ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ: ಹಿಟ್ಟಿನಮಠ
ಮಹಾಲಿಂಗಪುರ 30: ಮಾರಣಾಂತಿಕ ರೋಗ ಕೋವಿಡ್ ಮಹಾಮಾರಿಯಿಂದ ಪಾರಾಗಲು ಲಸಿಕೆ ಹಾಕಿಸಿಕೊಳ್ಳುವುದೊಂದೇ ಉಪಾಯ. ಯಾವುದೇ ಅಡ್ಡ ಪರಿಣಾಮವಿಲ್ಲದ ಲಸಿಕೆ ಇದಾಗಿದ್ದು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಯಪಡದೇ ಲಸಿಕೆ ಹಾಕಿಸಿಕೊಳ್ಳಬೇಕೆಂದು ಮನೋಸ್ಥೈರ್ಯವನ್ನು ಹೆಚ್ಚಿಸಿ ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿದರು.
ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಬಾಗಲಕೋಟ, ಸಮುದಾಯ ಆರೋಗ್ಯ ಕೇಂದ್ರ ಮಹಾಲಿಂಗಪುರ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯೂಥ್ ರೆಡ್ ಕ್ರಾಸ್ ವಿಂಗ್ ಇವುಗಳ ಸಹಯೋಗದಲ್ಲಿ ಮಹಾವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಕೋವಿಡ್-19 ಲಸಿಕಾ ಮಹಾಮೇಳ ನಿಮಿತ್ಯ ಕೋವಿಡ್ ಲಸಿಕೆಯನ್ನು ನೀಡಲಾಯಿತು.
ಸುಮಾರು 500 ಕ್ಕೂ ಅಧಿಕ ವಿದ್ಯಾರ್ಥಿಗಳು ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಪುರಸಭೆ ಸದಸ್ಯೆ ಸ್ನೇಹಲ್ ಅಂಗಡಿ, ಕೆ.ಎಲ್.ಇ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಅಶೋಕ ಅಂಗಡಿ, ಕಾನಿಪ ಅಧ್ಯಕ್ಷ ಎಸ್.ಎಸ್.ಈಶ್ವರಪ್ಪಾಗೋಳ, ಎನ್.ಎಸ್.ಎಸ್ ಅಧಿಕಾರಿ ಎ.ಎಂ.ಉಗಾರೆ, ಯೂಥ್ ರೆಡ್ ಕ್ರಾಸ್ ವಿಂಗ್ ಅಧಿಕಾರಿ ಆರ್.ಎಸ್.ಪೂಜಾರಿ, ವೈದ್ಯಾಧಿಕಾರಿ ಸಂಜಯ ತೇಲಿ, ಆರೋಗ್ಯ ನೀರೀಕ್ಷಣಾಕಾರಿ ಎಂ.ಬಿ.ಗೋಣಿ ಹಲವರು ಇದ್ದರು.