ಗಡಿಯಲ್ಲಿ‌ ಮೊಳಗಿದ ಕನ್ನಡದ ಕಹಳೆ : ಸಂಕೇಶ್ವರದಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ

ಗಡಿಯಲ್ಲಿ‌ ಮೊಳಗಿದ ಕನ್ನಡದ ಕಹಳೆ : ಸಂಕೇಶ್ವರದಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ

ಸಂಕೇಶ್ವರ : ಗಡಿ ಪಟ್ಟಣ ಸಂಕೇಶ್ವರದಲ್ಲಿ ಮಂಗಳವಾರ ದಿ.4ರಂದು ಕರ್ನಾಟಕ ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಣೆ‌ ಮಾಡಲಾಯಿತು. 


     ಬಳಿಕ ನಿಡಸೋಸಿಯ ಶಿವಲಿಂಗೇಶ್ವರ ಶ್ರೀಗಳು, ಸಂಕೇಶ್ವರದ ಶಂಕರಲಿಂಗ ಮಠದ ಸಚ್ಚಿದಾನಂದ ಅಭಿನವ ವಿದ್ಯಾ ನರಸಿಂಹ ಭಾರತಿ ಶ್ರೀಗಳು ಮತ್ತು ನಿಡಸೋಸಿಯ ನಿಜಲಿಂಗೇಶ್ವರ ಶ್ರೀಗಳ ಸಾನಿದ್ಯದಲ್ಲಿ ಗಾಂಧಿ ಚೌಕದಲ್ಲಿನ ಕಿತ್ತೂರು ಚನ್ನಮ್ಮ ವೇದಿಕೆ ಬಳಿ ಬೆಳಿಗ್ಗೆ 8.30 ಗಂಟೆಗೆ ಉದ್ಯಮಿ ಅಪ್ಪಾಸಾಹೇಬ ಶಿರಕೋಳಿ ಅವರಿಂದ ಕನ್ನಡ ಧ್ವಜಾರೋಹಣ‌ ಮಾಡುವ ಮೂಲಕ ಕನ್ನಡ ಹಬೆ ಚಾಲನೆ ನೀಡಿದರು.


   ಭುವನೇಶ್ವರಿ ಮೂರ್ತಿಯನ್ನು ನವೀನ ಗಂಗರೆಡ್ಡಿ, ಭವ್ಯ ರೂಪಕಗಳ ಮೆರವಣಿಗೆ ಉದ್ಘಾನೆಯನ್ನು ನಂದು ಮುಡಸಿ, ವಾದ್ಯಮೇಳಗಳ‌ ಉದ್ಘಾಟನೆಯನ್ನು ಯಾಯಾಖಾನ ನಧಾಪ ಅವರು ಚನ್ನಮ್ಮನ ಭಾವಚಿತ್ರ ಪೂಜೆಯನ್ನು ಡಾ. ಜಯಪ್ರಕಾಶ್ ಕರಜಗಿ ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪೂಜೆಯನ್ನು ಅಮರ ನಲವಡೆ, ರೂಪಕಗಳ ಮೆರವಣಿಗೆಗೆ ಸಚಿನ್ ಭೋಪಳೆ ಅವರು ಉದ್ಘಾಟನೆ ಮಾಡಿದರು.


        ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿ ದೇವಿಯ ಮೂರ್ತಿಯ ಮೆರವಣಿಗೆ ಹಾಗೂ ಪಟ್ಟಣದ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳಿಂದ ರೂಪಕಗಳ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯು ಗಾಂಧಿ ಚೌಕದಿಂದ ಪ್ರಾರಂಭಗೊಂಡು ಪ್ರಮುಖ‌ ಬೀದಿಗಳಲ್ಲಿ ಸಂಚರಿಸಿ ಬಳಿಕ ಗಾಂಧಿ ಚೌಕಕ್ಕೆ ಆಗಮಿಸಿ ಕೊನೆಗೊಂಡಿತು. 


    ಮೆರವಣಿಗೆ ವೇಳೆ ಪ್ರೆಂಡ್ಸ್ ಪೌಂಡೇಶನ್ ಸಂಸ್ಥೆಯವರು ಊಟದ ವ್ಯವಸ್ಥೆ ಮಾಡಿದ್ದರು. ಅದೇ ರೀತಿ ನೂರಾನಿ ಮಸ್ಜಿದ್ ನವರು ಮೆರವಣಿಗೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಅಲ್ಲದೆ ಚಿನ್ನರ ರೂಪಕಗಳು ನೋಡುಗರ ಮನ ಸೇಳೆದವು. 


     ಈ ಸಂದರ್ಭದಲ್ಲಿ ಡಿಜಿ ಕನ್ನಡ ಹಾಡುಗಳಿಗೆ ಯುವಪಡೆ ಕುಣಿದು ಕುಪ್ಪಳಿಸಿತು. ಈ ವೇಳೆ ಸಮಿತಿ ಅಧ್ಯಕ್ಷ ಪ್ರಮೋದ ಹೊಸಮನಿ, ಉಪಾಧ್ಯಕ್ಷ ಶಿವು ಸಮ್ಮಕ್ಕನವರ, ಸಂಜಯ ಶಿರಕೋಳಿ, ಅಮರ ನಲವಡೆ, ವಿಕ್ರಂ‌ ಕರನಿಂಗ, ದಿಲೀಪ ಹೊಸಮನಿ, ಮಹೇಶ ಹಟ್ಟಿಹೊಳಿ, ಸಂತೋಷ ಮುಡಸಿ, ಗಜಾನನ ಕ್ವಳ್ಳಿ, ಕಿರಣ ನೇಸರಿ, ಪಿಂಟು ಪರೀಟ, ಬಸವರಾಜ ಬಾಗಲಕೋಟೆ, ಸುನಿಲ್ ಪರ್ವರಾವ್, ನಂದು ಮುಡಸಿ, ರೋಹನ ನೇಸರಿ, ಪ್ರವೀಣ ನೇಸರಿ, ಶಂಕರ ಹೆಗಡೆ, ಪಿಂಟು ಸೂರ್ಯವಂಶಿ, ಗಂಗಾರಾಮ ಬೂಸಗೋಳ, ಅಭಿಜಿತ್ ಕುರಣಕರ, ಜಯು ಸಾವಂತ, ಪ್ರೀತಮ ಸುಮಾರೆ, ರಾಹುಲ್ ವಾರಕರಿ, ಸಾಗರ ಜಕಾತಿ, ಆನಂದ ಸಂಸುದ್ದಿ, ಸಂದೀಪ ಗಂಜಿ ಸೇರಿದಂತೆ ಸಾವಿರಾರು ಕನ್ನಡಿಗರು ಉಪಸ್ಥಿತರಿದ್ದರು. 

ಸುದ್ದಿ ಓದಿ