ಬಳ್ಳಾರಿ

ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಅನನ್ಯ : ಶರಣಮ್ಮ

ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಅನನ್ಯ : ಶರಣಮ್ಮ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 05: ಸಮಾಜಕ್ಕೆ ಉತ್ತು ಸಂದೇಶ ನೀಡುತ್ತಾ ಉತ್ತಮ ಪ್ರಜೆಗಳನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಅನನ್ಯವಾದದ್ದು ಎಂದು ತಹಶಿಲ್ದಾರ್ ಶರಣಮ್ಮ ಹೇಳಿದರು. 


ಪಟ್ಟಣದ ಗುರುಭವನದಲ್ಲಿ ಏರಿ​‍್ಡಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಭೌತಿಕ, ಲೌಕಿಕ,ಆದ್ಯಾತ್ಮಿಕ ಉತ್ತಮ ವಿಚಾರಗಳನ್ನು ಮಕ್ಕಳ ಮನಸ್ಸಿನಲ್ಲಿ ಛಾಪು ಮೂಡಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಉತ್ತಮ ವ್ಯೆಕ್ತಿತ್ವವನ್ನು ಉಳ್ಳವರಂತೆ ಮಕ್ಕಳನ್ನು ರೂಪಿಸಲು ಕರೆ ನೀಡಿದರು.ಮಕ್ಕಳು ಶಿಕ್ಷಕರೊಡನೆ ಹೆಚ್ಚು ಒಡನಾಟ ಹೊಂದಿರುತ್ತಾರೆ ಹಾಗೂ ಮಕ್ಕಳಲ್ಲಿ ಅನುಕರಣಾ ಮನೋಭಾವ ಹೆಚ್ಚಿರುತ್ತದೆ ಹಾಗಾಗಿ ಶಿಕ್ಷಕರ ಚಲನ ವಲನಗಳು ಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದರು. 


ಶಿಕ್ಷಕರು ಬೋಧನಾ ಕ್ಷೇತ್ರ ಹೊರತು ಪಡಿಸಿ ಉಳಿದ ಕ್ಷೇತ್ರಗಳಿಗೆ ಬಳಸದಂತೆ ನೀಡಿದ ಮನವಿಗೆ ಸ್ಪಂದಿಸಿ ಘನ ಸರ್ಕಾರಕ್ಕೆ ಮನವಿಯನ್ನು ತಲುಪಿಸುವುದಾಗಿ ತಿಳಿಸಿದರು.ಕರೋನಾ ಕಷ್ಟ ಸಮಯದಲ್ಲಿ ಶಿಕ್ಷಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕಾರ್ಯ ನಿರ್ವಹಿಸಿದ್ದಾರೆ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು. 


ಪ್ರಭಾರಿ ಕಾರ್ಯ ನಿರ್ವಾಹಧಿಕಾರಿ ಯು.ಹೆಚ್‌.ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ತಾಲೂಕಿನ ಪ್ರತಿಯೊಂದು ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುವಲ್ಲಿ ಪ್ರಮಾಣಿಕ ಪ್ರಯತ್ನ ಮಾಲಾಗುವುದು ವ್ಯಕ್ತಿಯು ತನ್ನು ಸರ್ವತೋಮುಖ ಬೆಳವಣಿಗೆಯಲ್ಲಿ ಸಮಾಜದ ಅಂಕುಡೊಂಕುಗಳನ್ನು ಪರಿಚಯಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಹಿರಿಯದಾಗಿದೆ. 

ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ​‍್ಪ ಹೊರಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕರ ತಾಲೂಕಿನ ನೂರಾರು ಶಿಕ್ಷಕರು ತಮ್ಮ ಸ್ವಂತ ಹಣ ಖರ್ಚು ಮಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗುಲ್ಬರ್ಗಾ ವಿಭಾಗದಲ್ಲಿ ತಾಲೂಕನ್ನು ಶೈಕ್ಷಣಿಕವಾಗಿ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಶಿಕ್ಷಕರ ಕಾರ್ಯವೈಖರಿಯನ್ನು ತೋರಿ​‍್ಡಸುತ್ತದೆ.ತಾಲೂಕಿನ ಎಲ್ಲಾ ಶಿಕ್ಷಕರು ಮಕ್ಕಳ ಶೈಕ್ಷಣಿಕ ಮುನ್ನೆಡೆಗೆ ದಾರಿಯಾಗಿದ್ದಾರೆ ಎಂದರು. 


ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಂದೀಪುರ ಸುಕ್ಷೇತ್ರದ ಚರಂತೇಶ್ವರ ಸ್ವಾಮಿಗಳು ಹಾಗೂ ಹಳೇ ಹಗರಿಬೊಮ್ಮನಹಳ್ಳಿಯ ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮಿಗಳು ವಹಿಸಿದ್ದರು. 


ಈ ಸಂಧರ್ಭಧಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಬೋರಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿನಾಯ್ಕ್‌, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಯಂಕಾರೆಡ್ಡಿ,ಪ್ರೌಡ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಲೋಕಪ್ಪ ಹೆಚ್, ಶಿಕ್ಷಕರ ಜಿಲ್ಲಾ ಕೋಶಾಧ್ಯಕ್ಷ ಹಿರಾ​‍್ಯನಾಯ್ಕ್‌, ತಾಲೂಕು ಶಿಕ್ಷಕರ ಸಂಘದ ತಾಲೂಕು ಕೋಶಾಧ್ಯಕ್ಷ ಟಿ.ಸೋಮಶೇಖರ್, ತಾಲೂಕು ಗುರುಭವನ ಸಮಿತಿಯ ಸರ್ವ ಸದಸ್ಯರು ಹಾಗೂ ಶಿಕ್ಷಕರು ಇದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮವನ್ನು  ತಾಲೂಕು ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಶಾಂತಕುಮಾರಿ ನಿರೂಪಿಸಿದರು. 


ಸುದ್ದಿ ಓದಿ