ಜೊಲ್ಲೆ ಸಮೂಹದಿಂದ ಇಂದಿನಿಂದ ಮೂರು ದಿನ ಸಂಸದ ಸಾಂಸ್ಕೃತಿಕ ಮಹೋತ್ಸವ : ಮಹಾನ್ ನಾಯಕರ ಚರಿತ್ರೆ ಸಾರುವ ಕಾರ್ಯಕ್ರಮ

ಜೊಲ್ಲೆ ಸಮೂಹದಿಂದ ಇಂದಿನಿಂದ ಮೂರು ದಿನ ಸಂಸದ ಸಾಂಸ್ಕೃತಿಕ ಮಹೋತ್ಸವ : ಮಹಾನ್ ನಾಯಕರ ಚರಿತ್ರೆ ಸಾರುವ ಕಾರ್ಯಕ್ರಮ

ಸಂಕೇಶ್ವರ : ಪಟ್ಟಣದ ಎಸ್ ಡಿ ಹೈಸ್ಕೂಲ್ ಆಟದ ಮೈದಾನದಲ್ಲಿ ನಿರ್ಮಿಸಲಾದ ಭವ್ಯವಾದ ವೇದಿಕೆಯಲ್ಲಿ ಮಹಾನ್ ನಾಯಕರ ಚರಿತ್ರೆ ಸಾರುವ ಪ್ರದರ್ಶನ ಇಂದಿನಿಂದ ಜನವರಿ 30ರ ವರೆಗೆ ಜೊಲ್ಲೆ ಸಮೂಹದಿಂದ ಸಂಸದ ಸಾಂಸ್ಕೃತಿಕ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. 


   ಸಿದ್ದತೆ ಪರಿಶೀಲನೆ ನಡೆದ ಬಳಿಕ ಗಜಾನನ ಕ್ವಳಿ ಹಾಗೂ ಪ್ರಮೋದ ಹೊಸಮನಿ, ರಾಜು ಕುರಂದವಾಡೆ ಅವರು ಮಾತನಾಡಿ, ಸಂಕೇಶ್ವರದ ಎಸ್ ಡಿ ಹೈಸ್ಕೂಲ್ ಆಟದ ಮೈದಾನಲ್ಲಿ ನಿರ್ಮಿಸಲಾಗಿರುವ ಭವ್ಯವಾದ ವೇದಿಕೆಯಲ್ಲಿ ಇದೇ ಜನವರಿ 27ರಿಂದ 30ರ ವರೆಗೆ ಮೂರು ದಿನ ಈ ಕಾರ್ಯಕ್ರಮ ಗಳು ಜರುಗಲಿದ್ದು, ಮಹಾನಾಯಕರಾದ ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಶ್ರೀರಾಮನ ಚರಿತ್ರೆಗಳನ್ನು ಸಾರುವ ಸಂಗೀತ ಹಾಗೂ ಪೌರಾಣಿಕ ಪ್ರದರ್ಶನಗಳು ಜರುಗಲಿವೆ ಎಂದರು. 


    ಇಂದು ( ದಿ. 27) ಸಂಜೆ 6 ಗಂಟೆಗೆ ಸಾ.ರೇ.ಗಾ.ಮಾ.ಪ ಕಾರ್ಯಕ್ರಮದ ಮಹಾನಾಯಕ ಅಭಿಜಿತ್ ಕೋಸಂಬಿ ಹಾಗೂ ಸಹೋದರ ಇಂಡಿಯನ್ ಐಡಲ್ ನ ಪ್ರಸನ್ ಜಿತ್ ಕೋಸಂಬಿ ಅವರಿಂದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನಾಧಾರಿತ ಜೈ ಭೀಮ ಸೇ ಕರೆಂಗೆ ಸ್ವಾಗತ ಎಂಬ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.


   ಅದೇ ರೀತಿ ಜ. 28ರಂದು ಸಂಜೆ 6 ಗಂಟೆಗೆ ಪ್ರಸಿದ್ದ ಕಲಾವಿದರಿಂದ ಶ್ರೀರಾಮ ಪ್ರತಿಕ್ಷಾ ಎಂಬ ಕನ್ನಡ ನೃತ್ಯ ನಾಟಕ ಪ್ರದರ್ಶನವಾಗಲಿದೆ. 

   ಅದೇ ರೀತಿ ದಿ. 29ರ ಸಂಜೆ 6 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ ಜೀವನಾಧಾರಿತ ಶಿವ ಘರ್ಜನಾ ಎಂಬ ಪ್ರದರ್ಶನ ನಡೆಯಲಿದೆ. ಈ ಮೂರು ಪ್ರದರ್ಶನಗಳು ಯಾವುದೇ ಶುಲ್ಕ ಇಲ್ಲದೆ ಉಚಿತವಾಗಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇದರ ಪ್ರಯೋಜನೆ ಪಡೆಯುವಂತೆ ಕೋರಿದರು. 

    ಈ ಸಂದರ್ಭದಲ್ಲಿ ಶ್ರೀಕಾಂತ ಹತನೂರೆ, ಗಂಗಾರಾಮ ಭೂಸಗೋಳ, ಪವನ ಪಾಟೀಲ, ವಿಕಿ ಕ್ವಳ್ಳಿ, ದೀಪಕ ಭೀಸೆ, ಅಭಿಜಿತ್ ಕುರಣಕರ, ಸಚೀನ ಭೋಪಳೆ, ವಿಜಯ ಕಡಕಬಾವಿ, ರಮೇಶ ಪಾಟೀಲ, ರಾಹುತ್, ಅಪ್ಪು ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ಸುದ್ದಿ ಓದಿ