ಜಾಗತಿಕ ಮಟ್ಟದಲ್ಲಿ ಜಲಪ್ರಳಯ, ಭೂಕಂಪನ, ಯುದ್ದದ ಭೀತಿ ಎದುರಾಗಲಿದೆ : ರಾಜ್ಯಕ್ಕೆ ಮಹಿಳಾ ಸಿಎಂ ಯೋಗ : ಕೋಡಿ ಶ್ರೀಗಳ ಭವಿಷ್ಯ

ಜಾಗತಿಕ ಮಟ್ಟದಲ್ಲಿ ಜಲಪ್ರಳಯ, ಭೂಕಂಪನ, ಯುದ್ದದ ಭೀತಿ ಎದುರಾಗಲಿದೆ : ರಾಜ್ಯಕ್ಕೆ ಮಹಿಳಾ ಸಿಎಂ ಯೋಗ : ಕೋಡಿ ಶ್ರೀಗಳ ಭವಿಷ್ಯ

ಬೆಳಗಾವಿ : ಜಾಗತಿಕಮಟ್ಟದಲ್ಲಿ ಜಲಪ್ರಳಯ, ಭೂಕಂಪನ, ಜಲಪ್ರಳಯ ಯುದ್ದದ ಭೀತಿ  ವಿಷ ಅನಿಲ ಬೀಸಲಿದೆ. ಜನರ ಸಾವು ನೋವು ನಡೆಯಲಿದೆ. ಇದಕ್ಕೆ ಎಚ್ವರಕ್ಕೆ ವಹಿಸಿದರೆ ಸೂಕ್ತ. ಅದರ ಜೊತೆಗೆ ರಾಜ್ಯದಲ್ಲಿ ಮಹಿಳಾ ಸಿಎಂ ಯೋಗ ಕೂಡಿ ಬರಲಿದೆ ಎಂದು‌ ಕೋಡಿಮಠದ ಡಾ. ಶಿವಾನಂದ ಶ್ರೀಗಳು ಭವಿಷ್ಯ ನುಡಿದರು. 

  ಬೆಳಗಾವಿಯಲ್ಲಿ ರವಿವಾರ ಮಾಧ್ಯಮ ಗಳೊಂದಿಗೆ ಮಾತನಾಡಿರುವ ಕೋಡಿಮಠದ ಶ್ರೀಗಳು, ಜಾಗತಿಕ ಮಟ್ಟದಲ್ಲಿ ಅಸ್ಥಿರತೆ, ‌ಪ್ರಾಕೃತಿಕ ಭಂಗವಾಗಲಿದೆ. ವಿಪರೀತ ಮಳೆಯಾಗಲಿದೆ. ಭೂಕಂಪನಗಳು ಸುನಾಮಿ, ವಿಷ ಅನಿಲ ಬೀಸುವ ಭೀತಿ ಇದೆ. ವಿಪರಿತ ಮಳೆಯಿಂದ ಜಲಪ್ರಳಯವಾಗಲಿದೆ. ದೇಶದಲ್ಲಿ ಸಾವು ನೋವು ಬರುವ ಪ್ರಸಂಗ ಇದೆ. ಜಗತ್ತಿನ ಸಾಮ್ರಾಟ ತಲ್ಲಣಗೊಳ್ಳುವ ಪ್ರಸಂಗ ಇದೆ.‌ ಇದಕ್ಕೆ ಎಚ್ಚರಿಕೆ ವಹಿಸುವ ಅಗತ್ಯ ಇದೆ ಎಂದು ನುಡಿದಿದ್ದಾರೆ. 

   ರಾಜ್ಯದಲ್ಲಿ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗುತ್ತದೆ ಎಂದು ಸ್ವಾಮೀಜಿ  ಭವಿಷ್ಯ ಹೇಳಿದ್ದಾರೆ.  ಪ್ರಾಕೃತಿಕ ದೋಷ ಉಂಟಾಗಲಿದೆ. ಹಣ ಗಳಿಕೆಯ ಬೆನ್ನು ಬಿದ್ದು, ಬೆಳೆಗಳಿಗೆ ವಿಷಕಾರಿ ಔಷಧ ನೀಡಿ, ಮನುಷ್ಯ ಕೂಡಾ ವಿಷ ಉನ್ನುವ ಕಾಲ ಇಂದು ಬಂದಿದೆ. ಮೊದಲು 40 ಅಡಿಗೆ ಬಾವಿ ಅಥವಾ ಬೋರವೇಲ್ ಕೊರೆದರೆ ನೀರು ಬರುತ್ತಿತ್ತು. ಮನುಷ್ಯ ಅತಿ ವೇಗವಾಗಿ ‌ಹಣ ಗಳಿಕೆಯ ಆಸೆಯಿಂದ ಮನುಷ್ಯರಿಗೆ ವಿಷ ಉನ್ನಿಸುವ ಕೆಲಸ ನಡಿತಾ ಇದೆ. ಇದು ವಿನಾಶಕಕ್ಕೆ ನಾಂದಿಯಾಗುತ್ತಿದೆ. ರಾಜ್ಯ ಸರಕಾರಕ್ಕೆ ಎನು ತೊಂದರೆ ಇಲ್ಲ. ನಾನು ಚುನಾವಣೆ ಪೂರ್ವದಲ್ಲಿ ರಾಜ್ಯ ರಾಜಕೀಯ ಅಲ್ಲೊಲ್ಲ ಕಲ್ಲೊಲ್ಲ ಆಗುತ್ತದೆ ಎಂದು ಹೇಳಿದ್ದೆ, ಅದೇ ರೀತಿಯಾಗಿದೆ ಎಂದು ಹೇಳಿದರು.

    ಭೂಕಂಪನದಿಂದ ದೊಡ್ಡ ದೊಡ್ಡ ನಗರಗಳಿಗೆ ಅಪಾಯಕಾರಿ ಆಗುತ್ತದೆ. ಇದರಿಂದ ಸಾವು ನೋವು ಸಂಭವಿಸುವ ಆತಂಕವಿದೆ. ಜಾಗತಿಕ ಮಟ್ಟದಲ್ಲಿ ವಿಷಾನೀಲದ ಪರಿಣಾಮ ಭಾರತದ ಮೇಲೂ ಆಗಲಿದೆ. ಜಗತ್ತಿನ ಸಾಮ್ರಾಟಗಳ ತಲ್ಲಣಗೊಳ್ಳುವ ಪ್ರಸಂಗವೂ ಇದೆ. ಅದರ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಸ್ವಾಮೀಜಿ ಹೇಳಿದರು‌.

     ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಹೇಳಲು ಇನ್ನೂ ಸಮಯವಿದೆ. ದೈವದ ಬಲ ಮನುಷ್ಯನಿಗೆ ಮುಖ್ಯವಾಗಿಬೇಕು.ಯಾರು ದೈವ ನಂಬುತ್ತಾನೇಯೋ ಅಂಥವರಿಗೆ ತೊಂದರೆಯಿಲ್ಲ. ಇಲ್ಲವಾದರೆ ಆಪತ್ತು, ಸಾವುಗಳು ಸಂಭವಿಸುತ್ತವೆ. ಕೆಲವರಿಗೆ ದೈವಬಲ ಇದ್ದರೂ ತೊಂದರೆ ಆಗುತ್ತದೆ, ಪ್ರಕೃತಿ ನಿಯಮವದು. ಪ್ರಾಕೃತಿಕ ದೋಷದಿಂದಲೇ ಸಾವುನೋವು ಹೆಚ್ಚುತ್ತಿವೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗುತ್ತಿದೆ, ಕೆಮಿಕಲ್ ಮಿಶ್ರಿತ ಆಹಾರ ಸೇವನೆ ಹೆಚ್ಚುತ್ತಿದೆ. ಸೀಮೆ ಗೊಬ್ಬರ, ದನದ ಗೊಬ್ಬರ ಹಾಕಿ ಬೆಳೆ ಮೊದಲು ಬೆಳೆಯಲಾಗುತ್ತಿತ್ತು. ಈಗ ಕೆಮಿಕಲ್ ಸಿಂಪಡಣೆ ಹೆಚ್ಚುತ್ತಿದೆ, ಹಣ್ಣಿಗೂ ಕೆಮಿಕಲ್ ಹಾಕಲಾಗುತ್ತಿದೆ ಎಂದರು‌.

    ರಾಜಕಾರಣದ ಬಗ್ಗೆ ಏನೂ ಹೇಳಲ್ಲ, ಆದರೆ ಸರ್ಕಾರಕ್ಕೆ‌ ತೊಂದರೆಯಿಲ್ಲ. ಪಕ್ಷಾಂತರ ಬಗ್ಗೆಯೂ‌ ಚುನಾವಣೆ ಪೂರ್ವವೇ ಹೇಳಿದ್ದೇನೆ.   ಈ ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಆಗುವ ಯೋಗ ಇದೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇವರದ್ದು ಮುಗಿಲಿ, ಎಲ್ಲವನ್ನೂ ಕಿತ್ತುಕೊಳ್ಳುತ್ತಿದ್ದಾರೆ. ಒಮ್ಮೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ ಎಂದು ಹೇಳಿದರು.

ಸುದ್ದಿ ಓದಿ