ಟಿ.ಬಿ. ರೋಗಿಗಳನ್ನು ದೂರ ಇಡುವ ಅಗತ್ಯವಿಲ್ಲ; ಸಾಯಿರಾಬಾನು
ಹಗರಿಬೊಮ್ಮನಹಳ್ಳಿ.ಫೆ.20 : ವಿಜ್ಞಾನ ಮುಂದುವರಿದಿರುವ ಇತ್ತೀಚಿನ ದಿನಗಳಲ್ಲಿ ಟಿ.ಬಿ. ಅಥವಾ ಕ್ಷಯ ಎಂದಾಕ್ಷಣ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಅಮ್ಮ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕಿ ಸಾಯಿರಾಬಾನು ಹೇಳಿದರು.
ಪಟ್ಟಣದ ಸೋನಿಯಾಗಾಂಧಿ ನಗರದ ಅಂಗನವಾಡಿಯಲ್ಲಿ ಆಯೋಜಿಸಿದ್ದ ಟಿ.ಬಿ. ಪೋರಂ ಕಮಿಟಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಟಿ.ಬಿ.ರೋಗ ಎಂದಾಕ್ಷಣ ಜನರೆಲ್ಲಾ ಭಯಬೀತರಾಗುವ ಕಾಲವೊಂದಿತ್ತು. ಆದರೆ ವಿಜ್ಞಾನ ಮುಂದುವರಿದಂತೆಲ್ಲ ಎಲ್ಲಾ ಕಾಯಿಲೆಗಳಿಗೂ ಔಷಧಿಗಳನ್ನು ಕಂಡುಹಿಡಿಯಲಾಗಿದ್ದು ಕ್ಷಯ ಬಂದಾಕ್ಷಣ ಯಾರು ಭಯಪಡುವ ಪ್ರಮೇಯವೇ ಇಲ್ಲ. ಅಲ್ಲದೇ ಕ್ಷಯರೋಗಿಗಳನ್ನು ಯಾರೂ ಪ್ರತ್ಯೇಕವಾಗಿ ನೋಡುವ ಅಗತ್ಯತೆ ಇಲ್ಲ ಏಕೆಂದರೆ ಅವರು ನಮ್ಮಂತೆಯೇ ಮನುಷ್ಯರು ಆದ್ದರಿಂದ ಅವರನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕು. ಟಿ.ಬಿ ಬಂದವರನ್ನು ಗುರುತಿಸಿ ಸಕಾರಿ ಆಸ್ಪತ್ರೆಗೆ ಸೇರಿಸುವ ಮೂಲಕ ಅವರನ್ನು ಗುಣಮುಖರನ್ನಾಗಿಸಬಹುದು.ಟಿ.ಬಿ. ಇರುವವರನ್ನು ಗುರುತಿಸೋಣ ಮತ್ತು ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಗುಣಮುಖರನ್ನಾಗಿಸೋಣ. ಮುಂದಿನ ದಿನಗಳಲ್ಲಿ ನಮ್ಮ ಅಮ್ಮಾ ಸಂಸ್ಥೆಯವತಿಯಿಂದ ನಮ್ಮ ಸುತ್ತಮುತ್ತಲಿನ ಕ್ಷಯರೋಗಿಗಳನ್ನು ಗುರುತಿಸುವ ಕಾರ್ಯಕ್ರಮವನ್ನು ಸದ್ಯದಲ್ಲಿಯೇ ಆಯೋಜಿಸುವ ಮೂಲಕ ಟಿ.ಬಿ.ಮುಕ್ತ ದೇಶವನ್ನಾಗಿಸುವ ಆಂದೋಲನದಲ್ಲಿ ನಾವು ಪಾಲ್ಗೊಳ್ಳುತ್ತೇವೆ ಎಂದರು.
ಆರೋಗ್ಯ ಶುಶ್ರೂಶಕಿ ಮಂಜುಳಬಾಯಿ ಮಾತನಾಡಿ ಸಾರ್ವಜನಿಕರು ಟಿ.ಬಿ. ಕಾಯಿಲೆಗೆ ಎದರುವ ಅಗತ್ಯವಿಲ್ಲ ಅಂತವರನ್ನು ಗುರುತಿಸಿ ಸಾರ್ವಜನಿಕ ಆಸ್ಪತ್ರೆಗೆ ಕರೆತನ್ನಿ ಯಾರೂ ಭಯಪಡದೇ ಈ ಕಾಯಿಲೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದಾಗಿದೆ ಎಂದರು.
ಪುರಸಭೆ ಸದಸ್ಯ ಬಾಬುವಲಿ ಮಾತನಾಡಿ ಈ ಅಂಗನವಾಡಿ ಕೇಂದ್ರದಲ್ಲಿ ಟಿ.ಬಿ.ಪೋರಂ ಕಮಿಟಿ ಆರಂಭಿಸುತ್ತಿರುವುದು ಸ್ವಾಗತಾರ್ಹ ಕಾರ್ಯವಾಗಿದ್ದು ಯಾರೇ ಟಿ.ಬಿ.ಲಕ್ಷಣಗಳು ಇದ್ದರೆ ಕೂಡಲೇ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸ ಬೇಕು ನಾವೂ ಸಹ ಸಮಾಜದಲ್ಲಿ ಕ್ಷಯರೋಗಿಗಳನ್ನು ಗುರುತಿಸುವ ಕಾರ್ಯಕ್ಕೆ ಕೈ ಜೋಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಜರಿನಾಬೇಗಂ, ಮೋರಿಗೇರಿ ವೈದ್ಯ, ಅಂಗನವಾಡಿ ಕಾರ್ಯಕರ್ತೆ ಮಹೇಶ್ವರಿ, ನೀಲಾ, ಆಶಾಕಾರ್ಯಕರ್ತೆಯರಾದ ಮುದ್ದಕ್ಕ, ಲಲಿತಾ ಮತ್ತಿತರರು ಇದ್ದರು