ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಬೆಳಗಾವಿ : ತನಗೆ ಜನ್ಮ ನೀಡಿ ಸಾಕಿ ಸಲುಹಿದ ವೃದ್ದ ತಾಯಿಯನ್ನೆ ಪಾಪಿ ಪುತ್ರನೋರ್ವ ತಡ ರಾತ್ರಿ ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿರುವ ಘಟನೆ ಜಿಲ್ಲೆಯ ಸೌದತ್ತಿ ತಾಲ್ಲೂಕಿನಲ್ಲಿ ವರದಿಯಾಗಿರುವದು ದುರ್ಧೈವದ ಸಂಗತಿಯಾಗಿದ್ದು, ದುರಳ ಪುತ್ರನ ವಿರುದ್ದ ಈಗ ಜನರ ಆಕ್ರೋಶ ವ್ಯಕ್ತವಾಗತೊಡಗಿದೆ.
ಹೌದು ಓದುಗರೇ ಇಂದಿನ ದಿನಗಳಲ್ಲಿ ಮಾನವೀಯತೆ ಅನ್ನುವದು ನಸಿಶಿ ಹೋಗುತ್ತಿದ್ದು, ಸಂಬಂಗಳೆ ಹಾಳಾಗುವ ಜನ ಕಾಣಸಿಗುತ್ತಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದಲ್ಲಿ ಅಮಾನವೀಯ ಘಟನೆ ನಡೆದಿದೆ.
ರಾಮದುರ್ಗ ತಾಲೂಕಿನ ಸಾಲೊಳ್ಳಿ ಗ್ರಾಮದ ಕಮಲಮ್ಮ ಕಟ್ಟಿ ವೃದ್ಧೆಯನ್ನ ಗುಡ್ಡಗಾಡು ಪ್ರದೇಶದಲ್ಲಿ ರಾತ್ರಿ ಪಾಪಿ ಪುತ್ರ ಬಿಟ್ಟುಹೋದ ಪರಾರಿಯಾಗಿದ್ದಾನೆ. ಅನಾರೋಗ್ಯ ಪೀಡಿತ ವೃದ್ದ ತಾಯಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಬೆಳಗು ಆಗುತ್ತಿದ್ದಂತೆ ಕಂಡವರ ಮುಂದೆ ಕೈಮುಗಿದು ಘಟನೆಯ ವಿಡಿಯೋ ಒಂದು ವೈರಲ್ ಆಗಿದ್ದು, ತಾಯಿಯ ಕಣ್ಣೀರಿಗೆ ಕಾರಣನಾದ ಪಾಪಿ ಪುತ್ರನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ನಿನ್ನೆ ರಾತ್ರಿ 10 ಗಂಟೆಗೆ ಸ್ವಂತ ತಾಯಿಯನ್ನೇ ಮುನವಳ್ಳಿಯ ನವೀಲುತೀರ್ಥ ಡ್ಯಾಮ್ ಬಳಿ ಪಾಪಿ ಪುತ್ರಸಂತೋಷ ಎಂಬಾತನೇ ಬಿಟ್ಟು ಹೋಗಿದ್ದಾನೆ ಎಂಬ ಮಾಹಿತಿ ದೊರೆತಿದೆ. ಸಂಕೇಶ್ವರ ಕೆಎಸ್ ಆರ್ ಟಿಸಿ ಡಿಪೋದಲ್ಲಿ ನೌಕರನಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ತಾಯಿ ಕಮಲಮ್ಮ ಮಾಹಿತಿ ನೀಡಿದ್ದಾರೆ.
ಮಾನವೀಯತೆ ಮರೆತ ಪುತ್ರನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ. ಸ್ಥಳೀಯರಿಂದ ವೃದ್ಧೆಗೆ ಆರೈಕೆ ಮಾಡಲಾಗಿದೆ. ಮುನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.