ಹಗರಿಬೊಮ್ಮನಹಳ್ಳಿ

ಜನೆವರಿ 12ರಿಂದ ಮೂರು ದಿನ ಹಾಲು ಮತ ಸಂಸ್ಕೃತಿ ವೈಭವ

ಜನೆವರಿ 12ರಿಂದ ಮೂರು ದಿನ ಹಾಲು ಮತ ಸಂಸ್ಕೃತಿ ವೈಭವ

ಹಗರಿಬೊಮ್ಮನಹಳ್ಳಿ. 08 : ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್‌ನ ಶ್ರೀ ಕನಕ ಗುರು ಪೀಠ ಹಾಲುಮತ ಕೇಂದ್ರದಲ್ಲಿ ಜನವರಿ 12 ರಿಂದ ಮೂರು ದಿನಗಳ ಕಾಲ ನಡೆಯುವ ಹಾಲು ಮತ ಸಂಸ್ಕೃತಿ ವೈಭವ 2022 ಕಾರ್ಯಕ್ರಮ ನಡೆಯಲಿದೆ ತಾಲೂಕಿನ ಹಾಲು ಮತ ಸಮಾಜದವರು ಪಾಲ್ಗೊಳ್ಳುವಂತೆ ತಾಲೂಕು ಕುರುಬ ಸಂಘದ ತಾಲೂಕಾಧ್ಯಕ್ಷ ಬುಡ್ಡಿ ಬಸವರಾಜ ಕರೆ ನೀಡಿದರು. 

ಪಟ್ಟಣದ ಗುರುಭವನದಲ್ಲಿ ತಾಲೂಕು ಕುರುಬ ಸಂಘದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಮಠದ ಆವರಣದಲ್ಲಿ ಕನಕದಾಸ, ವಾಲ್ಮೀಕಿ, ಅಂಬೇಡ್ಕ್‌ರ್, ಗಾಂಧೀಜಿ, ಸ್ವಾಮಿ ವಿವೇಕಾನಂದ, ಬಸವಣ್ಣ ಮೂರ್ತಿಗಳ ಉದ್ಘಾಟಿಸಲಾಗುವುದು, ಗ್ರಾಮೀಣ ಕ್ರೀಡೆಗಳು ಪ್ರಸ್ತುತ ದಿನಮಾನಗಳಲ್ಲಿ ನಶಿಸುತ್ತಿದ್ದು , ಹಾಲು ಮತ ಸಂಸ್ಕೃತಿ ವೈಭವದಲ್ಲಿ ಅಳಿವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಹ ನೀಡುವ ನಿಟ್ಟಿನಲ್ಲಿ ಗುರುಪೀಠ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ, ಕರ್ನಾಟಕ ಆದಿವಾಸಿ ಗೊಂಡ್ ಸಂಘ ಉದ್ಘಾಟನೆ , ಶ್ರೀ ಮಠದಿಂದ ಸಮಾಜ ಸೇವೆ ಸಾಹಿತ್ಯ, ಕಲೆ ಇತರ ರಂಗಗಳಲ್ಲಿ ಸಾಧನೆಗೈದವರಿಗೆ ತಲಾ ಐವತ್ತು ಸಾವಿರ ಮೊತ್ತದೊಂದಿಗೆ ಹಾಲು ಮತ ಭಾಸ್ಕರ, ಕನಕ ರತ್ನ, ಸಿಧ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆದ್ದರಿಂದ ತಾಲೂಕಿನಲ್ಲಿನ ಸಮಾಜದ ಬಾಂಧವರು 1000ಕ್ಕೂ ಹೆಚ್ಚು ಜನ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದರು. 

ಕುರುಬ ಸಂಘದ ರಾಜ್ಯ ನಿರ್ದೇಶಕ ಹಾಗೂ ನೂತನ ಪುರಸಭೆ ಸದಸ್ಯ ಎಂ.ಮರಿ ರಾಮಪ್ಪ ಮಾತನಾಡಿ ಜನವರಿ 12ರಿಂದ ಮೂರು ದಿನಗಳ ಕಾಲ ನಡೆಯುವ ನಾಟಕ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ  ಹಾಗೂ ಬೀರ ದೇವರ ಹೊಳೆ ಪೂಜೆ, ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ ನಂತರ ಮಠದ ಮಹಾದ್ವಾರದ ಉದ್ಘಾಟನೆ ಹಾಗೂ ಕುರಿ ಉಣ್ಣೆ ಸಮಾವೇಶ, ಎತ್ತುಗಳ ಭಾರ ಎಳೆಯುವ ಸ್ಫರ್ಧೆ, ಟಗರು ಕಾಳಗ, ಯುವಜನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಗ್ರಾಮೀಣ ಸೊಗಡನ್ನು ವರ್ಣರಂಜಿತವಾಗಿ ನಡೆಸುತ್ತಿರುವ ಕಾರ್ಯಕ್ರಮಕ್ಕೆ ಸಮಾಜದ ಸರ್ವರು ಭಾಗವಹಿಸುವಂತೆ ಮನವಿ ಮಾಡಿದರು. 

ಈ ಸಂಧರ್ಭದಲ್ಲಿ ಧರ್ಮದರ್ಶಿ ಬಣಕಾರ ಗೋಣೆಪ್ಪ, ಪುರಸಭೆ ಸದಸ್ಯ ಸುರೇಶ್ ಬಣಕಾರ, ಮುಖಂಡರಾದ ಕುರಿ ನಾಗರಾಜ, ಹುಡೇದ್ ಹುಲುಗಪ್ಪ, ಕುರುಬರ ವೇಂಕಟೇಶ್, ಎ.ಮಂಜುನಾಥ್, ದೇವೇಂದ್ರಪ್ಪ, ರೇವಣಸಿದ್ದಪ್ಪ, ಪಂಪಾಪತಿ, ಕೆಂಚಪ್ಪ, ಉಮಾಶಂಕರ, ಶಂಬಣ್ಣ ಸೇರಿದಂತೆ ಸಮಾಜದ ಮುಖಂಡರು ಇದ್ದರು. 

ಸುದ್ದಿ ಓದಿ