ಬೈಕ್ ನಲ್ಲಿ ಬಂದ ಕಳ್ಳರಿಂದ ಯುವತಿಯ ಕೊರಳಲ್ಲಿನ ಚಿನ್ನಾಭರಣ ದೋಚಿ ಫರಾರಿ
ಸಂಕೇಶ್ವರ : ಬೈಕ್ ನಲ್ಲಿ ಬಂದ ಇಬ್ಬರು ಖದೀಮ ಕಳ್ಳರು ಹಾಡುಹಗಲು ಮಾರುಕಟ್ಟೆಯ ನಡುರಸ್ತೆಯಲ್ಲಿ ಯುವತಿ ಕೊರಳಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ದೋಚಿ ಫರಾರಿಯಾಗಿರುವ ಘಟನೆ ಸಂಕೇಶ್ವರ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದಿದೆ.
ಸಂಜೆ 4.30 ಗಂಟೆಯ ಸುಮಾರಿಗೆ ಪಟ್ಟಣದ ಶಂಕರ ಹೆಬ್ವಾಳಿ ಅವರ ಪುತ್ರಿಯ ಕೊರಳಲ್ಲಿ ಇದ್ದ ಸುಮಾರು 15 ಗ್ರಾಂ ಚಿನ್ನದ ಸರ್ ವನ್ನು ಕಸಿದುಕೊಂಡು ಕಳ್ಳರು ಫರಾರಿಯಾಗಿದ್ದಾರೆ. ಈ ದೃವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಯುವತಿ ಮಾರುಕಟ್ಟೆಗೆ ಹೋಗುವಾಗ ಎದುರಿನಿಂದ ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ಯುವತಿ ಕೊರಳಲ್ಲಿ ಇದ್ದ ಸುಮಾರು 1.30 ಸಾವಿರ ಮೌಲ್ಯದ 1.5 ತೋಲಿ ಚಿನ್ನದ ಸರ್ ವನ್ನು ಎಗ್ಗರಿಸಿ ಕಳ್ಳರು ಫರಾರಿಯಾಗಿದ್ದಾರೆ.
ಸ್ಥಳಕ್ಕೆ ಸಂಕೇಶ್ವರ ಸಿಪಿಐ ಅವಜಿ ಹಾಗೂ ಸಿಬ್ಬಂದಿ ಗಳು ಭೇಟಿ ನೀಡಿ ಕಳ್ಳರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.