ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನ : ಫೇಸ್ ಬುಕ್ ಲೈವ್ ನಲ್ಲಿ‌ವಿಷ ಸೇವನೆ

ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನ : ಫೇಸ್ ಬುಕ್ ಲೈವ್ ನಲ್ಲಿ‌ವಿಷ ಸೇವನೆ

ಬೆಳಗಾವಿ : ವ್ಯಕ್ತಿಯೊಬ್ಬರ ಕಿರುಕುಳಕ್ಕೆ ಬೇಸತ್ತು ಹೊರಗುತ್ತಿಗೆ ನೌಕರನೊಬ್ಬ ಫೇಸ್‌ಬುಕ್‌ ಲೈವ್ ವಿಡಿಯೋ ಮಾಡಿ ವಿಷ ಸೇವಿಸಿದ ಪತಿ ಪತ್ನಿ ಆತ್ಮಹತ್ಯೆ ಗೆ ಯತ್ನಿಸಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ನಡೆದಿದೆ.

   ಹಾಲಪ್ಪ ಸುರಾಣಿ, ಮಹಾದೇವಿ ಸುರಾಣಿ ವಿಷ ಸೇವಿಸಿದ ದಂಪತಿಗಳಾಗಿದ್ದು, ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಹಾಲಪ್ಪ ಸುರಾಣಿ ಇವರು ರಾಯಬಾಗ ತಹಶಿಲ್ದಾರ ಕಚೇರಿಯ ಭೂ ದಾಖಲಾತಿ ವಿಭಾಗದಲ್ಲಿ ಹೊರ ಗುತ್ತಿಗೆ ಆದಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.

   ಸಧ್ಯ ಹಾಲಪ್ಪ ಹಾಗೂ ಆತನ ಪತ್ನಿಯನ್ನ ಹಾರೂಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಳೆದ ತಡ ರಾತ್ರಿ ಪೇಸಬುಕ ಲೈವ್ ಬಂದು ವಿಷ ಸೇವನೆ ಮಾಡಿದ್ದಾರೆ.ರಾಯಬಾಗದ ಸದಾಶಿವ ನಿಡೋಣಿ ಎಂಬುವವರ ವಿರುದ್ದ ಆರೋಪ ಮಾಡಿರುವ ಹಾಲಪ್ಪಾ ಅವರು 2018ರಿಂದ ಸದಾಶಿವ ನಿಡೋಣಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

   ತಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಹಾಲಪ್ಪ ಅವರುಆರೋಪ ಮಾಡಿದ್ದಾರೆ. ಸದಾಶಿವ ನಿಡೋಣಿ ಎಂಬ ವ್ಯಕ್ತಿ ಕಛೇರಿಗೆ ಬಂದು ಅವಾಚ್ಚವಾಗಿ ಬೈದಿದ್ದಾನೆ ಎಂದು‌ ಫೇಸ್ ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದಾರೆ. 10 ಲಕ್ಷ ರೂಪಾಯಿ ನೀಡುವಂತೆ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

  10 ಲಕ್ಷ ನೀಡಲು ಆಗಲ್ಲಾ ಎಂದಿದ್ದೆ.  ಕೊಡದೆ ಹೋದರೆ ಜೈಲಿಗೆ ಕಳಿಸುವುದಾಗಿ ಹೆದರಿಸಿದ್ದರು ನನ್ನ ಮೇಲೆ ಪ್ರಕರಣ ದಾಖಲಿಸಿದ್ದರು ಎಂದು ಲೈವ್ ನಲ್ಲಿ ತಿಳಿಸಿದ್ದಾರೆ. ಅವರಿಗೆ ಹೆದರಿ ನಾನು ಮನೆಯಿಂದ ಹೊರಗಡೆ ಇದ್ದೆ ಇಂದು ಬೇಲ್ ಸಿಕ್ಕ ಬಳಿಕ ಮನೆಗೆ ಬಂದಿದ್ದೇನೆ. ಹೆಂಡತಿ ಮಕ್ಕಳ ಮುಖ ನೋಡಿಕೊಂಡು ಸಾಯಲು ನಿರ್ಧಾರ ಮಾಡಿದ್ದೇನೆ.

  ನಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿ ಹಾಲಪ್ಪ ಸುರಾಣ ವುಷ ಸೇವಿಸಿರುವ ವಿಡಿಯೋ ಬಿಡುಗಡೆಗೊಂಡಿದೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ನಡೆದ ಘಟನೆ ನಡೆದಿದೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

ಸುದ್ದಿ ಓದಿ