ಸಮಾಜದಲ್ಲಿ ಗುರು ಎಂಬ ಪದಕ್ಕೆ ವಿಶೇಷ ಗೌರವವಿದೆ - ಕರಬಸಪ್ಪ ಮೇಗಳಮನಿ
ರಾಣೇಬೆನ್ನೂರು 14 : ತಾಲ್ಲೂಕಿನ ಬೆನಕನಕೊಂಡ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸುಧೀರ್ಘ ಸೇವೆ ಸಲ್ಲಿಸಿ, ವಯೋ ಸಹಜ ನಿವೃತ್ತಿ ಹೊಂದಿದ ಬಿ. ಗುಡ್ಡಪ್ಪ ಅವರ ಬೀಳ್ಕೊಡುಗೆ ಅಭಿನಂದನಾ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಎಸ್. ಡಿ.ಎಮ್. ಸಿ. ಅಧ್ಯಕ್ಷ ಕರಬಸಪ್ಪ ಮೇಗಳಮನಿ ಅವರು ಸಮಾಜದಲ್ಲಿ ಗುರು ಎಂಬ ಪದಕ್ಕೆ ಬಹು ಅರ್ಥವಿದೆ. ಗುರುಗಳಿಗೆ ಸದಾವ ಕಾಲವು ಮಾನ, ಮನ್ನಣೆ, ಗೌರವ, ಪ್ರೀತಿ, ವಿಶ್ವಾಸ ಅಭಿಮಾನ ಇದ್ದೇ ಇರುತ್ತದೆ. ಅವರಿಗೆ ಸದಾಕಾಲ ಚಿರಋಣಿಯಾಗಿರುತ್ತಾರೆ ಎಂದ ಅವರು, ಶಿಕ್ಷಕರ ಸೇವೆ ಗ್ರಾಮದ ನಾಗರಿಕರು ಎಂದೆಂದಿಗೂ ಮರೆಯುವುದಿಲ್ಲ ಎಂದು ಅಭಿನಂದಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಂಜುಳಾ ಅಸುಂಡಿ, ಸದಸ್ಯ ಲಿಂಗನಗೌಡ ಸಂಗನಗೌಡ್ರ ಶಿಕ್ಷಣ ಪ್ರೇಮಿ ರಾಜೇಸಾಬ್ ಕಳ್ಳಿಮನಿ, ಸಮಾಜಸೇವಕ ಬಸಣ್ಣ ಬಿದರಿ, ಶಿಕ್ಷಣ ಸಂಯೋಜಕ ನಿರಂಜನ ಮೂರ್ತಿ, ದೈಹಿಕ ಶಿಕ್ಷಣಾಧಿಕಾರಿ ಪ್ರಭಾಕರ ಚಿಂದಿ, ಸಮನ್ವಯ ಅಧಿಕಾರಿ ಮಂಜು ನಾಯ್ಕ, ಸಿಆರ್ಿ, ಚನ್ನಪ್ಪನವರ ಶಿವರಾಜ ಅಡರಕಟ್ಟಿ, ಆಂಗ್ಲ ಭಾಷಾ ಶಿಕ್ಷಕ ವೀರೇಶ್,ಅ. ದಾ. ಸ. ನಿರ್ದೇಶಕ ಸಿ.ವಿ. ಅಡಿವೇರ, ಜಗದೀಶ್ ಮಳಿಮಠ, ಎಸ್.ಎಂ. ತೇವರಿ ಮೊದಲಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್, ಡಿ, ಎಂ, ಸಿ, ಸದಸ್ಯರಾದ, ಜಯಣ್ಣ ಕೆಳಗಿನಮನಿ, ಬ್ರಹ್ಮಾಚಾರಿ ಕಮ್ಮಾರ, ಪವಿತ್ರಾ ಕೆರೋಡಿಮಠ, ಹಸೀನಾ. ಬಿ, ಪಂಚಾಯತ್ ಸದಸ್ಯರಾದ, ಗಣೇಶ್ ಹಳ್ಳಿಗುಡಿ, ಪ್ರೌಢ. ಶಾ. ಸಂಘದ ರಮೇಶ್ ಅಳಲಗೇರಿ, ನಾಗರಾಜ್ ಮತ್ತೂರ, ಮಂಜುನಾಥ್ ಕರೂರ, ಆನಂದ ದೇವರಮನಿ, ಸೇರಿದಂತೆ ಶಾಲಾ ಶಿಕ್ಷಕರು, ಗ್ರಾಮದ ಗಣ್ಯರು ಉಪಸ್ಥಿತರಿದ್ದರು.