ಸಿಂಧಗಿ

ಸಂಗಮ ಸಂಸ್ಥೆಯು ಮಾಡುವ ಸೇವೆ ನಿಸ್ವಾರ್ಥ ಸೇವೆಯಾಗಿದೆ: ನ್ಯಾ.ಪಾಟೀಲ

ಸಂಗಮ ಸಂಸ್ಥೆಯು ಮಾಡುವ ಸೇವೆ ನಿಸ್ವಾರ್ಥ ಸೇವೆಯಾಗಿದೆ: ನ್ಯಾ.ಪಾಟೀಲ


ಸಿಂದಗಿ:  ನಗರದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವ ಕುರಿತು ಹಾಗೂ ಕೋವಿಡ್ ಮೂರನೆ ಅಲೆಯ ಬಗ್ಗೆ ಕಟ್ಟಡ ಕಾರ್ಮಿಕರಿಗೆ ಜಾಗೃತಿ ಮೂಡಿಸಲಾಯಿತು.  

ಈ ಕಾರ್ಯಕ್ರಮದಲ್ಲಿ ಮನುಷ್ಯರು ಮನುಷ್ಯರನ್ನು ಮನುಷ್ಯರನ್ನಾಗಿ ಕಾಣಬೇಕು ಎಂಬುದೇ ಈ ಪ್ರಜಾಪ್ರಭುತ್ವದ ಉದ್ದೇಶವಾಗಿದೆ. ಅಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವಂತಹ ಸರಕಾರ ಈ ಪ್ರಜಾಪ್ರಭುತ್ವವಾಗಿದೆ. ನಮ್ಮ ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಒಬ್ಬ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಒಂದು ದೊಡ್ಡ ಶಕ್ತಿ ಕೊಟ್ಟಿದ್ದು ನಮ್ಮ ಭಾರತ ಸಂವಿಧಾನ. ನಮ್ಮ ದೇಶದ ಪ್ರಧಾನ ಮಂತ್ರಿ ಕೂಡ ಪ್ರತಿ ಐದು ವರ್ಷಕ್ಕೊಮ್ಮೆ ನಮ್ಮ ಹತ್ತಿರ ಮತ ಕೇಳಲು ನಮ್ಮನ್ನು ಹುಡುಕಿಕೊಂಡು ಬರಲೇ ಬೇಕು. ಈ ರೀತಿ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯಾಗಿದೆೆ. ನಮ್ಮ ದೇಶದ ರಾಷ್ಟ್ರಪತಿಯಿಂದ ಹಿಡಿದು ಒಬ್ಬ ಸಾಮಾನ್ಯ ವ್ಯಕ್ತಿಗೂ ಕೂಡಾ ಒಂದೇ ಮತ ನೀಡುವ ಹಕ್ಕನ್ನು ನೀಡುವ ಅಧಿಕಾರ ನಮ್ಮ ಸಂವಿಧಾನದಲ್ಲಿ ನೀಡಲಾಗಿದೆ. ಅದೇ ರೀತಿಯಾಗಿ ಪ್ರತಿ ಹೆಣ್ಣು ಮಕ್ಕಳಿಗೂ ಹಾಗೂ ಗಂಡು ಮಕ್ಕಳಿಗೂ ಒಂದೇ ಮತದಾನ ಇದೆ. ಸಂಗಮ ಸಂಸ್ಥೆಯು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಅವರಿಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಒಳ್ಳೆಯ ಉಪನ್ಯಾಸಕರನ್ನು ಕರೆಸಿ ಜನರಿಗೆ ಮಾಹಿತಿ ನೀಡುವುದಾಗಿದೆ. ಸಂಗಮ ಸಂಸ್ಥೆಯು ಮಾಡುವ ಸೇವೆ ನಿಸ್ವಾರ್ಥ ಸೇವೆಯಾಗಿದೆ ಎಂದು ಈ ಕಾರ್ಯಕ್ರಮವನ್ನು ಉದ್ಘಾಟಿಸಿರುವ ಶ್ರೀಯುತ ಎಂ ಎಸ್ ಪಾಟೀಲ ಅಪರ ಸರಕಾರಿ ನ್ಯಾಯಾವಾದಿಗಳು ಮಾತನಾಡಿದರು. ನಮ್ಮ ಸಂವಿಧಾನ ಇಲ್ಲದಿದ್ದರೆ ನಾವು ನೀವು ಕೂಡಾ ಈ ರೀತಿ ಒಟ್ಟಿಗೆ ಸೇರುತ್ತಿರಲಿಲ್ಲ. ಯಾವುದೇ ರೀತಿಯ ಮಾಹಿತಿ ಕೊಡಲು ಆಗುತ್ತಿರಲಿಲ್ಲ. ಅದೇ ರೀತಿಯಾಗಿ ಒಂದು ವೇಳೆ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ರವರು ಹುಟ್ಟದೆ ಇದ್ದರೆ ನಾವೆಲ್ಲ ಬ್ರಿಟೀಷರ ಅಡಿಯಾಳಗಿ ಇರುತ್ತಿದ್ದೆವು. ಭಾರತದ ಅತಿ ಶ್ರೇಷ್ಠ ಗ್ರಂಥ ಭಾರತ ಸಂವಿಧಾನ’. ನಮ್ಮ ಸಂವಿಧಾನ ಇರುವುದು ಬಡವರಿಗೋಸ್ಕರ , ಜನರಿಗೋಸ್ಕರ ಅಷ್ಟೇ ಅಲ್ಲ ಈ ಸಂವಿಧಾನ ಪ್ರತಿ ಕ್ಷಣವೂ ಪ್ರಜೆಗಳ ರಕ್ಷಣೆಯನ್ನು ಮಾಡುತ್ತದೆ. ಅದಕ್ಕಾಗಿ ನಮಗೆ ಯಾವುದೇ ರೀತಿಯ ತೊಂದರೆ ಆದರೂ ಕೂಡಾ ಈ ಸಂವಿಧಾನ ನಮ್ಮನ್ನು ಕಾಪಾಡುತ್ತದೆ. ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ ಆಲ್ವಿನ್ ಡಿ’ಸೋಜ ಮಾತನಾಡಿದರು. 

        ಇದೆರೀತಿ ಇತ್ತೀಚಿಗೆ ಕೋವಿಡ್ ಮೂರನೆ ಅಲೆಯು ಹೆಚ್ಚಾಗುತ್ತಿದೆ. ಆದ್ದರಿಂದ ನಿಮ್ಮ ಮಕ್ಕಳು, ಕುಟುಂಬ, ಹಾಗೂ ನಿಮ್ಮ ಹಿರಿಯರನ್ನು ಕಾಪಾಡಿಕೊಳ್ಳಿ ಎಂದು ಹೇಳುತ್ತ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳ ಸ್ಥಾನ ವಹಿಸಿರುವ ಸಂಗಮ ಸಂಸ್ಥೆಯ ಸಂಯೋಜಕರಾದ ರೊನಾಲ್ಡ್‌ ಪುರ್ಟಾಡೊ  ಮಾತನಾಡಿದರು.   ಕಾರ್ಯಕ್ರಮದಲ್ಲಿ ಅತಿಥಿತಿಯಾಗಿ  ಡಾ. ಎ ಪಿ ಜೆ ಅಬ್ದುಲ್ ಕಲಾಂ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ  ಚೇತನಕುಮಾರ ಹೊಟಗಾರ  ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ಪ್ರತಿ ಕಟ್ಟಡ ಕಾರ್ಮಿಕರಿಗೆ ಕೋವಿಡ್ ನ್ಯೂಟ್ರೀಷನ್ ಕಿಟ್‌ಗಳನ್ನು ಹಂಚಿದರು. ಸಂಗಮ ಸಂಸ್ಥೆಯ ಕಾರ್ಯಕರ್ತರಾದ  ರಾಜೀವ ಕುರಿಮನಿ.ಪ್ರಾಸ್ಥಾವಿಕವಾಗಿ ಮಾತನಾಡಿದರು ವಿಜಯ ಬಂಟನೂರ ಕಾರ್ಯಕ್ರಮವನ್ನು ನಿರೂಪಿಸಿದರು    ತೇಜಸ್ವಿನಿ ಹಳ್ಳದಕೇರಿ  ಸ್ವಾಗತಿಸಿದರು. ಮಲಕಪ್ಪ ಹಲಗಿ ಒಂದಿಸಿದರು 


ಸುದ್ದಿ ಓದಿ