ಟಿಳಕವಾಡಿ ಪೊಲೀಸರ ಕಾರ್ಯಾಚರಣೆ : ಬೈಕ್ ಕಳ್ಳನ ಬಂಧನ : 2 ಲಕ್ಷ ಮೌಲ್ಯದ 6 ಬೈಕ್ ವಶ
ಬೆಳಗಾವಿ : ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸಿರುವ ಟಿಳಕವಾಡಿ ಪೊಲೀಸ್ ಠಾಣೆ ಪೊಲೀಸರು ಬಂಧಿತನಿಂದ 2 ಲಕ್ಷ ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಅಡಿವೇಶ ಲಕ್ಷ್ಮಣ ನಿಪ್ಪಾಣಿ (20) ಸಾ|| ಲಗಮೇಶ್ವರ, ತಾ: ಗೋಕಾಕ, ಹಾಲಿ ಭಾಗ್ಯ ನಗರ ಬೆಳಗಾವಿ ಈತ ಬಂಧಿತನಾಗಿದ್ದಾನೆ.
ಮೋಟರ್ ವಾಹನ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಿಸಿ ಖಚಿತ ಮಾಹಿತಿಯನ್ನಾಧರಿಸಿ ಎಸಿಪಿ ಖಡೇಬಜಾರ ಅರುಣಕುಮಾರ ಕೋಳೂರ ಇವರ ಮಾರ್ಗದರ್ಶನದಲ್ಲಿ ಟಿಳಕವಾಡಿ ಪೊಲೀಸ್ ಠಾಣೆಯ ಪಿಐ ದಯಾನಂದ ಶೇಗುಣಸಿ ಹಾಗೂ ಸಿಬ್ಬಂದಿಯವರ ತಂಡ ಕೊನೆಗೂ ಬೈಕ್ ಕಳ್ಳನನ್ನು ಬಂಧಿಸಿದೆ.
ಬಂಧಿತನಿಂದ ಕಳ್ಳತನ ಮಾಡಿದ 06 ಬೈಕ್‌ಗಳು (05-ಸ್ಪ್ಲೆಂಡರ್ ಪ್ಲಸ್, 01-ಯಮಹಾ) ಒಟ್ಟು 2 ಲಕ್ಷ ಮೌಲ್ಯದ ವಾಹನವನ್ನು ಜಪ್ತಿ ಮಾಡಿ, ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
ಜಪ್ತ ಪಡಿಸಿಕೊಂಡ ಈ 6 ಮೋಟಾರ್ ಸೈಕಲ್‌ಗಳು ಉದ್ಯಮಬಾಗ ಠಾಣೆ-2, ಬೆಳಗಾವಿ ಗ್ರಾಮೀಣ ಠಾಣೆ-2 ಮತ್ತು ಟಿಳಕವಾಡಿ ಠಾಣೆಯ-2 ಪ್ರಕರಣಗಳಲ್ಲಿ ಕಳುವಾದ ಮೋಟಾರ್ ಸೈಕಲ್‌ಗಳ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.
ಈ ಮೋಟರ ವಾಹನ ಕಳ್ಳತನ ಪ್ರಕರಣ ಪತ್ತೆ ಮಾಡಲು ಶ್ರಮಿಸಿದ ಪಿಐ ದಯಾನಂದ ಶೇಗುಣಸಿ, ಸಂತೋಷ ದಳವಾಯಿ ಪಿ.ಎಸ್.ಐ(ಕಾ&ಸು) ಹಾಗೂ ಸಿಬ್ಬಂದಿಯವರಾದ ಮಹೇಶ ಪಾಟೀಲ, ಲಾಡಜಿಸಾಬ ಮುಲ್ತಾನಿ, ನವೀನಕುಮಾರ ಗುಜ್ಜನ್ನವರ ಇವರ ತಂಡವನ್ನು ಪೊಲೀಸ್ ಆಯುಕ್ತರ ಉಪ ಪೊಲೀಸ್ ಆಯುಕ್ತರು. (ಕಾ&ಸು ಉಪ ಪೊಲೀಸ್ ಆಯುಕ್ತರು, (ಅ&ಸಂ), ಬೆಳಗಾವಿ ನಗರ ಅವರು ಶ್ಲಾಘಿಸಿರುತ್ತಾರೆ.