ಮಹಲಿಂಗಪುರ

ಮಳೆಯ ಅಬ್ಬರ ಕಡಿಮೆಯಾಗಿದ್ದು ಆತಂಕ ಪಡುವ ಅಗತ್ಯವಿಲ್ಲ : ಸಿದ್ದು ಸವದಿ

ಮಳೆಯ ಅಬ್ಬರ ಕಡಿಮೆಯಾಗಿದ್ದು ಆತಂಕ ಪಡುವ ಅಗತ್ಯವಿಲ್ಲ : ಸಿದ್ದು ಸವದಿ

ಮಹಾಲಿಂಗಪುರ 26: ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿಧಾರಾಕಾರ ಮಳೆ ಸುರಿಯುತ್ತಿದ್ದು ನಿನ್ನೆಯವರೆಗೆ ಒಳ ಹರಿವಿನ ಪ್ರಮಾಣ 57000 ಕ್ಯೂಸೆಕ್‌ಇದ್ದದ್ದುಇಂದು ಮಧ್ಯಾಹ್ನದ ವೇಳೆಗೆ 47000 ಕ್ಯೂಸೆಕ್ ಇಳಿದಿದ್ದು ಆತಂಕ ಪಡುವಅಗತ್ಯಇಲ್ಲಎಂದು ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಹೇಳಿದರು. 

ಅವರು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನಂದಗಾಂವಗ್ರಾಮಕ್ಕೆ ಭೇಟಿ ನೀಡಿ ನದಿ ನೀರಿನ ಪರೀಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅಧಿಕಾರಿಗಳು ಕೊಟ್ಟ ಮಾಹಿತಿ ಪ್ರಕಾರಇಂದು ಒಳ ಹರಿವಿನ ಪ್ರಮಾಣಕಡಿಮೆಆಗಿದ್ದು ನದಿ ನಿನ್ನೆಇದ್ದ ಮಟ್ಟದಲ್ಲಿ ಹರಿಯುತ್ತಿದ್ದುಯಾವುದೇಅಪಾಯಇಲ್ಲಎಂದು ತಿಳಿಸಿದರು. 

ಬೊಟ್ ವ್ಯವಸ್ಥೆ : ನಂದಗಾಂವಗ್ರಾಮಕ್ಕೆ ಖಾಯಂ ಆಗಿ ಒಂದು ಬೊಟ್ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು ಅಧಿಕಾರಿಗಳಿಗೆ ಇಂದೇತರಿಸಲು ಸೂಚಿಸಿದರು ಅದಕ್ಕೆತಗಲುವ ವೇಚ್ಚವನ್ನುತಾವೇ ಭರಿಸುವುದಾಗಿ ಹೇಳಿದರು. 

ಹಕ್ಕು ಪತ್ರ ವಿತರಣೆ : ಈಗಾಗಲೇ ನಂದಗಾಂವಗ್ರಾಮಕ್ಕೆ ಸ್ಥಳಾಂತರ ಹೊಸ ನಂದಗಾಂವಗ್ರಾಮದಲ್ಲಿ ಹಕ್ಕು ಪತ್ರ ವಿತರಣೆ ಸರಿಯಾದ ಕ್ರಮದಲ್ಲಿ ಆಗಿಲ್ಲ ಒಂದು ಕುಟುಂಬಕ್ಕೆ ಒಂದೇ ಹಕ್ಕು ಪತ್ರ ಕೊಡುವುದು ಸರ್ಕಾರದ ನಿಯಮ ಅದರ ಪ್ರಕಾರ ಪರೀಶೀಲಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸುವ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. 

ಈ ಸಂಧರ್ಭದಲ್ಲಿ ತಾಲೂಕ ಆರೋಗ್ಯಾಧಿಕಾರಿ ವೆಂಕಟೇಶ ಮಲಗಾನ, ನೋಡಲ್‌ಅಧಿಕಾರಿ ವೆಂಕಟೇಶ ಬೆಳಗಲ, ರಬಕವಿ ಬನಹಟ್ಟಿ ತಹಶೀಲ್ದಾರ್ ಗೀರೀಶ ಸ್ವಾದಿ, ಠಾಣಾಧಿಕಾರಿ ಪ್ರವೀಣ ಬೀಳಗಿ, ಮುಖಾಂಡಾರದ ಮಹಾಂತೇಶ್ ಹಿಟ್ಟಿನಮಠ, ಸಂಜಯ ಬರಕೋಲ, ಎಂ ಎಂಗುರವಮಹಾದೇವ ಮಣ್ಣನವರ, ವಿನೋದ ಪಾಟೀಲ ಸೇರಿ ಹಲವರು ಇದ್ದರು. 


ಸುದ್ದಿ ಓದಿ