ವಿವಿಧ ಬೇಡಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ, ಬೇಡಿಕೆ ಇಡೇರುವವರೆಗೂ ಮುಷ್ಕರದಿಂದ ಹಿಂದೆ ಸಿರಿಯಲ್ಲ
ಮುದ್ದೇಬಿಹಾಳ 26: ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಇದರ ಮುದ್ದೇಬಿಹಾಳ ತಾಲೂಕಾ ಘಟಕದ ವತಿಯಿಂದ ಗುರುವಾರ ತಹಶಿಲ್ದಾರ ಕಚೇರಿ ಎದುರು ಕೈಗೆ ಕಪ್ಪು ಪಟ್ಟಿ ಧರಿಸಿ ಇಲ್ಲಿನ ತಾಲೂಕಾ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ ನಾಯ್ಕೋಡಿ ಅವರು ಮಾತನಾಡಿ ಇತ್ತಿಚಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸರಕಾರದ ನಿಗದಿತ ನಿಯಮ ಸಮಯವನ್ನು ಮೀರಿ ಕರ್ತವ್ಯವನ್ನು ನಿರ್ವಹಿಸುವಂತೆ ಒತ್ತಡ ಹೇರಲಾಗುತ್ತಿದೆ. ಜೊತೆಗೆ ಈಗಾಗಲೆ ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಷನ್ಗಳ ಮೂಲಕ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಸಂಯೋಜನೆ, ಈ ಆಫಿಸ್, ಆದಾರ ಸೀಡ್, ಲ್ಯಾಂಡ್ ಬೀಟ್, ಬಗೈರ ಹುಕುಂ, ಹಕ್ಕು ಪತ್ರ, ಸಮೂನೆ1-5ರ ವೆಬ್ ಅಪ್ಲಿಕೇಷನ್, ಪೌತಿ ಆಮದೋಲನಾ ಆಪ್, ಸಂರಕ್ಷಣೆ (ಬೆಳೆ ಕಟಾವು ಮೋಬೈಲ್ ಆಪ್) ಸಿ- ವಿಜಲ್, ನವೋದಯ, ಗರುಡ ಆಪ್, ಭೂಮಿ, ಎಲೆಕ್ಟ್-1ವೋಟರ್ ಹೇಲ್ಪ್ ಲೈನ, ಬೆಳೆ ಸಮೀಕ್ಷೆ, ಬೆಳೆ ಸಮೀಕ್ಷೆಯ ಅನುಮೋದನೆ ವೆಬ್ ಆಪ್, ಪಿ ಎನ್ ಕಿಸಾನ್, ವೆಬ್ ಆಪ್, ಕೃಷಿ ಗಣತಿ, ನಿರಾವರಿ ಗಣತಿ, ದೀಶಾಂಕ ಸೇರಿದಂತೆ ಸುಮಾರು 21 ಅಧಿಕ ಮೊಬೈಲ್/ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್ ಸಾಧನ, ಲ್ಯಾಪ್ ಟಾಪ್ ಹಾಗೂ ಅದಕ್ಕೆ ಅವಶ್ಯಕವಾಗಿರುವ ಇಂಟರ್ ನೆಟ್, ಸ್ಕ್ಯಾನರ್ ಗಳನ್ನು ಒದಗಿಸಿಲ್ಲ, ಜತೆಗೆ ಸಾರ್ವಜನಿಕ ಸೇವೆ ಒದಗಿಸಲು ಗ್ರಾಮ ಆಡಳಿತ ಅಧಿಕಾರಿಗಳು ಕುಳಿತುಕೊಳ್ಳಲು ಒಂದು ಕೋಠಡಿಯ ವ್ಯವಸ್ಥೆಯೂ ಕೂಡ ಸರಕಾರದಿಂದ ನಮಗೆ ಒದಗಿಸಿರುವುದಿಲ್ಲಿ ಹೀಗಿರುವಾಗ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದರಿಂದ ಕ್ಷೇತ್ರಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳ ಸಾವು ನೋವುಗಳು ಸಂಭವಿಸುತ್ತಿವೆ ಮಾತ್ರವಲ್ಲದೇ ನಿರಂತರವಾಗಿ ಮಾರಣಾಂತಿಕ ಹಲ್ಲೆ ನಡೆಯುತ್ತಿರುವ ಘಟನೆಗಳು ನಡೆದು ಹೋಗಿವೆ. ಇಂತಹ ಸಂದರ್ಭದಲ್ಲಿ ಸರಕಾರ ನಮಗೆ ಯಾವೂದೇ ಶಸ್ತ್ರಾಸ್ತ್ರವಿಲ್ಲದೇ ಯುದ್ಧಕ್ಕೆ ಹೋಗು ಎಂದು ಹೇಳುತ್ತಿದೆ ಅದು ಹೇಗೆ ಸಾಧ್ಯ ಎಂಬುದುನ್ನು ಸರಕಾರ ಅರ್ಥೈಸಿಕೊಳ್ಳಬೇಕಿದೆ. ಎಲ್ಲ ಮೊಬೈಲ್ ಆಪ್ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿರುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗುತ್ತಿವೆ. ಇದರೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸರಕಾರದಿಂದ ಸುಸಜ್ಜಿತ ಕಚೇರಿ ಜತೆಗೆ ಉತ್ತಮ ಗುಣಮಟ್ಟ ಟೆಬಲ್ ಕುರ್ಚಿ ಅಲ್ಮೇರಾ, ಅತ್ಯುತ್ತಮ ಗುಣಮಟ್ಟ ಮೋಬೈಲ್ ಫೋನ್ ಸಿಯುಜಿ ಸಿಮ್ ಮತ್ತು ಡೆಟಾ, ಗೂಗಲ್ ಕ್ರೋಮ್ ಬುಕ್ ಉಳ್ಳ ಲ್ಯಾಪ್ ಟ್ಯಾಪ್, ಪ್ರಿಂಟರ್ ಮತ್ತು ಸ್ಕ್ಯಾನರ ಸೇರಿದಂತೆ ಮೂಲ ಸೌಲಭ್ಯಗಳು ಹಾಗೂ ಸೇವಾ ನಿಯಮಗಳಿಗೆ ಸಂಬಂಧಿಸಿದ ಸೌಲಭ್ಯಗಳನ್ನು ಸರ್ಕರ ಕೂಡಲೇ ಒದಗಿಸಬೇಕು ಎಂದು ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ಧಿಷ್ಠಾವಧಿ ಮುಷ್ಕರವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಕಾರಣ ಸರಕಾರಿ ಈ ಕೂಡಲೇ ಸಮೂಹದ ಬೇಡಿಕೆ ಈಡೇರಿಸಿ ಉತ್ತಮ ಮತ್ತು ಗುಣಮಟ್ಟದ ರೀತಿಯಲ್ಲಿ ಸಾರ್ವಜನಿಕ ಮತ್ತು ಸರ್ಕಾರಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡಬೇಕು ಇಲ್ಲದಿದ್ದರೇ ಬೇಡಿಕೆ ಇಡೇರಿಸುವವರೆಗೂ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೇಯೇ ಇಲ್ಲವೆಂದು ಹೇಳಿದರು.
ಈ ವೇಳೆ ತಾಲೂಕಾ ನೌಕರರ ಸಂಘದ ಅಧ್ಯಕ್ಷ ಎಸ್ ಆರ್ ಕಟ್ಟಿಮನಿ, ಹಾಗೂ ವಿವಿಧ ದಲಿತಪರ ಸಂಘಟನೆಗಳ ಮುಖಂಡ ಹರೀಷ್ ನಾಟಿಕಾರ, ಅವರು ಮುಷ್ಕರಕ್ಕೆ ಬೆಂಬಲಿಸಿ ಮಾತನಾಡಿ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಸ್ಪಷ್ಟ ಹಾಗೂ ನಿಖರವಾಗಿವೆ ನಿಮಾನುಸಾರ ಯಾರೇ ಆಗಲಿ 8 ಗಂಟೆಗಳು ಮಾತ್ರ ಸರಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂಬುದು ನಿಯಮವೇ ಇದೆ ಆದರೆ ಗ್ರಾಮ ಅಧಿಕಾರಿಗಳು ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೂ ಕರ್ತವ್ಯ ನಿರ್ವಹಿಸುತ್ತಿರುವುದು ನೋವಿನ ಸಂಗತಿ ಸರಕಾರಗಳು ಇವರ ಹೋರಾಟಕ್ಕೆ ಸ್ಪಂದಿಸಿ ಬೇಡಿಕೆ ಇಡೇರಿಸುವ ಮೂಲಕ ಸೂಕ್ತ ನ್ಯಾಯ ಒದಗಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿಕೊಂಡರು.
ಕಂದಾಯ ನೀರಕ್ಷಕ ವೆಂಕಟೇಶ ಅಂಬಿಗೇರ, ಕಂದಾಯ ನೀರೀಕ್ಷಕ ಮಹಾಂತೇಶ ಮಾಗಿ, ಬಸನಗೌಡ ಪಾಟೀಲ, ಶಿರಸ್ತೆದಾರ ಜಿ ಎನ್ ಕಂಠಿ, ಉಪತಹಶಿಲ್ದಾರ ನಿಂಗಪ್ಪ ಮಾವಿನಮಟ್ಟಿ, ಸಂಘದ ಜಿಲ್ಲಾ ಅಧ್ಯಕ್ಷ ಗಂಗಾಧರ ಜೂಲಗುಡ್ಡ, ಕಂದಾಯ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ ಹುನಗುಂದ, ತಾಲೂಕಾ ಅಧ್ಯಕ್ಷ ಮನೋಜ ರಾಠೋಡ, ಸುನೀಲ ಚವ್ಹಾಣ, ಉಪಾಧ್ಯಕ್ಷೆ ಅನುಪಮಾ ಪೂಜಾರಿ, ಗ್ರಾಮ ಸಹಾಯಕರ ಸಮಘದ ಅಧ್ಯಕ್ಷ ಮುತ್ತಣ್ಣ ತಳವಾರ, ರಾಮಪ್ಪ ಹೊಸೂರ, ರಫಿಕ ಮುಲ್ಲಾ, ದೇವರಾಜ ಗುರಿಕಾರ, ಅಮ್ ಸಿದ್ದ ಬಾಬಾನಗರ, ಆರತಿ ಬಳವಾಟ, ಗಂಗಮ್ಮ ಕುಂಬಾರ, ಕಾವ್ಯಾ ಮುಲ್ಲಾಳ, ಸಚಿನ ಗೌಡರ, ಕುಮಾರ ಆಲಗೂರ, ಹರ್ಷೀತ, ಉಮಾಪತಿ ರಾಠೋಡ, ಅನೀಲ ಚವ್ಹಾಣ, ಚಂದ್ರಶೇಖರ ಚವ್ಹಾಣ, ಜೈನಾಬಿ ಕಮತಗಿ, ಬಿ.ಎಸ್ ನಂದುಗೊಂಡ ಉಪಸ್ಥಿತರಿದ್ದರು.