ಸಚಿವೆ ಹೆಬ್ಬಾಳ್ಕರ್ ಪುತ್ರನ ಕೊರಳಿಗೂ ಸುತ್ತಿಕೊಂಡ ಹುಲಿ ಉಗುರು ಸಂಕಷ್ಟ : ಸಾಮಾಜಿಕ ಜಾಲತಾಣದಲ್ಲಿ ಪೊಟೊ ವೈರಲ್

ಸಚಿವೆ ಹೆಬ್ಬಾಳ್ಕರ್ ಪುತ್ರನ ಕೊರಳಿಗೂ ಸುತ್ತಿಕೊಂಡ ಹುಲಿ ಉಗುರು ಸಂಕಷ್ಟ : ಸಾಮಾಜಿಕ ಜಾಲತಾಣದಲ್ಲಿ ಪೊಟೊ ವೈರಲ್


ಬೆಳಗಾವಿ : ರಾಜ್ಯದಲ್ಲಿ ಹುಲಿ ಉಗುರು ಹಾಗೂ ಚರ್ಮದ ಕುರಿತು ತನಿಖೆ ಸದ್ದು ಮಾಡುತ್ತಿದ್ದು, ಈಗ ಬೆಳಗಾವಿ ಜಿಲ್ಲೆಗೂ ಹಬ್ಬಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷೀ ಹೆಬ್ಬಾಳಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್‌ ಕೊರಳಿಗು ಹುಲಿ ಉಗುರಿನ ಉರುಳು ಸುತ್ತಿಕೊಂಡಿದ್ದು, ಸಂಕಷ ಎದುರಾಗಿದೆ.

  ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳಕರ್ ಅವರ ಕೊರಳಲ್ಲಿ ಹುಲಿ ಉಗುರು ಇರುವ ಲಾಕೆಟ್ ಧರಸಿದ ಪೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

  ಮೃಣಾಲ ಹೆಬ್ಬಾಳಕರ್ ಅವರ ಮದುವೆ ಸಮಾರಂಭ ಸೇರಿದಂತೆ ಹಲವು ಕಡೆಗಳಲ್ಲಿರುವ ಪೋಟೊಗಳು ವೈರಲ್ ಆಗಿವೆ. 

 ಆ ಪೊಟೊಗಳಲ್ಲಿ ಹುಲಿಯ ಒಂದು ಉಂಗುರು ಇರುವ ಲಾಕೆಟ್‌ ಕಾನಿಸಿಕೊಂಡಿದೆ. ಈ ಪೊಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. 

  ಬೆಳಗಾವಿಯ ಅರಣ್ಯ ಇಲಾಖೆ ಅಧಿಕಾರಿಗಳ ಈ ಜಾನಮೌನಕ್ಕೆ ಎಲ್ಲೆಡೆ  ಚರ್ಚೆಗೆ ಗ್ರಾಸವಾಗಿದೆ.

ಸುದ್ದಿ ಓದಿ