ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿ ಮೂವರ ಸಾವು: ಸಹಾಯಧನ
ಶಿಗ್ಗಾಂವ 22: ಅತಿಯಾಗಿ ಸುರಿಯುತ್ತಿರುವ ಮಳೆಯಿಂದ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿರುವುದರಿಂದ ಮನೆಗೆ ತೆರಳಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ, ಮೃತರ ಕುಟುಂಬಕ್ಕೆ ವೈಯುಕ್ತಿಕವಾಗಿ ಸಂಜೀವಕುಮಾರ ನೀರಲಗಿ ಅವರು ಹಾಗೂ ಸೋಮಣ್ಣ ಬೇವಿನಮರದ ಅವರು ಸಹಾಯಧನವನ್ನು ನೀಡಿದರು. ಕಷ್ಟದಲ್ಲಿದವರಿಗೆ ನಮ್ಮ ಸರ್ಕಾರ ಸ್ಪಂದಿಸುತ್ತದೆ ಮತ್ತು ರಾಜ್ಯಾದ್ಯಂತ ತುಂಬಾ ಮಳೆಯಾಗುತ್ತಿದ್ದು ಸರ್ಕಾರ ಮುಂಜಾಗ್ರತವಾಗಿ ಏನು ಕೆಲಸ ಮಾಡಬೇಕು ಮಾಡಿದೆ ಹಾಗಾಗಿ ಯಾವತ್ತು ನಾವು ಬಡವರ ಪರವಾಗಿದ್ದೆವೆ