ಹಗರಿಬೊಮ್ಮನಹಳ್ಳಿ

ಬಸವೇಶ್ವರ, ರಾಮನಗರ, ಕೊಟ್ಟೂರು ವೃತ್ತಗಳಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್‌

ಬಸವೇಶ್ವರ, ರಾಮನಗರ, ಕೊಟ್ಟೂರು ವೃತ್ತಗಳಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್‌

ಹಗರಿಬೊಮ್ಮನಹಳ್ಳಿ 09: ಕರೋನಾ 3ನೇ ಅಲೆಯ ಅಬ್ಬರಕ್ಕೆ ಕಡಿವಾಣ ಹಾಕಲು ವಾರಾಂತ್ಯದ ಎರಡನೇ ದಿನವಾದ ಭಾನುವಾರ ಪಟ್ಟಣದ ಬಸವೇಶ್ವರ, ರಾಮನಗರ, ಕೊಟ್ಟೂರು ವೃತ್ತಗಳಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್‌ ಏರಿ​‍್ಡಸಲಾಗಿತ್ತು. 

ವಾರಾಂತ್ಯದ ಎರಡನೇ ದಿನವಾದ ಭಾನುವಾರ ಪಟ್ಟಣದಲ್ಲಿ ಅಗತ್ಯ ವಸ್ತಗಳಾದ ತರಕಾರಿ, ಆರೋಗ್ಯ, ಹಾಲಿನ ಉತ್ಪನ್ನಗಳ ಜೊತೆ ರಸಗೊಬ್ಬರ, ಮಾಂಸದಂಗಡಿಗಳು ಬಾಗಿಲು ತೆರೆದುಕೊಂಡಿದ್ದವು, ಬೆರಳೆಣಿಕೆಷ್ಟು ಬಸ್ ಸಂಚಾರಿಸಿದವಾದರೂ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು, ಬಸವೇಶ್ವರ ಬಜಾರ್‌ನಲ್ಲಿ ಕೆಲ ಅಂಗಡಿಗಳು ಸಿಂಗಲ್ ಷಟರ್ ಒಪನ್ ಮಾಡಿದ್ದನ್ನು ಕಾಣಬಹುದಾಗಿತ್ತು. 

ಸಂತೆಯಲ್ಲಿ ಮಾಯವಾದ ಕೋವಿಡ್ ನಿಯಮ : ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪ್ರತಿ ದಿನ ನಡೆಯುವ ತರಕಾರಿ ಮಾರುಕಟ್ಟೆ ಭಾನುವಾರ ಜೋರಾಗಿರುತ್ತದೆ, ಈ ಭಾನುವಾರ ಕರ್ಫ್ಯೂ ಇದ್ದರೂ ಸಂತೆಯಲ್ಲಿ ಜನ ಖರೀದಿಗೆ ಮುಗಿಬಿದ್ದಿರುವುದು ಸಾಮಾನ್ಯವಾಗಿತ್ತು ಆದರೆ ಮಾಸ್ಕ್‌ ಸೇರಿದಂತೆ ಸಾಮಾಜಿಕ ಅಂತರ ಮಾತ್ರ ಮಂಗ ಮಾಯವಾಗಿತ್ತು. 

ಪಟ್ಟಣದಲ್ಲಿ ಎಲ್ಲಾ ಅಂಗಡಿಗಳು ವೀಕ್‌ಎಂಡ್ ಲಾಕ್‌ಡೌನ್‌ಗೆ ಸ್ವಯಂ ಪ್ರೇರಿತವಾಗಿ ಬಾಗಿಲು ಮುಚ್ಚಿ ಕೈ ಜೋಡಿಸಿದರೆ ವಾಹನ ಸವಾರರೇ ಪೋಲಿಸರಿಗೆ ತಲೆ ನೋವಾಗಿ ಪರಿಣಮಿಸಿದ್ದು ಕಂಡು ಬಂದಿತು, ಬಸವೇಶ್ವರ ಬಜಾರ್‌ನಲ್ಲಿ ಸೇರಿದಂತೆ ರಾಮನಗರ, ಕೊಟ್ಟೂರು ವೃತ್ತಗಳಲ್ಲಿ ಬೈಕ್ ಸೆರಿದಂತೆ ಕಾರುಗಳ ಹಾವಳಿ ಹೆಚಾಗಿದ್ದು ಪೋಲೀಸರು ತಪಾಸಣೆ ನಡೆಸಿ ಅನಾವಶ್ಯಕವಾಗಿ ಒಡಾಡುತ್ತಿದ್ದ ವಾಹನ ಸವಾರರ ವಿರುಧ್ಧ ದಂಡ ವಿಧಿಸಿದರು. 

ಗ್ರಾಮೀಣ ಭಾಗದ ಜನರಿಗೆ ಬಸ್‌ಗಳ ವ್ಯೆವಸ್ಥೆ ಕೈಗೆಟುಕದಿದ್ದರೂ ಖಾಸಗಿ ವಾಹನಗಳನ್ನು ಅವಲಂಬಿಸಿ ಗೂಡು ಸೇರುವ ಸನ್ನಿವೇಶ ಸಾಮಾನ್ಯವಾಗಿತ್ತು.ಬಸ್ ನಿಲ್ದಾನಗಳಲ್ಲಿ ಗ್ರಮೀಣ ಭಾಗದ ಬಸ್‌ಗಳು ಪ್ರಯಾಣಿಕರು ಹೆಚ್ಚು ಸಂಖ್ಯೆಯಲ್ಲಿ ಬಂದರೆ ಮಾತ್ರ ಬಸ್ ಬಿಡುವಂತೆ ನಿರ್ವಾಹಕರು ಪ್ರಯಾಣಿಕರಿಗೆ ಹೇಳುತ್ತಿದ್ದರು.ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪಟ್ಟಣದೆಲ್ಲೆಡೆ ಬಿಗಿ ಪೋಲೀಸ್ ಬಂದೋಬಸ್ತ್‌ ನಿಯೋಜಿಸಲಾಗಿತ್ತು. 


ಸುದ್ದಿ ಓದಿ