ಕಾಗವಾಡ ತಾಲೂಕಿನ ರೈತರ ಜಮೀನುಗಳ ಮೇಲೂ ವಕ್ಫನ ಛಾಯೆ : ಪಕ್ಕದ ರೈತರಲ್ಲೂ ಆತಂಕ

ಕಾಗವಾಡ ತಾಲೂಕಿನ ರೈತರ ಜಮೀನುಗಳ ಮೇಲೂ ವಕ್ಫನ ಛಾಯೆ : ಪಕ್ಕದ ರೈತರಲ್ಲೂ ಆತಂಕ

ಬೆಳಗಾವಿ : ಜಿಲ್ಲೆಯ ಕಾಗವಾಡ ತಾಲೂಕಿನ ರೈತರ ಜಮೀನಿನ ಪಹಣಿಯಲ್ಲೂ ವಕ್ಫ್ ನ  ಛಾಯೆ ಆವರಿಸಿದ್ದು, ಇಲ್ಲಿನ ರೈತರು ಆತಂಕಕ್ಕೆ ಒಳಗಾಗಿದ್ದಾರೆ. 

   ಚಿಕ್ಕೋಡಿ ರೈತರಿಗೆ ವಕ್ಫ್ ಶಾಕ್ ಹಿನ್ನಲೆಯಲ್ಲಿ ಈಗ ಸದ್ಯ ಶೇಡಬಾಳ‌ ಗ್ರಾಮದ ರೈತರ ಜಮೀನಿಗೂ ವಕ್ಫ್ ಹೆಸರು ನೊಂದಣಿ ಕಂಡು ಬಂದಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ರೈತರಿಗೆ ಶಾಕ್ ಆಗಿದೆ. 

  ಅಶೋಕ ಕೋಳಿ ಎಂಬ ರೈತನ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಕಂಡು ಬಂದಿದೆ. ಸುಮಾರು 1 ಎಕರೆ 5 ಗುಂಟೆ ಜಮೀನು ಹೊಂದಿರುವ ಬಡ ರೈತ ಅಶೋಕ ಕೋಳಿ ಈತ ಕಂಗಾಲಾಗಿದ್ದಾರೆ. 

   ಇನ್ನೂ ಅದೇ ರೀತಿಯಾಗಿ ಅದೇ ಗ್ರಾಮದ ಮಹಾದೇವಿ ಪ್ರಕಾಶ ಬಡಿಗೇರ್ ಎಂಬಾತ ಬಡ ಮಹಿಳೆ ಜಮೀನಿಗೂ ವಕ್ಫ್ ಛಾಯೆ ಆವರಿಸಿದೆ. 

   ಶೇಡಬಾಳ ಗ್ರಾಮದ ಮಹಿಳೆಯಾದ

ಮಹಾದೇವಿ ಇವರ ಸುಮಾರು 2 ಏಕರೆಯ ಜಂಟಿ ಮಾಲಿಕರೊಂದಿಗೆ ಜಮೀನು ಹೊಂದಿದ್ದಾರೆ.

ಸುದ್ದಿ ಓದಿ