ಮುದ್ದೆಬಿಹಾಲ್

ಅಧಿಕಾರಿಗಳ ಲಿಖಿತ ಭರವಸೆ ಮೇರೆಗೆ ಧರಣಿ ವಾಪಸ್

ಅಧಿಕಾರಿಗಳ ಲಿಖಿತ ಭರವಸೆ ಮೇರೆಗೆ ಧರಣಿ ವಾಪಸ್

ಪಿ.ಎಲ್‌.ಡಿ. ಬ್ಯಾಂಕಿನ ಅವ್ಯವಹಾರ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ಮುದ್ದೇಬಿಹಾಳ 23: ಮುದ್ದೇಬಿಹಾಳ ಪಟ್ಟಣದಲ್ಲಿರುವ ಪಿ.ಎಲ್‌.ಡಿ. ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರ ಬಗ್ಗೆ ಖಂಡಿಸಿ ಕಳೆದ ನಾಲ್ಕು ದಿನಗಳಿಂದ ವಿವಿಧ ದಲಿತ ಪರ ಸಂಘಟನೆ ವತಿಯಿಂದ ಧರಣಿ ಸತ್ಯಾಗ್ರಹ ಸ್ಥಳಕ್ಕೆ  ವಿಜಯಪುರ ಜಿಲ್ಲಾ ಸಹಕಾರ  ಸಂಘಗಳ ಉಪ ನಿಬಂಧಕರಾದ  ಎಸ್ ಕೆ ಭಾಗ್ಯಶ್ರೀ ಸಹಾಯಕ ಉಪನಿಬಂಧಕ ಚೇತನ ಭಾವಿಕಟ್ಟಿಯವರು ಹಾಗೂ ತಾಲೂಕಾ ಸಹಕಾರ ನಿಬಂಧಕರ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ  ಅಧಿಕಾರಿಗಳ ತಂಡ ಗುರುವಾರ ದಿಢೀರ ಬೇಟಿ ನೀಡಿ 20 ದಿನದೊಳಗಾಗಿ  ಸಂಬಂಧಪಟ್ಟ ಮೇಲಾಧಿಕಾರಿಗಳ ನೇತೃತ್ವದ ತಂಡ ರಚಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕೂಡಲೆ ಕ್ರಮ ಕೈಗೊಳ್ಳಲಾಗುವುದು ಎಂದು ಲಿಖಿತ ಉತ್ತರ ನೀಡುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ  ತಲೆಯಮೇಲೆ ಇಟ್ಟಿಗೆ ಇಟ್ಟು ವಿನೂತನವಾಗಿ ಹೋರಾಟಗಾರರು ಅಧಿಕಾರಿಗಳ ಮಾತಿಗೆ ಮನ್ನಣೆ ನೀಡಿ ಧರಣಿ ನಿರತ ದಲಿತ ಮುಖಂಡರು ಧರಣಿ ವಾಪಸ್ ಪಡೆದುಕೊಳ್ಳಲಾಗುವುದು ಎಂದು ಸರ್ವಾನುಮತದಿಂದ ತೀರ್ಮಾನಿಸಿ ಧರಣಿಯನ್ನು ಕೈಬಿಟ್ಟರು.  

ಈ ವೇಳೆ ಧರಣಿ ನಿರತ ದಲಿತ ಮುಖಂಡರಾದ ಹರೀಷ ನಾಟಿಕಾರ ಹಾಗೂ ಬಸವರಾಜ ಪೂಜಾರಿಯವರು ಮಾತನಾಡಿ ರೈರ ಶ್ರೇಯೋಭಿವೃದ್ಧಿಗಾಗಿ ಇರಬೇಕಾದ ಪಿಎಲ್ ಡಿ ಬ್ಯಾಂಕು ಸಧ್ಯ ಅದ್ಯಕ್ಷ ಬಿ ಕೆ ಬಿರಾದಾರ ಅವರ ಕೈಗೊಂಬೆಯಾಗಿಬಿಟ್ಟಿದೆ ಅನಧಿಕೃತ ಚಟುವಟಿಕೆಗಳು ಮತ್ತು ಹಣ ಲಪಟಾಯಿಸುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರ ಅನೇಕ ಯೋಜನೆಗಳು ಬ್ಯಾಂಕಿನಲ್ಲಿ ಜಾರಿ ಇದ್ದು ಆ ಯೋಜನೆಗಳನ್ನು ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗದ ರೈತರುಗಳಿಗೆ ಯಾವುದೇ ಕೃಷಿ ಸಾಲವನ್ನು ಆಗಲಿ ಅಥವಾ ಇನ್ನಾವುದೇ ಸಾಲವನ್ನಾಗಲಿ ನೀಡದೇ ಮನಸೋ ಇಚ್ಛೆಯಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗದವರಿಗೆ ನೆಪಗಳನ್ನು ಹೇಳಿ ಮರಳಿ ಕಳಿಸಿರುವುದಲ್ಲದೇ ಯಾವೂದೇ ಸಹಕಾರ ಸಂಘಗಳ ನಯಮಗಳನ್ನು ಪಾಲಿಸದೇ ಎಲ್ಲ ನಿಯಮಗಳನ್ನು ಗಾಳಿಗೇ ತೂರಿ ಸಧ್ಯ ವಾಣಿಜ್ಯ ಮಳಿಗೆಗಳನ್ನು ತಮ್ಮ ಸ್ವಜಾತಿಯವರಾದ ಸಂಬಂಧಧಿಕರಿಗೆ ಯಾವೂದೇ ಕರಾರು ಪತ್ರ ಇಲ್ಲದೇ ಟೆಂಡೆರ್ ಕರಿಯದೇ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಕೊಟ್ಟು ರೈತರ ಬ್ಯಾಂಕಿಗೆ ಹಾಗೂ ಸರಕಾರಕ್ಕೆ ಅನ್ಯಾಯ ಮಾಡಿದ್ದಾರೆ ಈ ಬಗ್ಗೆ ತಕ್ಷಣದಲ್ಲಿಯೇ ಆ ಎಲ್ಲ ಮಳಿಗೆಗಳನ್ನು ಪುನಃ ಟೆಂಡೆರ್ ಮೂಲಕ ಹರಾಜು ಮಾಡಿ ಬಾಡಿಗೆ ನೀಡಬೇಕಲ್ಲೊಂದು ವೇಳೆ ನಮ್ಮ ಬೇಡಿಕೆ ನಿಗದಿತ ಸಮಯದೋಳಗೆ ಇಡೇರಿಸಲಿಲ್ಲವೆಂದಲ್ಲಿ ಇದಕ್ಕಿಂತ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಆಗ್ರಹಿಸಿದ ಇದಕ್ಕಿಲ್ಲ ಉತ್ತರಿಸಿದ ವಿಜಯಪುರ ಜಿಲ್ಲಾ ಸಹಕಾರ  ಸಂಘಗಳ ಉಪ ನಿಬಂಧಕರಾದ  ಎಸ್ ಕೆ ಭಾಗ್ಯಶ್ರೀ ಸಹಾಯಕ ಉಪನಿಬಂಧಕ ಚೇತನ ಭಾವಿಕಟ್ಟಿಯವರು ನಿಮ್ಮೇಲ್ಲ ಬೇಡಿಕೆಗಳನ್ನು ಜ, 20 ರ ಓಳಗಾಗಿ ನಾವು ಕೊಟ್ಟ ಕಾಲಾವಕಾಶದಲ್ಲಿ ಸೂಕ್ತ ತನಿಖೆ ನಡೆಸಿ ಬೇಡಿಕೆ ಇಡೇರಿಸಲಾಗುವುದು ಆದರೇ ಜ, 15 ರಂದು ವಾಣಿಜ್ಯ ಮಳಿಗೆಗಗಳ ಸಂಬಂದಿಸಿದಂತೆ ನಿಖರ ವರದಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡುವ ಮೂಲಕ ಮನೋಲಿಸಿ ಧರಣಿ ನಿರತರನ್ನು ಧರಣಿಯಿಂದ ಹಿಂದೆ ಸರಿಯುವಂತೆ ಮಾಡಿದರು. 

ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ತಾಲೂಕಾ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ ಎಸ್ ಉತ್ನಾಳ, ಸಂತೋಷ ಇಲಕಲ್ಲ,  ಜಗಧೀಶ ಸರೂರ, ಪ್ರಕಾಶ ಜಲಪೂರ, ಶರಣು ಸರೂರ, ಹಣಮಂತ್ರಾಯ ಶಿರೋಳ, ಗೋಪಾಲ ದಾಸರ, ಲಕ್ಷ್ಮಣ ಬಿದರಕುಂದಿ, ಪ್ರಶಾಂತ ಕಾಳೆ, ಪ್ರಕಾಶ ಸರೂರ, ದೇವರಾಜ ಹಂಗರಗಿ,ಪರುಶುರಾಮ ನಾಲತವಾಡ, ಸಿದ್ದಪ್ಪ ಚಲವಾದಿ, ದೇವೇಂದ್ರ ಹುನಕುಂಟಿ ರಾಮು ತಂಬೂರಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ