ಕಿಂಡರ್ ಗಾರ್ಡೆನ್ ಪ್ರಾರಂಭಿಸಲು ಆಲೋಚನೆ: ಅಕ್ಕಿ ಶಿವಕುಮಾರ್
ಲೋಕದರ್ಶನ ವರದಿ
ಹೂವಿನ ಹಡಗಲಿ 24: ಪಟ್ಟಣದಲ್ಲಿ ಜೂನ್ ತಿಂಗಳನಿಂದ ವಿವಿ ಸಂಘದಿಂದ ಕಿಂಡರ್ ಗಾರ್ಡೆನ್ ನಿರ್ಮಿಸಲು ಚಿಂತನೆ ನೆಡಸಲಾಗುವುದು ಎಂದು ಜಿಬಿ ಆರ್ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಅಕ್ಕಿ ಶಿವಕುಮಾರ್ ಹೇಳಿದರು.
ಅವರು ಪಟ್ಟಣದ ಜಿಬಿಆರ್ ಮಹಾವಿದ್ಯಾಲಯದ ಹಾನಗಲ್ಲ ಕುಮಾರ ಸ್ವಾಮಿ ಸಭಾಂಗಣದಲ್ಲಿ ಆಯೋಜಿಸಿದ್ದ. 2021ರಿಂದ 2023ವರೆಗೆ ಮಹಾವಿದ್ಯಾಲಯಕ್ಕೆ ನೂತನವಾಗಿ ಆಯ್ಕೆಯಾದ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರ ಸ್ವಾಗತ ಮತ್ತು ಶೈಕ್ಷಣಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿವರ್ಷ ಪದವಿ ಮಹಾವಿದ್ಯಾಲಯ ನಷ್ಟದಲ್ಲಿ ಸಾಗುತ್ತಿದ್ದು, ಅದನ್ನು ಸರಿಪಡಿಸಲು ಪೂರ್ವ ಪ್ರಾಥಮಿಕ ಶಾಲೆಯಿಂದ 7ನೇ ತರಗತಿವರೆಗೆ ಪ್ರಾರಂಭಿಸಿ ಎಲ್ಲರ ಸಹಕಾರದಿಂದ ಕಾಲೇಜ್ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಕಾಲೇಜ್ ಆಡಳಿತ ಮಂಡಳಿಗೆ ನೂತನವಾಗಿ ಪದವಿ ಕಾಲೇಜ್ಗೆ ಕೆ.ಮುದುಕಪ್ಪ,ಕೆಎಮ್ಉದಾಸಿ,ಡಾ.ಪ್ರಕಾಶ್ ಆಟವಾಳಗಿ.ಪದವಿ ಪೂರ್ವ ಕಾಲೇಜಿಗೆ ಹಿರಿಯ ವಕೀಲರಾದ ಸಿ ಕೆ ಎಮ್ ಬಸವಲಿಂಗ ಸ್ವಾಮಿ, ಕನ್ನಿಹಳ್ಳಿ ಮುದುಕಪ್ಪ, ಶಾನಭೋಗರ ಜಯಶೀಲ. ಸ್ನಾತಕೋತ್ತರ ವಿಭಾಗಕ್ಕೆ ಓಲಿ ಈಶಪ್ಪ,ಎಮ್ ಪಿ ಎಮ್ ವೀರಭದ್ರ ದೇವರು ಎಲ್ ಪರಮೇಶ್ವರ್ಪ, ಕೆ ಎಲ್ ಗುರುರಾಜ್ ಆಯ್ಕೆಯಾದರು.ಸಿ .ಕೆ ಎಮ್. ಬಸವಲಿಂಗ ಸ್ವಾಮಿ ,ಡಾ.ಪ್ರಕಾಶ್ ಆಟವಾಳಗಿ ಮಾತನಾಡಿದರು. ಪದವಿ ಕಾಲೇಜು ಪ್ರಾಂಶುಪಾಲ ಪ್ರೊ ಎಸ್ ಎಸ್ ಪಾಟೀಲ್, ಪ ಪೂ ಕಾಲೇಜಿನ ಪ್ರಾಂಶುಪಾಲ ಪ್ರೊ ಎಚ್ ಟಿ ಶ್ರೀನಿವಾಸ ನಾಯಕ್ ಮಾತನಾಡಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ ಶಾಂತಮೂರ್ತಿ ಬಿ ಕುಲಕರ್ಣಿ ಸ್ವಾಗತಿಸಿದರು, ಉಪನ್ಯಾಸಕರಾದ ಡಾ. ಹೆಚ್ ಕೆ ಮಹೇಶ್ ನಿರೂಪಿಸಿದರು, ಎಮ್ ನಾಗವೇಣಿ ವಂದಿಸಿದರು.