ಶಿಗ್ಗಾವ್

ಬೂತ್ ಮಟ್ಟದ ಕಾರ್ಯಕರ್ತರ ಶಕ್ತಿ ಪಕ್ಷದ ಶಕ್ತಿಯಾಗಿದೆ : ಮಯೂರ ಜಯಕುಮಾರ

ಬೂತ್ ಮಟ್ಟದ ಕಾರ್ಯಕರ್ತರ ಶಕ್ತಿ ಪಕ್ಷದ ಶಕ್ತಿಯಾಗಿದೆ : ಮಯೂರ  ಜಯಕುಮಾರ

ಶಿಗ್ಗಾವಿ  16: ಭೂತ್‌ಗಳಲ್ಲಿ ಯಾವ ರೀತಿ ಕಾರ್ಯನಿರ್ವಹಿಸಿದ್ದೀರಿ ಹಾಗೂ ಮುಂದಿನ ಸಂಘಟನೆ ಬಗ್ಗೆ ಏನು ಕೆಲಸ ಮಾಡುತ್ತಿರುವಿರಿ ಈ ಉಪಚುನಾವಣೆ ನಮಗೆ ಅತ್ಯಂತ ಪ್ರತಿಷ್ಠೆ ಮತ್ತು ಮಹತ್ವದ ಚುನಾವಣೆಯಾಗಿದ್ದು ಬೂತ್ ಮಟ್ಟದ ಕಾರ್ಯಕರ್ತರ ಶಕ್ತಿ ಪಕ್ಷದ ಶಕ್ತಿಯಾಗಿದ್ದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಎಐಸಿಸಿ ಕಾರ್ಯದರ್ಶಿ ಉಸ್ತುವಾರಿ ಮಯೂರ  ಜಯಕುಮಾರ ಸೂಚಿಸಿದರು. 

ಪಟ್ಟಣದ ಪುರಸಭೆ ವ್ಯಾಪ್ತಿಯ ಭೂತ ಅಧ್ಯಕ್ಷರ ಹಾಗೂ ಸದಸ್ಯರ ಕಾರ್ಯಕ್ರಮ ಯಶಸ್ವಿ ಉಸ್ತುವಾರಿ ಮಯೂರ ಜಯಕುಮಾರ ನೇತೃತ್ವದಲ್ಲಿ ಪಟ್ಟಣದ ಅಂಜುಮನ್ ಭವನ ಹತ್ತು ಸಂಖ್ಯೆಯ ಭೂತಗಳು ಮತ್ತು ಗುಜರಾತಿ ಭವನದಲ್ಲಿ 11 ಸಂಖ್ಯೆ ಬೂತುಗಳ ಪರಶೀಲನೆ ಕಾರ್ಯಕ್ರಮ ಜರುಗಿತು. 

 ಜಿಲ್ಲಾಧ್ಯಕ್ಷ ಸಂಜೀವ್ ನೀರಲಗಿ ಮಾತನಾಡಿ ಪಟ್ಟಣ ಪುರಸಭೆ ವ್ಯಾಪ್ತಿಯ ಭೂತಗಳ ಪರೀಶೀಲನೆ ಸಭೆ ಯಶಸ್ವಿಯಾಗಿದೆ ಎಂದು ಹೇಳಿದರು.  ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಸೈಯದ ಅಜ್ಜಂಪಿರ್ ಖಾದ್ರಿ, ಸಿಎಂ ಫೈಜ, ಮುಖಂಡ ಯಾಸಿರಖಾನ ಪಠಾಣ, ಹನುಮಂತ ಬಂಡಿವಡ್ಡರ ಮಾತನಾಡಿದರು.  

ಬ್ಲಾಕ್ ಅಧ್ಯಕ್ಷ ಬಿ.ಸಿ.ಪಾಟೀಲ, ರಾಜೇಶ್ವರಿ ಪಾಟೀಲ, ಪ್ರೇಮಾ ಪಾಟೀಲ, ಮಂಜುನಾಥ ಮಣ್ಣಣ್ಣವರ, ನೂರಆಹಮದ ಮಳಗಿ, ರಾಜು ಕುನ್ನೂರ, ಲೋಕಸಭಾ ಪರಾಜಿತ ಅಭ್ಯರ್ಥಿ ವಿನೋದ್ ಅಸೋಟಿ, ಶಿಗ್ಗಾವ್ ಪುರಸಭೆ ಸಂಯೋಜಕ ವಿಜಯ ಪಾಟೀಲ, ಬ್ಲಾಕ್ ಅಧ್ಯಕ್ಷ ಬಿ.ಸಿ.ಪಾಟೀಲ, ಶಿಗ್ಗಾವಿ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಚಂದ್ರು ಕೊಡ್ಲಿವಾಡ, ಮಲ್ಲಮ್ಮ ಸೋಮನಕಟ್ಟಿ, ಮಹಾಂತೇಶ ಸಾಲಿ, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಭೂತ ಮಟ್ಟದ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. 


ಸುದ್ದಿ ಓದಿ