ಮಳೆ ವರ್ಣನೆ ಒಂದು ಕಾಲಘಟ್ಟ ಈಗ ಮಳೆ ಬೇಡುವ ಕಾಲಘಟ್ಟ : ಡಾ.ಯು.ಶ್ರೀನಿವಾಸಮೂರ್ತಿ
ಲೋಕದರ್ಶನ ವರದಿ
ಕಂಪ್ಲಿ 23: ಪಟ್ಟಣದ ಸಾಹಿತ್ಯ ಸಿರಿ ಪ್ರತಿಷ್ಠಾನವು ಶನಿವಾರ ಇಲ್ಲಿನ ಶ್ರೀ ವಾಸವಿ ಪ್ರಾಥಮಿಕ ಶಾಲೆಯಲ್ಲಿ ಮಳೆ ಕವಿಗೋಷ್ಠಿ ನಡೆಯಿತು. ವಾಸವಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ವಿ.ರಾಮಲಿಂಗಯ್ಯಶ್ರೇಷ್ಠಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಮಳೆಗಾಗಿ ಕವಿಗೋಷ್ಠಿ ಆಯೋಜಿಸಿದ್ದು ಸಾಹಿತ್ಯ ದೃಷ್ಠಿಯಿಂದ ಓಚಿತ್ಯವಾಗಿದೆ. ಮಳೆ ಸಮೃದ್ಧವಾಗಿ ಆಗಲು ಮತ್ತು ಮಳೆ ಕೊರತೆಗೆ ವೈಚಾರಿಕವಾಗಿಯೂ ಚಿಂತಿಸುವಲ್ಲಿ ಯುವಜನತೆ ಮುಂದಾಗಬೇಕು ಎಂದರು. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಯು.ಶ್ರೀನಿವಾಸಮೂರ್ತಿ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದರು,
ನಿರ್ದೇಶಕ ಜೆ.ತಿಪ್ಪಯ್ಯಶ್ರೇಷ್ಠಿ, ಪ್ರತಿಷ್ಠಾನದ ಅಧ್ಯಕ್ಷ ಜಿ.ಪ್ರಕಾಶ್, ಕಾರ್ಯಾಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಮಾತನಾಡಿದರು. ಮಳೆ ಕವಿಗೋಷ್ಠಿಯಲ್ಲಿ ಮಳೆಯ ಓಚಿತ್ಯವನ್ನು ಸಾರಿದವು. ವಾಚಿಸಿದ ಕವಿತೆಯ ಕೆಲ ಸಾಲುಗಳು ಗಮನಸೆಳೆದವು. ಎಸ್.ಎಂ.ಪ್ರಭಾವತಿಯ ‘ಮಳೆಯನ್ನು ನೆನೆಯುತಲಿ’ ಕವಿತೆಯಲ್ಲಿ ‘ಇನ್ನಾದರೂ ಬದಲಾಗೋಣ ನಂಬಿಕೆಗಳ ಬದಿಗಿಡೋಣ, ಕೋಟಿ ಮರಗಳನ್ನು ನೆಟ್ಟು ಕಾಡನ್ನು ಬೆಳೆಸೋಣ’, ವೀರಮ್ಮ ನಾಗರಾಜ ಅವರ ಕವಿತೆ ‘ಮಳೆ’ ಬಂದಾರೆ ಬಂದು ಬಿಡು ಮಳೆ ತಾಯಿ ಮಗುವ ಅಪ್ಪಲು ಬರುವಂತೆ, ದುಃಖತಪ್ತ ಹೆಣ್ಣೊಂದು ಗಳಗಳನೆ ಅಳುವಂತೆ’, ರಮೇಶ್ ಸುಗ್ಗೇನಹಳ್ಳಿಯವರ ‘ಅನ್ನದಾತನ ಸ್ವಗತ’ ಕವಿತೆಯ ‘ಯಜ್ಞಕುಂಡವ ತೋಡಿ ಯಾಗ ಯಜ್ಞವ ಮಾಡಿ ಅಗ್ನಿಗೊಂಡದಿ ಸುರಿದೆವು.
ಸಾವಿರ ಕಾಡಿನ ಸೌದೆ ಮಳೆ ಬರಲಿ ಎಂದು’ ಡಾ.ಬಿ. ಸುನಿಲ್ರವರ ‘ಸೃಷ್ಟಿಯ ವೃಷ್ಟಿ’ ಕವಿತೆಯಲ್ಲಿ ‘ನೀ ಕೊಟ್ಟುದನೆಲ್ಲ ಕಾಯದೆ ಹೋದರೆ ಸೃಷ್ಟಿಯ ನಿಯಮಕೆ ಏನರ್ಥ’, ಸಿ.ಡಿ.ಕುಮಾರ್ರ ‘ಅನ್ನವಿಲ್ಲ ರೈತನ ತಟ್ಟೆಯಲ್ಲಿ ಬಲವಿಲ್ಲ ಉಳುವ ಯೋಗಿಯ ರಟ್ಟೆಯಲ್ಲಿ’, ಮದುಕಪ್ಪ ನೆಲಜೇರಿಯ ‘ಮಳೆ ಮತ್ತು ಎಮ್ಮೆ’ ಕವಿತೆಯಲ್ಲಿ ‘ಮಳೆ ಮತ್ತು ಎಮ್ಮೆ ನಮ್ಮ ಮನೆತನದ ಕಲ್ಪವೃಕ್ಷಗಳು’, ಮೊದಲಾದ ಕವಿತೆಯ ಸಾಲುಗಳು ಮಳೆಯ ಓಚಿತ್ಯವನ್ನು ಸಾರಿ ಹೇಳಿದವು.
ಕವಿಗೋಷ್ಠಿಯಲ್ಲಿ ಕವಿಗಳಾದ ಜಿ.ಪ್ರಕಾಶ್, ಷಣ್ಮುಖಪ್ಪ ಚಿತ್ರಗಾರ್, ಪೀರಾಸಾಬ್ ಹಂಚಿನಾಳ್ ಪೀರಾವಲಿ, ಎಸ್.ಶಾಮಸುಂದರರಾವ್, ಜಿಲಾನ್ಸಾಬ್ ಬಡಿಗೇರ, ಸಾಹಿತ್ಯ ಬಿಲಂಕರ್, ಚಂದ್ರಯ್ಯ ಸೊಪ್ಪಿಮಠ, ಅಶೋಕ ಕುಕನೂರು, ಎಸ್.ರಾಮಪ್ಪ, ಪರಶುರಾಮ ಸಂತೋಷ್ ಬಂಗಿ ದೊಡ್ಡ ಮಂಜುನಾಥ ಚಂದ್ರಯ್ಯಸೊಪ್ಪಿಮಠ ಸ್ವಾಗತ ರಾಜು ಬಿಲಂಕರ್ ನಿರೂಪಿಸಿದರು.