಿದು ಉಗ್ರ ಹೋರಾಟ ಮಾಡುವ ಎಚ್ವರಿಕೆಯನ್ನು ನೀಡಿದ್ದಾರೆ.