ಸೌಂದತ್ತಿ

ರಂಗಭೂಮಿಯು ನೈಜವಾದ ಬದುಕನ್ನು ಕಲಿಸುತ್ತದೆ: ಚೌಗಲೆ

ರಂಗಭೂಮಿಯು ನೈಜವಾದ ಬದುಕನ್ನು ಕಲಿಸುತ್ತದೆ: ಚೌಗಲೆ

ಸವದತ್ತಿ 26: ಮಾನವೀಯ ಮೌಲ್ಯಗಳಂತಹ ಗುಣಗಳನ್ನು ರಂಗಭೂಮಿಯಿಂದ ಪಡೆದುಕೊಳ್ಳಲು ಸಾಧ್ಯವಾಗಿದ್ದು, ರಂಗಭೂಮಿಯು ಮನುಷ್ಯನಿಗೆ ಮನುಷ್ಯನನ್ನಾಗಿ ನೈಜವಾದ ಬದುಕನ್ನು ಕಲಿಸುತ್ತದೆ ಎಂದು ಬೆಳಗಾವಿಯ ಖ್ಯಾತ ನಾಟಕಕಾರ, ಚಿತ್ರ ಕಲಾವಿದ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ.ಡಿ.ಎಸ್‌.ಚೌಗಲೆ ಹೇಳಿದರು.  

ಪಟ್ಟಣದ ಕೆ.ಎಲ್‌.ಇ.ಸಂಸ್ಥೆಯ ಎಸ್‌.ವಿ.ಎಸ್‌.ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ, ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಮತ್ತು ಧಾರವಾಡದ ಸಕ್ಕರಿ ಬಾಳಾಚಾರ್ಯ ಶಾಂತ ಕವಿ ಟ್ರಸ್ಟ್‌ ಸಹಯೋಗದಲ್ಲಿ ಏರಿ​‍್ಡಸಿದ ಆಧುನಿಕ ಕನ್ನಡ ರಂಗಭೂಮಿ ದಿನ ಮತ್ತು ಝಾಕಿರ್ ನದಾಫ್ ಅವರ ನಾಟಕ ಕೃತಿಗಳ ಲೋಕಾರೆ​‍್ಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಆಧುನಿಕ ಕನ್ನಡ ರಂಗಭೂಮಿ ಹುಟ್ಟಿದ್ದು ಮರಾಠಿ ರಂಗಭೂಮಿಯ ಪ್ರಭಾವದಿಂದ ಎನ್ನುವ ಮಾತಿದೆ. ಆದರೆ ಆಧುನಿಕ ಕನ್ನಡ ರಂಗಭೂಮಿಯ ಪ್ರಭಾವದಿಂದಲೇ ಆಧುನಿಕ ಮರಾಠಿ ರಂಗಭೂಮಿ ಹುಟ್ಟಿದೆ ಎಂದರು.  

ರಂಗ ಆರಾಧನ ಸಾಂಸ್ಕೃತಿಕ ಸಂಘಟನೆ ಕಾರ್ಯದರ್ಶಿ ಶಿವಾನಂದ ತಾರೀಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಪ್ರಾಚಾರ್ಯ ಮಾರುತಿ ಎ. ದೊಂಬರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 

ಡಾ.ವಾಯ್‌.ಎಮ್‌.ಯಾಕೊಳ್ಳಿ ಮತ್ತು ನಾಗೇಶ್ ನಾಯಕ ಅವರು ಝಾಕಿರ್ ನದಾಫ್ ಅವರ ನಾಟಕ ಕೃತಿಗಳನ್ನು ಬಿಡುಗಡೆಗೊಳಿಸಿ ಕೃತಿಗಳನ್ನು ಪರಿಚಯಿಸಿದರು.  

ಮಹಾವಿದ್ಯಾಲಯದ ಇಬ್ಬರು ರಂಗ ಪ್ರತಿಭೆಗಳಾದ ಶಾಂಭವಿ ಬಡಿಗೇರ ಮತ್ತು ಮಧು ತಳವಾರವರಿಗೆ ರಂಗಗೌರವ ಸಲ್ಲಿಸಿ ಗೌರವಿಸಲಾಯಿತು.  

ಎ.ಎ.ಹಳ್ಳೂರ ಮತ್ತು ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿ, ಪಾಲಕರು, ರಂಗ ಆರಾಧನಾ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. 

ಶಾಂಭವಿ ಬಡಿಗೇರ ಪ್ರಾರ್ಥಿಸಿದರು. ಡಾ.ಎ.ಎಫ್‌.ಬದಾಮಿ ಸ್ವಾಗತಿಸಿದರು. ಕೆ.ರಾಮರೆಡ್ಡಿ ಪರಿಚಯಿಸಿದರು. ವಚನಾ ಬಸಿಡೋಣಿ ನಿರೂಪಿಸಿದರು. ಝಾಕೀರ್ ನದಾಫ್ ವಂದಿಸಿದರು. 


ಸುದ್ದಿ ಓದಿ