ಸದ್ದಿಲ್ಲದೆ, ಶಂಕು ಇಲ್ಲದೆ ಸಾಗಿದೆ ಹಿಡಕಲದಿಂದ ಧಾರವಾಡಕ್ಕೆ ನೀರೇತ್ತುವ ಪೈಪ್ ಲೈನ್ ಕಾಮಗಾರಿ

ಸದ್ದಿಲ್ಲದೆ, ಶಂಕು ಇಲ್ಲದೆ ಸಾಗಿದೆ ಹಿಡಕಲದಿಂದ ಧಾರವಾಡಕ್ಕೆ ನೀರೇತ್ತುವ ಪೈಪ್ ಲೈನ್ ಕಾಮಗಾರಿ

ಬೆಳಗಾವಿ : ಯಾವದೇ ಸದ್ದಿಲ್ಲದೆ, ಶಂಕು ಸ್ಥಾಪನೆಯು ಇಲ್ಲದೆ ಜಿಲ್ಲೆಯ ಹಿಡಕಲ್ ಜಲಾಶಯದಿಂದ ಧಾರವಾಡಕ್ಕೆ ‌ಪೈಪ್‌ಲೈನ್ ಮೂಲಕ ನೀರು ಪೂರೈಕೆ ಕಾಮಗಾರಿ ನಡೆಯುತ್ತಿದ್ದು, ಕೈ ನಾಯಕರ ವಿರೋಧದ ನಡುವೆ ಕೂಡಾ ಈ ಕಾಮಗಾರಿ ಮುಂದೆ ವರೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. 

  ರಾಜ್ಯ ನೀರು ಸಲಹಾ ಸಮಿತಿಯಲ್ಲಿ ನಿರ್ಣಯ ತೆಗೆದುಕೊಂಡು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಬೆಳಗಾವಿಯಿಂದ ನೀರು ಪೂರೈಕೆಗೆ ಪ್ರಯತ್ನ ನಡೆಯುತ್ತಿದೆ.

   ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ ಬರುವ ರಾಜ್ಯ ನೀರು ಸಲಹಾ ಸಮಿತಿಯು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೇರಿ ಜಿಲ್ಲೆಯ ಯಾವ ಕೈ ನಾಯಕರ ಗಮನಕ್ಕೆ ತರದೇ ಹಿಡಕಲ್ ಜಲಾಶಯದಿಂದ ಧಾರವಾಡಕ್ಕೆ ನೀರು ಒಯ್ಯುವ ಕಾರ್ಯ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.

  ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿರುವ ಹಿಡಕಲ್ ಜಲಾಶಯದಿಂದ ಧಾರವಾಡದ ಕೆಐಎಡಿಬಿ ಯಿಂದ ರೂಪಿಸಲಾಗಿರುವ 300 ಕೋಟಿ ವೆಚ್ಚದ ಯೋಜನೆಗೆ ನೀರು ಸಾಗಿರುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸದೇ ಧಾರವಾಡದ ಕೆಐಎಡಿಬಿ ಅಧಿಕಾರಿಗಳು ಕಾಮಗಾರಿ ಆರಂಭಿಸಿದ್ದಾರೆ. 

     ಬೆಳಗಾವಿ ಜಿಲ್ಲಾಡಳಿತದ ಅನುಮತಿ ಇಲ್ಲದೇ ನಡೆಯುತ್ತಿರುವ ಈ ಯೋಜನೆ ಸ್ಥಗಿತಗೊಳಿಸಲು ಒತ್ತಾಯ ಮಾಡಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್‌ಗೆ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್ ಒತ್ತಾಯ ಮಾಡಿದ್ದಾರೆ ಎನ್ಮಲಾಗಿದೆ.

   ಬೇಸಿಗೆ ಸಮಯದಲ್ಲಿ ‌ಬೆಳಗಾವಿ ಜನತೆಗೆ ಕುಡಿಯುವ ನೀರಿನ ಅಭಾವ ಸೃಷ್ಟಿ ಆಗುವ ಮುನ್ಸೂಚನೆ ಇದ್ದರೂ ಜಿಲ್ಲೆಯ ನಾಯಕರಿಗೆ ಗೊತ್ತಾಗದೇ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಕೊಂಡೊಯ್ಯವ ಕಾರ್ಯ ನಡೆಯುತ್ತಿದೆ.

   ಈ ಯೋಜನೆ ‌ಜಾರಿಗೆಗೆ ನಮ್ಮ ವಿರೋಧವಿದೆ, ತಕ್ಷಣವೇ ‌ಯೋಜನೆ ನಿಲ್ಲಿಸುವಂತೆ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಸೇಠ್ ಒತ್ತಾಯ ಮಾಡಿದ್ದಾರೆ.

   ಎರಡು ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ‌ವಹಿಸುವುದಾಗಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಬೆಳಗಾವಿಯಲ್ಲಿ ಮೊನ್ನೆ ನಡೆದ ಕೆಡಿಪಿ ಸಭೆಯಲ್ಲಿ ಧಾರವಾಡಕ್ಕೆ ನೀರು ಪೂರೈಸುವ ಯೋಜನೆಗೆ ವಿರೋಧ ವ್ಯಕ್ತವಾಗಿದೆ.

ಸುದ್ದಿ ಓದಿ