ಮಹಾ ಶಿವಸೇನಾ ಪುಂಡನಿಂದ ಬೆದರಿಕೆ : ಪಾಲಿಕೆಯಲ್ಲಿ ಕನ್ನಡಪರ ಠರಾವು ಮಾಡಿದರೆ ಆಂದೊಲನ ಮಾಡತಾರಂತೆ
ಬೆಳಗಾವಿ : ಕನ್ನಡ ಸಂಘಟನೆಗಳ ಒತ್ತಡಕ್ಕೆ ಮಣಿದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" "ಮಹಾಜನ್ ವರದಿ ಅಂತಿಮ" ಎಂದು ಠರಾವವು ಮಾಡಿದ್ದೆ ಆದಲ್ಲಿ ಬೆಳಗಾವಿ ಗಡಿಗೆ ಹಾಗೂ ಬೆಳಗಾವಿಯಲ್ಲಿ ಬಂದು ಆಂದೋಲನ ಮಾಡುವದಾಗಿ ಕೊಲ್ಲಾಪುರ ಶಿವಸೇನಾ ಪುಂಡ ವಿಜಯ ದೇವಣೆ ಕನ್ನಡಿಗರಿಗೆ ಗೊಡ್ಡು ಬೆದರಿಕೆ ಹಾಕುವ ಮೂಲಕ ಜಬ್ಬಕೊಚ್ವಿದ ಉತ್ತರ ಕುಮಾರನಾಗಿದ್ದಾನೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇತ್ತೀಚೆಗೆ ನೂತನ ಮಹಾಪೌರ ಉಪಮಹಾಪೌರರನ್ನು 20ಕ್ಕು ಹೆಚ್ಚು ಕನ್ನಡ ಸಂಘಟನೆಯವರು ಭೆಟಿ ಮಾಡಿ ಗಡಿ ವಿಷಯವಾಗಿ "ಮಹಾಜನ್ ಆಯೋಗದ ವರದಿ ಅಂತಿಮ" ಹಾಗೂ "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಮಾಲಿಕೆಯಲ್ಲಿ ನಿರ್ಣಯ ಕೈಗೊಂಡು ಠರಾವು ಪಾಸು ಮಾಡುವಂತೆ ಒತ್ತಾಯಿಸಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೆ ನೀಡಿರುವ ಮಹಾರಾಷ್ಟ್ರ ಕೊಲ್ಲಾಪುರ ಶಿವಸೇನಾ ಪುಂಡ ದೇವಣೆ ಅವರು, ಒಂದು ವೇಳೆ ಈ ರೀತಿಯ ಠರಾವು ಪಾಸು ಮಾಡಿದ್ದಲ್ಲಿ ಬೆಳಗಾವಿ ಗಡಿಯಲ್ಲಿ ಹಾಗೂ ಬೆಳಗಾವಿ ನಗರದಲ್ಲಿ ಆಂದೋಲನ ಮಾಡುವದಾಗಿ ಹೇಳಿಕೆ ನೀಡಿದ್ದಾನೆ.