ಮುದ್ದೆಬಿಹಾಲ್

ಲೋಕಸಭಾ ಚುನಾವಣೆಗೆ ಮಾಜಿ ಶಾಸಕ ರಾಜು ಆಲಗೂರಗೆ ಟಿಕೆಟ್‌: ಹರ್ಷ

ಲೋಕಸಭಾ ಚುನಾವಣೆಗೆ ಮಾಜಿ ಶಾಸಕ ರಾಜು ಆಲಗೂರಗೆ ಟಿಕೆಟ್‌: ಹರ್ಷ

ಮುದ್ದೇಬಿಹಾಳ 26: ವಿಜಯಪುರ ಜಿಲ್ಲೆಯ ಲೋಕಸಭಾ ಚುನಾವಣೆಗೆ ಸಧ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ರಾಜು ಆಲಗೂರ ಅವರನ್ನು ಲೋಕಸಭಾ ಚುನಾವಣಾ ಅಭ್ಯರ್ಥಿಯನ್ನಾಗಿ ಮೊದಲ ಪಟ್ಟಿಯಲ್ಲಿ ಆಯ್ಕೆ ಮಾಡಿ ಘೋಷಣೆ ಮಾಡಿದ್ದು ಹಿರಿಯ ದಲಿತ ಸಾಹಿತಿ ಪರುಶುರಾಮ ಕೊಣ್ಣೂರ ಹರ್ಷ ವ್ಯಕ್ತಪಡಿಸಿದ್ದಾರೆ. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಧ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದೂ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಎಲ್ಲ ಐದೂ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಉತ್ತಮ ಆಡಳಿತ ನಡೆಸುತ್ತಿದೆ. ಅದರಂತೆ ರಾಜು ಆಲಗೂರ ವಿಜಯಪುರ ಜಿಲ್ಲೆಯಲ್ಲಿ ಸನ್ನಡತೆ ಹಾಗೂ ಸೌಮ್ಯ ಸ್ವಾಭವದ ಒಳ್ಳೆಯ ರಾಜಕಾರಿಣಿಯಾಗಿ ಬೆಳೆದು ಬಂದವರು. ಅದಲ್ಲದೇ ಎರಡು ಬಾರಿ ಶಾಸಕರಾಗಿ ಒಂದು ವಿಜಯಪುರ ಜಿಲ್ಲಾ ಕಾಂಗ್ರೇಸ್ ನ ಅಧ್ಯಕ್ಷರಾಗಿ ಹೀಗೇ ಹಲವು ಉದ್ದೇಗಳನ್ನು ಅಲಂಕರಿಸಿದ ಅನುಭವಿ ರಾಜಕಾರಿಣಿಯಾಗಿದ್ದಾರೆ.  ಜೊತೆಗೆ  ಕೇವಲ ಒಂದು ದಲಿತ ಸಮೂದಾಯಕ್ಕೆ ಸೀಮಿತವಾಗಿರದೇ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರ ಹಾಗೂ ಕಾರ್ಯಕರ್ತರ ಮತ್ತು ರಾಜ್ಯಮಟ್ಟದ ಎಲ್ಲ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ವಿಜಯಪುರ ಜಿಲ್ಲೆ ಲೋಕಸಭಾ ಚುನಾವಣೆಯಲ್ಲಿ ರಾಜು ಆಲಗೂರ ಅವರು ಅಭೂತಪೂರ್ವ ಜಯಸಾಧಿಸುವುದರಲ್ಲಿ ಯಾವೂದೇ ಸಂದೇಹವಿಲ್ಲ. ಕಾರಣ ಜಿಲ್ಲೆಯ ಎಲ್ಲ ಚಲವಾದಿ ಸಮಾಜ ಬಾಂಧವರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ರಾಜು ಆಲಗೂರ ಅವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು. 

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಹಾಗೂ ಮುದ್ದೇಬಿಹಾಳ ಶಾಸಕರು ಹಾಗೂ ಕರ್ನಾಟಕ ಸರಕಾರದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು. 


ಸುದ್ದಿ ಓದಿ