ಬ್ಯಾಡ್ಗಿ

ಕೆಂಪು ಮೆಣಸಿನಕಾಯಿ ಚೀಲಗಳ ಅವಾಕ

ಕೆಂಪು ಮೆಣಸಿನಕಾಯಿ ಚೀಲಗಳ ಅವಾಕ


ಬ್ಯಾಡಗಿ 10 :  ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮುವಾರದಂದು ಹೆಚ್ಚಿನ ದಾರಣಿಯಾದ ಡಬ್ಬಿ ಮೆಣಸಿನಕಾಯಿಗೆ 80,319 ರೇಟ್ ಸಿಕ್ಕಿರುತ್ತವೆ. ಹಾಗೂ  ಸಾವಿರಕ್ಕೂ ಹೆಚ್ಚು ಚೀಲಗಳು 1,12,647 ಅವಾಕ ಆಗಿದ್ದು ಇರುತ್ತದೆ. ಯೋಗ್ಯ ದರ ದೊರಕಿದ್ದು ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲಗಳ ದರ ಪಟ್ಟಿಯಲ್ಲಿರುವ ಹೆಚ್ಚಿಗೆ ದರ ಬಂದಿದ್ದು ಇರುತ್ತದೆ. ಸೋಮುವಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಡ್ಡಿ ಮೆಣಸಿನಕಾಯಿ ಕಡಿಮೆ ಅಂದರೆ  4,899 ರೂಪಾಯಿಗಳು ಹೆಚ್ಚು ಅಂದರೆ 70,111 ರೂಪಾಯಿಗಳು ಮಾದರಿ ಅಂದರೆ 47,009 ರೂ ಇರುತ್ತದೆ. ಡಬ್ಬಿ ಮೆಣಸಿನಕಾಯಿಗೆ ಕಡಿಮೆ ಅಂದರೆ 5,629 ರೂಪಾಯಿ ಹೆಚ್ಚು ಅಂದರೆ 80,319 ರೂಪಾಯಿಗಳು ಮಾದರಿ 50,009 ರೂ ಇರುತ್ತದೆ. ಗುಂಟೂರ ಮೆಣಸಿನಕಾಯಿ ಕಡಿಮೆ ಅಂದರೆ 1989 ರೂಪಾಯಿಗಳು ಹೆಚ್ಚು ಅಂದರೆ 19,009 ರೂಪಾಯಿಗಳು ಮಾದರಿ ಅಂದರೆ 15,009 ರೂಪಾಯಿಗಳು ಈ ರೀತಿ ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬ್ಯಾಡಗಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.  

ಬ್ಯಾಡಗಿ 10-1 

   *  1 ಲಕ್ಷ ದಾಟಿದ ಕೆಂಪು ಮೆಣಸಿನಕಾಯಿ ಚೀಲಗಳ ಅವಾಕ  

*   ಕಡ್ಡಿ ಮೆಣಸಿನಕಾಯಿ ರೇಟ್ 70,111  

*   ಡಬ್ಬಿ ಮೆಣಸಿನಕಾಯಿ ರೇಟ್ 80,319 

* ಗುಂಟೂರ ಮೆಣಸಿನಕಾಯಿ ರೇಟ್ 19,009 ಸೋಮುವಾರ ಹೆಚ್ಚಿಗೆ ದಾರಣೆಯಾಗಿರುತ್ತದೆ. 


ಸುದ್ದಿ ಓದಿ