ಮುದ್ದೆಬಿಹಾಲ್

ಟಿಪ್ಪು ಒಬ್ಬ ಅಪ್ರತಿಮ ದೇಶಪ್ರೇಮಿ: ಮದರಿ

ಟಿಪ್ಪು ಒಬ್ಬ ಅಪ್ರತಿಮ ದೇಶಪ್ರೇಮಿ: ಮದರಿ

ಮುದ್ದೇಬಿಹಾಳ: ಟಿಪ್ಪು ಒಬ್ಬ ಅಪ್ರತಿಮ ದೇಶಪ್ರೇಮಿ, ವೀರಸ್ವಾತಂತ್ರ್ಯ ಹೋರಾಟಗಾರ ದಕ್ಷ ಆಡಳಿತಗಾರ ಹಾಗೂ ಪರಧರ್ಮ ಸಹಿಷ್ಣು ವಾಗಿದ್ದನು ಮಾತ್ರವಲ್ಲದೇ ಆದರ್ಶಸ್ವರೂಪಿ ಜನನಾಯಕರಾಗಿದ್ದನು ಅಂತವರನ್ನು ಕೇವಲ ಒಂದು ಜಾತಿಗೆ ಸೀಮತಗೊಳಿಸದೆ ಎಲ್ಲ ಜನಾಂಗದವರು ಗೌರವಿಸುವಂತಾಗಬೇಕು ಎಂದು ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು. 

ಪಟ್ಟಣದ ಹಜರತ್ ಅಲಿ ಟಿಪ್ಪು ಸುಲ್ತಾನ ಸಮಿತಿ ವತಿಯಿಂದ ಟಿಪ್ಪು ಸುಲ್ತಾನ 272ನೇ ಜಯಂತ್ಯೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೋಂಡು ರಕ್ತದಾನ ಮಾಡಿ ಮಾತನಾಡಿದ ಅವರು. 

ನಮ್ಮ ನಾಡನ್ನು ಆಳಿದ ಶ್ರೇಷ್ಟ ದೊರೆಗಳ ಪೈಕಿ ಟಿಪ್ಪು ಸುಲ್ತಾನ್ ಅವರಿಗೆ ವಿಶಿಷ್ಟವಾದ ಸ್ಥಾನವಿದೆ. ತಮ್ಮ ಆಡಳಿತದ ಸಂದರ್ಭದಲ್ಲಿ ಜನರು ಸುಃಖ, ಶಾಂತಿ, ನೆಮ್ಮದಿಯಿಂದ ಬಾಳಬೇಕೆಂಬ ಆಲೋಚನೆ ಹಾಗೂ ದೂರದೃಷ್ಟಿಯಿಟ್ಟುಕೊಂಡು ಅನೇಕ ಸುಧಾರಣೆ ಜಾರಿಗೆ ತಂದರು. ಅವುಗಳನ್ನು ಜನರಿಗೂ ತಲುಪಿಸಿದರು.  

ನಮ್ಮ ಮನಸ್ಸಿನಲ್ಲಿರುವ ಟಿಪ್ಪು ಬಿಂಬ ಬದಲಾಯಿಸುವ, ಘನವಾಗಿರುವ ಅವರ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಾ ಬರಲಾಗುತ್ತಿದೆ. ರೈತರಿಗೆ ಭೂಮಿ ದಕ್ಕಲಿ ಎಂಬ ಸದಸುದ್ದೇಶದಿಂದ ಟಿಪ್ಪು ತನ್ನ ಆಡಳಿತದಲ್ಲಿ ಭೂಸುಧಾರಣೆ ಜಾರಿಗೆ ತಂದಿದ್ದರು. ಪುಂಡು ಪಾಳೆಗಾರರ ಅನುಭೋಗದಲ್ಲಿದ್ದ ಭೂಮಿ ರೈತರಿಗೆ ದಕ್ಕುವಂತೆ ಮಾಡಿದರು. ಇದನ್ನೇ ಮಾದರಿಯಾಗಿಟ್ಟುಕೊಂಡ ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿ ಉಳುವವನೆ ಭೂಮಿಯ ಒಡೆಯ ಕಾಯಿದೆ ಜಾರಿಗೆ ತಂದರು ಎಂದು ಸ್ಮರಿಸಿದರು. 

ಈ ವೇಳೆ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಾಹಾಜಾದಬಿ ಹುಣಸಗಿ,  ಮೊಲಾನಾ ಅಲ್ಲಾಭಕ್ಷ ಖಾಜಿ, ಡಾ, ವಿಜಯಕುಮಾರ ನಾಯಕ, ಪುರಸಭೆ ಸದಸ್ಯ ಮೈಬೂಬ ಗೊಳಸಂಗಿ,  ಟಿಪ್ಪು ಸುಲ್ತಾನ ಸಂಘದ ಅಧ್ಯಕ್ಷ ಅಲ್ಲಾಭಕ್ಷ ದೇಸಾಯಿ, ಪಿಎಲ್ ಡಿ ಬ್ಯಾಂಕ ಅಧ್ಯಕ್ಷ ಬಿ ಕೆ ಬಿರಾದಾರ,  ಯುವ ಮುಖಂಡ ಪಿಂಟು ಸಾಲಿಮನಿ, ಮುನ್ನಾ ಮುಕಾನದಾರ, ಯಾಶಿನ ಮುಲ್ಲಾ, ಯಾಶಿನ ಅತ್ತಾರ, ಹಾಜಿ ತೆಗ್ಗಿ, ಬಬ್ಲೂ ಹುಣಸಗಿ, ಅಲ್ತಾಫ್ ಬಾಂಬೆ  ಸೇರಿದಂತೆ ಹಲವರು ಇದ್ದರು.  

ಸುದ್ದಿ ಓದಿ