ಕನ್ನಡ ಬೆಳವಣಿಗೆಗೆ ಸಂಘಟನೆಗಳ ಪಾತ್ರ ಮುಖ್ಯ ಜಿ ಸೋಮಶೇಖರ್ ರೆಡ್ಡಿ
ಬಳ್ಳಾರಿ20: ನಗರದ ರಾಘವ ಕಲಾಮಂದಿರದಲ್ಲಿ ನಡೆದ ಕನ್ನಡ ಚೈತನ್ಯ ವೇದಿಕೆಯ 22ನೇ ವಾಷರ್ಿಕೋತ್ಸವ ಹಾಗೂ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನಗರ ಮಾಜಿ ಶಾಸಕ ಜಿ ಸೋಮಶೇಖರ ರೆಡ್ಡಿ ಅವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಇಂದು ಕನ್ನಡ ಭಾಷೆ ಹಾಗೂ ಸಾಂಸ್ಕೃತಿ ಉಳಿಸುವಲ್ಲಿ ಸಂಘಟನೆಗಳ ಪಾತ್ರ ಬಹಳ ದೊಡ್ಡದಾಗಿದೆ. ಕನ್ನಡ ನಾಡಿಗೆ ಧಕ್ಕೆ ಆದಾಗ ಹೋರಾಟ ನಡೆಸುವುದು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕರು ಚೋರನೂರು ಕೊಟ್ರಪ್ಪ ಮಾತನಾಡಿ ಕನರ್ಾಟಕ ಎಂದು ಹೆಸರು ಬರಲು ಕಾರಣವಾದ ಮಹನೀಯರನ್ನು ಸ್ಮರಿಸುತ್ತಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುವ ಜೊತೆಗೆ ಭಾಷೆಯ ಬೆಳವಣಿಗೆಗೆ ಕಾರಣವಾಗಿದೆ. ಹಾಗೂ ಸಂಘಟನೆಗಳು ನಿಸ್ವಾರ್ಥದಿಂದ ಸೇವೆಯನ್ನು ಸಲ್ಲಿಸಿದಾಗ ಮಾತ್ರ ಹೆಚ್ಚು ಕಾಲ ಜನರ ಮನದಲ್ಲಿ ಉಳಿಯಲು ಸಾಧ್ಯ ಎಂದರು. ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಎಚ್ ಕೆ ಕಾರ್ ಮಂಚಪ್ಪ, ಹಾಗೂ ವೇದಿಕೆ ಹಿರಿಯ ಸದಸ್ಯರಾದ ಬಿ ಸಿ ಅರವಿಂದ,ಕಿರಣ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಚಿತ್ರಕಲಾವಿದ ರಫಿ ಮತ್ತು ವಿನೋದ್ ಚೌಹಾಣ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಶ್ರೀ ನಂಜುಂಡೇಶ್ವರ ತಾತನವರು ದಾಸರ ನಾಗೇನಹಳ್ಳಿ, ವೀರಶೇಖರ್ ರೆಡ್ಡಿ .ಕನ್ನಡ ಚೈತನ್ಯ ವೇದಿಕೆಯ ಮಹಿಳಾ ಅಧ್ಯಕ್ಷರು ಜ್ಯೋತಿ ಪ್ರಕಾಶ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ 35 ಶಾಲೆಗಳು ಸಮಾಜದ ಮುಖಂಡರು ಕಲಾವಿದರು, ಸಂಗೀತಗಾರರು ಇತರರು ಭಾಗವಹಿಸಿದ್ದರು