ಸಮಾಜದಲ್ಲಿ ಸ್ತ್ರೀ -ಪುರುಷ ಸಾಮರಸ್ಯತೆ ಕಾಣಬೇಕು : ಅನುರಾಧಾ ಕಾಪಸಿ
ಸಂಕೇಶ್ವರ : ಸಮಾಜದಲ್ಲಿ ಮಹಿಳೆಯು ಅಬಲೆಯಲ್ಲ ಸಬಲೆ, ಅಂಗ ತಾರತಮ್ಯತೆ ಮಾಡದೆ ಸ್ತ್ರೀ-ಪುರುಷ ಸಾಮರಸ್ಯತೆಯನ್ನು ಕಾಣಬೇಕೆಂದು ಶ್ರೀಮತಿ ಅನುರಾಧಾ ಕಾಪಸಿಯವರು ಹೇಳಿದರು.

ಹುಕ್ಕೇರಿ ತಾಲೂಕಿನ ಚಿಕಾಲಗುಡ್ಡ ಗ್ರಾಮದಲ್ಲಿನ ಶ್ರೀ ಶಂಕರಲಿಂಗ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿ.7ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮೊದಲ ಮಹಿಳಾ ಶಿಕ್ಷಕಿ, ಅಕ್ಷರದ ಅಮ್ಮ ಸಾವಿತ್ರಿಬಾಯಿ ಫುಲೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಹಾಗೂ ಸಸಿಗೆ ನೀರುಣಿಸುವುದರೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಈ ವೇಳೆಯಲ್ಲಿ ಅನುರಾಧಾ ಕಾಪಸಿಯವರು ಮಾತನಾಡಿದರು.
ಇದೇ ವೇಳೆಯಲ್ಲಿ ಪ್ರಿಯಾಂಕಾ ಪಾಟೀಲ, ಫಕೀರವ್ವ ಪಾಟೀಲ ಅವರು ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಮುಖ್ಯ, ಸ್ವಾವಲಂಬಿ ಬದುಕೇ ಬಂಗಾರವೆಂದು ನುಡಿದರು.
ಮಹಾದೇವಿ ಮಠಪತಿ, ಶ್ರೀಮತಿ ಶಾರವ್ವಾ ದರೋಜಿ ಅವರು ಮಾತನಾಡಿ, ಆರ್ಥಿಕವಾಗಿ ಮಹಿಳೆ ಸ್ವಾವಲಂಬಿ ಯಾಗಿರಬೇಕು, ಮಹಿಳೆ ಕಷ್ಟವಿದೆಯೆಂದು ಧೈರ್ಯಗುಂದದೆ ಜೀವನದಲ್ಲಿ ಮುನ್ನುಗ್ಗಿ ಯಶಸ್ವಿ ಯಾಗಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಇಂಗ್ಲೆಂಡ್ ಮತ್ತು ಐರ್ಲೆಂಡಿನಿಂದ ಬಂದ ಅತಿಥಿಗಳು ಈ ಕಾರ್ಯಕ್ರಮಕ್ಕೆ ಶೋಭೆ ತಂದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮಹಿಳಾ ಸಾಧಕಿಯರನ್ನು ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ಮಹಿಳಾ ಪಾಲಕರು ಉಪಸ್ಥಿತರಿದ್ದರು. ಪಾಲಕ ವರ್ಗದವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪಾಲಕರಿಗಾಗಿ ಮನರಂಜನೆಯ ಆಟಗಳನ್ನು ಆಯೋಜಿಸಲಾಯಿತು.
ಅದರಂತೆ ಶಿಕ್ಷಕರಿಗೆ ಚರ್ಚಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಶ್ರೀಮತಿ ಮಂಜುಳಾ ಹತನೂರೆ ಉಪಸ್ಥಿತರಿದ್ದು, ಅತಿಥಿಗಳನ್ನು ಸತ್ಕರಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಪಿ.ಪಿ.ಖವರೆ ಉಪಸ್ಥಿತರಿದ್ದರು. ಧನಶ್ರೀ ಕೇಸ್ತಿ ಸ್ವಾಗತಿಸಿದರು. ಗಿರೀಶ ಕರಗುಪ್ಪಿ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾ ಮುಷ್ಟಗಿ ವಂದಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.