ಅಭಿವೃದ್ಧಿ ವಿಷಯದಲ್ಲಿ ಅನ್ಯ ಪಕ್ಷದ ಶಾಸಕರೆಂಬ ಧೋರಣೆ ಮಾತಿಲ್ಲ : ಸಚಿವೆ ಶಶಿಕಲಾ ಜೊಲ್ಲೆ
ಹಗರಿಬೊಮ್ಮನಹಳ್ಳಿ 17: ತಾಲೂಕಿನ ವರಲಹಳ್ಳಿ ಗ್ರಾಮದಲ್ಲಿ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಶುಕ್ರವಾರ ಜಿಲ್ಲೆಗೊಂದು ಸರಕಾರಿ ಗೋಶಾಲೆ ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ ಜಿಲ್ಲಾ ಪ್ರಾಣಿ ದಯಾ ಸಂಘದವರೂ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ, ಗೋ ಶಾಲೆಯು 10ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ, ಸರಕಾರದಿಂದ 53ಲಕ್ಷ ಅನುದಾನ ಮಂಜೂರಾಗಿದ್ದು 28 ಲಕ್ಷ ಕಾಮಗಾರಿಗೆ ಬಿಡುಗಡೆಯಾಗಿದೆ, ನಿರ್ಮಿತಿ ಕೇಂದ್ರಕ್ಕೆ ಕೆಲಸ ನೀಡಲಾಗಿದೆ ಸ್ಥಳೀಯ ಶಾಸಕರು ಇನ್ನು ಹೆಚ್ಚಿನ ಅನುದಾನ ನೀಡುವಂತೆ ಕೇಳಿದ್ದಾರೆ ಇದರ ಬಗ್ಗೆ ಚರ್ಚಿಸುವ ಭವಸೆಯನ್ನು ನೀಡಿದರು, ಸರಕಾರದ ಮಹತ್ತರ ಅಕಾಂಕ್ಷಿಯಾದ ಗೋವುಗಳ ರಕ್ಷಣೆಯೇ ಮತ್ತು ಅವುಗಳಿಗೆ ಆಶ್ರಯ ನೀಡುವುದೇ ಈ ಗೋಶಾಲೆಯ ಪ್ರಮುಖ ಅಂಶವಾಗಿದೆ, ಗೋವುಗಳ ಅವಶ್ಯಕತೆ ಮುಗಿದ ಮೇಲೆ ವಿವಿಧ ರೀತಿಯಲ್ಲಿ ಗೋವುಗಳನ್ನು ದುರ್ಬಬಳಕೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕುವಲ್ಲಿ ಈ ಗೋಶಾಲೆ ನಿರ್ಮಾಣ ಮಾಡಲಾಗುತ್ತಿದೆ. ಪಶು ಇಲಾಖೆಯ ಡಿಡಿ ಹಾಗೂ ಜಿಲ್ಲಾಧಿಕಾರಿಗಳಿಗೆ ಗೋಶಾಲೆ ನಿರ್ಮಾಣದ ಬಗ್ಗೆ ಯಾವುದೇ ಸಮಸ್ಯೆ ಕಂಡುಬಂದರೆ ಕೂಡಲೇ ಪರಿಹರಿಸುವ ಭರವಸೆಯನ್ನು ನೀಡಲಾಗಿದೆ ಎಂದರು.
ತಾರತಮ್ಯದ ಮಾತೇ ಇಲ್ಲ : ಜಿಲ್ಲಾ ಉಸ್ತವಾರಿ ಸಚಿವೆಯಾಗಿ ಎಲ್ಲಾ ಕ್ಷೇತ್ರದ ಶಾಸಕರನ್ನು ಗಣನೆಗೆ ತೆಗೆದುಕೊಂಡು ಅಭಿವೃದ್ದಿ ವಿಷಯಗಳನ್ನು ಚರ್ಚೆ ಮಾಡಲಾಗುತ್ತಿದೆ, ಅಭಿವೃಧ್ಧಿ ವಿಷಯದಲ್ಲಿ ಮಲತಾಯಿ ಧೋರಣೆಯ ಮಾತೇ ಇಲ್ಲಾ, ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ನಾನು ಸೇರಿದಂತೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಕೆಲವೇ ದಿನಗಳಲ್ಲಿ ಈ ಭಾಗದ ಜನರಿಗೆ ಸಿಹಿ ಸುದ್ದಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಶಾಸಕ ಎಸ್.ಭೀಮಾನಾಯ್ಕ್, ವಿಜಯನಗರ ಜಿಲ್ಲಾಧಿಕಾರಿ ಅನಿರುಧ್ಧ ಶ್ರವಣ್ , ಎಸ್ಪಿ ಡಾ,ಅರುಣ, ಸಿಇಒ ಬೋಯರ್ ಹರ್ಷಲ್ ನಾರಾಯಣ ರಾವ್, ತಹಶಿಲ್ದಾರ್ ಶರಣಮ್ಮ, ಪಶು ಪಾಲನಾ ಇಲಾಖೆ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.