ಸಿಂದಿಹಟ್ಟಿಯ ಮಹಿಳೆ ಸಾಹಸಕ್ಕೆ ಎಲ್ಲೆಡೆ ಮೆಚ್ವುಗೆ : ದಿನನಿತ್ಯ ಟ್ರ್ಯಾಕ್ಟರ್ ಮೂಲಕ 15 ಟನ್ ಕಬ್ಬು ಹಿರಣ್ಯಕೇಶಿ ಕಾರಖಾನೆ ಸಾಗಿಸುತ್ತಿರುವ ಬಡ ಮಹಿಳೆ : ಈ ಸಾಹಸಕ್ಕೆ ಜನರಿಂದ ಮೆಚ್ವುಗೆ

ಸಿಂದಿಹಟ್ಟಿಯ ಮಹಿಳೆ ಸಾಹಸಕ್ಕೆ ಎಲ್ಲೆಡೆ ಮೆಚ್ವುಗೆ  : ದಿನನಿತ್ಯ ಟ್ರ್ಯಾಕ್ಟರ್ ಮೂಲಕ 15 ಟನ್ ಕಬ್ಬು ಹಿರಣ್ಯಕೇಶಿ ಕಾರಖಾನೆ ಸಾಗಿಸುತ್ತಿರುವ ಬಡ ಮಹಿಳೆ : ಈ ಸಾಹಸಕ್ಕೆ ಜನರಿಂದ ಮೆಚ್ವುಗೆ

ಪಾರೇಶ ಭೋಸಲೆ

ಬೆಳಗಾವಿ : ಇಂದಿನ ದಿನಗಳಲ್ಲಿ ಮಹಿಳೆಯರು ಯಾವ ಕೆಲಸ ಕಾರ್ಯಗಳಲ್ಲಿ ಕಡಿಮೆ ಇಲ್ಲ ಅನ್ನುವದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೋಬ್ಬ ಬಡ ಮಹಿಳೆ ಹೊಟ್ಟೆಪಾಡಿಗಾಗಿ ದಿನ ನಿತ್ಯ 15 ಮೇ. ಟನ್ ಕಬ್ಬು ಕಾರಖಾನೆಗೆ ಸಾಗಿಸುವ ಮೂಲಕ ಎಲ್ಲರ ಮೆಚ್ವುಗೆಗೆ ಪಾತ್ರವಾಗಿದ್ದಾರೆ. 


  ಹೌದು ಓದುಗರೇ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಿಂಧಿ ಹಟ್ಟಿಯ ಮಹಾದೇವಿ ಎಮ್ಮೆಗೋಳ ಎನ್ನುವ 42 ವಯಸ್ಸಿನ ಮಹಿಳೆಯು ಕಳೆದ ಮೂರು ದಿನಗಳಿಂದ ದಿನನಿತ್ಯ ಟ್ರ್ಯಾಕ್ಟರ್ ದಲ್ಲಿ ಸುಮಾರು 15 ಮೇಟ್ರಿಕ್ ಟನ್ ಕಬ್ಬನ್ನು ಜಮೀನುಗಳಿಂದ ತುಂಬಿ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ತರುತ್ತಿದ್ದಾರೆ. 

   ದಿನನಿತ್ಯ ಸುಮಾರು 40ರಿಂದ 50 ಕಿಲೋಮೀಟರ್ ವರೆಗೆ 15 ಮೆಟ್ರಿಕ್ ಟನ್ ಕಬ್ಬು ತುಂಬಿದ ಟ್ರ್ಯಾಕ್ಟರ್ ನಡೆಸಿಕೊಂಡು ಬರುವ ಈ ಮಹಿಳೆಯ ಸಾಹಸಕ್ಕೆ ಎಲ್ಲೇಡೆ ಮೆಚ್ವುಗೆ ವ್ಯಕ್ತವಾಗುತ್ತಿದ್ದು, ಮಹಿಳೆಯು ಟ್ರ್ಯಾಕ್ಟರ್ ನಲ್ಲಿ ಟನ್ ಗಂಟಲೆ ಕಬ್ಬು ಸಾಗಿಸುವ ಈ ಕಾರ್ಯಕ್ಕೆ ಪುರುಷರೆ ನಿಬ್ಬೇರಗಾಗಿ ನೋಡುತ್ತ ನಿಲ್ಲುವಂತೆ ಮಾಡಿದ್ದಾಳೆ. 

     ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ರಂಗದಲ್ಲಿ ಕೆಲಸ ಮಾಡುತ್ತಿದ್ದು, ನಾವು ದಿನನಿತ್ಯ ಪೆಟ್ರೋಲ್ ಬಂಕ್ ಗಳಲ್ಲಿ ಅಟೋ ರಿಕ್ಷಾ,ಕಾರು ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಕೆಲಸ ಮಾಡುವದನ್ನು ನೋಡುತ್ತಿದ್ದೇವೆ. ಆದರೆ ಸ್ವತಃ ಮಹಿಳೆ ಕಬ್ಬು ತುಂಬಿದ ಟ್ರ್ಯಾಕ್ಟರ್ ನ್ನು ಚಲಾಯಿಸಿಕೊಂಡು ಬಂದು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ‌ ಮಾಡುತ್ತಿರುವ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. 

    ಈ ಕುರಿತು ನಮ್ಮ ಪ್ರತಿನಿಧಿ ಯೊಂದಿಗೆ ಮಾತನಾಡಿದೆ ಮಹಿಳೆ ಮಹಾದೇವಿ ನಾನು ಬಡ ಕುಟುಂಬದವಳಾಗಿದ್ದು, ನನ್ನ ಉಪಜೀವನಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ ಮೂರು ದಿನಗಳಿಂದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ದಿನನಿತ್ಯ 15 ಟನ್ ಕಬ್ಬು ಟ್ರ್ಯಾಕ್ಟರ್ ಮೂಲಕ ಕಬ್ಬು ಪೂರೈಸುತ್ತಿದ್ದೇನೆ ಎಂದು ಹೇಳಿದ್ದಾರೆ. 




ಸುದ್ದಿ ಓದಿ