ರಾಣೆಬೆನ್ನೂರ

ಶಿಕ್ಷಕ ವೃತ್ತಿ ಸದಾಕಾಲ ಅಭಿಮಾನ ಮತ್ತು ಗೌರವದ ವೃತ್ತಿಯಾಗಿದೆ

ಶಿಕ್ಷಕ ವೃತ್ತಿ ಸದಾಕಾಲ ಅಭಿಮಾನ ಮತ್ತು ಗೌರವದ ವೃತ್ತಿಯಾಗಿದೆ

ಲೋಕದರ್ಶನ ವರದಿ 

ರಾಣೆಬೆನ್ನೂರು 31: ಶಿಕ್ಷಕರಾದವರೆಗೆ ವೃತ್ತಿಯಿಂದ ಇರಲಿ ಇಲ್ಲದೇ ಇರಲಿ ಸಮಾಜ ಶಿಕ್ಷಕ ಸಮುದಾಯಕ್ಕೆ ಸದಾವಕಾಲವು ಗೌರವ ಮಾನ - ಸನ್ಮಾನಗಳಿವೆ  ಅಂತಹ ಸೇವಾ ಕಾರ್ಯ ಮೆರೆಯಬೇಕಾಗುತ್ತದೆ ಎಂದು ಬಿ.ಎ. ಜೆ.ಎಸ್‌.ಎಸ್‌. ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾಕ್ಟರ್ ಆರ್‌. ಎಂ. ಕುಬೇರ​‍್ಪ ಹೇಳಿದರು. ಅವರು ತಾಲೂಕಿನ ನಿಟ್ಟೂರು ಗ್ರಾಮದಲ್ಲಿರುವ ಬಿ.ಎ.ಜೆ.ಎಸ್‌.ಎಸ್‌. ಶಿಕ್ಷಣ ಸಂಸ್ಥೆಯ ಮಹಾತ್ಮ ಬಾಪೂಜಿ ಪ್ರೌಢಶಾಲೆಯಲ್ಲಿ ದೇವಾ ನಿವೃತ್ತಿ ಹೊಂದಿದ ಶಿವಪುತ್ರ​‍್ಪ ಕೋಟಿಹಾಳ ಅವರ ಬೀಳ್ಕೊಡುಗೆ  ಹಾಗೂ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತಿ ವೃತ್ತಿಗೆ ಹೊರತು, ಅದು ಪ್ರವರ್ತಿಗಲ್ಲ.

ಸೇವೆ ಸಲ್ಲಿಸುವ ಮನೋಭಾವ ಹೊಂದಿರುವವರಿಗೆ ಸದಾಕಾಲವೂ ಅವರ ಜೀವನಪರ್ಯಂತ ಶಿಕ್ಷಕರಾಗಿಯೇ ಇರುತ್ತಾರೆ ಎಂದ ಅವರು ಶಿವಪುತ್ರ​‍್ಪ ಅವರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ನಿತ್ಯ ನಿರಂತರ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಭವಿಷ್ಯದ ಯುವ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದರು. ಅದ್ದೂರಿಯಾಗಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಕಚೇರಿಯ ದೈಹಿಕ ಶಿಕ್ಷಣಾಧಿಕಾರಿ ಪ್ರಭಾಕರ್ ಚಿಂದಿ, ಗ್ರಾಮದ ಹಿರಿಯ ನಾಗರಿಕರಾದ ಶಿವಪ್ಪ ನಂದಿಹಳ್ಳಿ, ಜಯಪ್ಪ ಮಠದ, ಮುಖ್ಯ ಶಿಕ್ಷಕರಾದ ಅಜ್ಜಪ್ಪ ಬಿಜ್ಜುರು, ಎಸ್ ಆರ್ ರಾಯಚೂರು, ಪ್ರವೀಣ್ ಎನ್‌. ಕೆ, ಸೇರಿದಂತೆ ಪ್ರೌಢಶಾಲೆಯ ಮತ್ತಿತರ ಶಿಕ್ಷಕರು ಸಿಬ್ಬಂದಿ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ