ಬಳ್ಳಾರಿ

ಜನ ಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ಹಿರಿದು: ರಂಭಾಪುರಿ ಶ್ರೀ

ಜನ ಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ಹಿರಿದು: ರಂಭಾಪುರಿ ಶ್ರೀ

ರಂಭಾಪುರಿ ಪೀಠ 31:  ಕಾಲ ಕಾಲಕ್ಕೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ಹಿರಿದಾಗಿದೆ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಕರ್ತರ ಕೊಡುಗೆಯೂ ಇದೆ ಎಂದು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ಅವರು ಸೋಮವಾರ ರಂಭಾಪುರಿ ಪೀಠದಲ್ಲಿ ಜರುಗಿದ ಚಿಕ್ಕಮಗಳೂರು ಜಿಲ್ಲಾ ದ್ವಿತೀಯ ಮಾಧ್ಯಮ ಸಮ್ಮೇಳನ ಮತ್ತು ಜಯಂತಿ ಜಾತ್ರಾ ಮಹೋತ್ಸವ ಸಮಾರೋಪದÀ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. 

ಏನೆಲ್ಲ ಸಂಪತ್ತು ಅಧಿಕಾರ ಪಡೆದಾಗ್ಯೂ ಮಾನವನಿಗೆ ಶಾಂತಿ ನೆಮ್ಮದಿ ಇಲ್ಲದಾಗಿದೆ. ಧರ್ಮ ಪೀಠಗಳು ಮತ್ತು ಪುಣ್ಯ ಕ್ದೇತ್ರಗಳಲ್ಲಿ ಮಾತ್ರ ಶಾಂತಿ ನೆಮ್ಮದಿ ಪಡೆಯಲು ಸಾಧ್ಯ. ವಿಶ್ವ ಬಂಧುತ್ವ ಚಿಂತನೆಯನ್ನು ನೀಡಿದ ಜಗದ್ಗುರು ರೇಣುಕಾಚಾರ್ಯರಿಗೆ ಕಾಯಕ ದಾಸೋಹ ಕ್ರಾಂತಿ ಮಾಡಿದ ಶ್ರೇಯಸ್ಸಿದೆ. ವೃತ್ತಿಶ್ಚೈತನ್ಯ ರೂಪಿಣಿ ಕಾಯಕವೇ ಕಳಾ ಚೈತನ್ಯವೆಂದ ರೇಣುಕರು ಜಾತಿ ಮತ ಪಂಥಗಳನ್ನು ಮೀರಿ ಜನ ಮಾನಸದಲ್ಲಿ ಶಾಂತಿ ಸೌಹಾರ್ದತೆಯ ಬೋಧನೆ ಮಾಡಿದ್ದಾರೆ. ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆಯನ್ನು ಅಳವಡಿಸಿಕೊಂಡು ಮುನ್ನಡೆಯುವ ಚಿಂತನೆ ನೀಡಿದ್ದಾರೆ. ಜಾತಿಗಿಂತ ನೀತಿ, ಅರಿವಿಗಿಂತ ಆಚಾರ, ದಾನಕ್ಕಿಂತ ದಾಸೋಹ, ಬೋಧನೆಗಿಂತ ಸಾಧನೆ ಚರಿತ್ರೆಗಿಂತ ಚಾರಿತ್ರ್ಯ ಹಿರಿದಾದುದು ಎಂದು ಹೇಳಿದ್ದಾರೆ. ಅಸ್ಪ್ರಶೋದ್ದಾರ ಮಹಿಳೆಯರಿಗೆ ಧಾರ್ಮಿಕ ಸಾûತಂತ್ರ್ಯ ನೀಡಿದ ಕೀರ್ತಿ ಅವರದು. ಪ್ರಾಚೀನ ಪರಂಪರೆಯ ಪಂಚ ಪೀಠಗಳು ಸಮನ್ವಯದ ಶಾಂತಿ ಸಂದೇಶ ನೀಡುತ್ತ ಬಂದಿವೆ. ಪೂರ್ವದ ಆಚಾರ್ಯರು ಸಂತ ಮಹಂತರು ನೀಡಿದುವ ಧಾರ್ಮಿಕ ಚಿಂತನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಇಂದು ಅನೇಕರು ತಂದೆ ತಾಯಿಯರ£ನ್ನು ವೃದ್ಧಾಶ್ರಮಕ್ಕೆ ಸೇರಿಸುವ ಸಂದರ್ಭದಲ್ಲಿ ಚಿಕ್ಕಮಗಳೂರಿನ ಪ್ರಭುಲಿಂಗ ಶಾಸ್ತ್ರಿಯವರು ತಮ್ಮ ತಂದೆ ತಾಯಿಯವರ ಸ್ಮರಣಾರ್ಥ ಮಾಧ್ಯಮ ಪ್ರಶಸ್ತಿ ನೀಡುವ ಕಾರ್ಯ ಮಾಡುತ್ತಿರುವುದು ಸ್ತುತ್ಯಾರ್ಹ ಸಂಗತಿ ಎಂದರು.

ಮಾಧ್ಯಮ ಸಮ್ಮೇಳನಾಧ್ಯಕ್ಷರಾದ ದು.ಗು.ಲಕ್ಷ್ಮಣ ಮಾತನಾಡಿ ಇಂದಿನ ಗೋಷ್ಠಿಗಳಲ್ಲಿ ಪತ್ರಕರ್ತರಿಗೆ ನೈತಿಕತೆಯೂ ಮುಖ್ಯ ಎಂಬ ಅಂಶವನ್ನು ಬಹಳಷ್ಟು ಜನ ಪ್ರತಿಪಾದಿಸಿದ್ದು ಒಳ್ಳೆಯ ಬೆಳವಣಿಗೆ. ಪತ್ರಕರ್ತರೂ ಸಹ ಕೆಲವು ಜವಾಬ್ದಾರಿಗಳನ್ನು ಹೊಂದಿದ್ದಾರೆ. ಸತ್ಯ ಸಂಗತಿಗಳನ್ನು ಹುಡುಕಿ ತೆಗೆಯುವ ಕೆಲಸವಾಗಬೇಕು. ಇಂದಿನ ಮಾಧ್ಯಮ ಸಮ್ಮೇಳನ ತಮಗೆ ಸಮಾಧಾನ ತಂದಿದೆ ಎಂದರು. ಚಿಕ್ಕಮಗಳೂರು ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಚಿ.ಸ. ಪ್ರಭುಲಿಂಗಶಾಸ್ತ್ರಿ ಉಪಸ್ಥಿತರಿದ್ದರು.

‘ಸುವರ್ಣಾದೇವಿ ಮಹಿಳಾ ರತ್ನ ಪ್ರಶಸ್ತಿ’ಯನ್ನು ಕಡೂರಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ಸಿ.ಎಂ. ಸುಲೋಚನಾ ಶಿವಾನಂದಯ್ಯ ಇವರಿಗೆ ಪ್ರದಾನ ಮಾಡಲಾಯಿತು.

ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶಿರಿಸ್ಯಾಡ ಹಿರೇಮಠದ ಮುರುಗೇಂದ್ರ ಶಿವಾಚಾರ್ಯರು ನುಡಿ ನಮನ ಸಲ್ಲಿಸಿದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಕೃತಜ್ಞತಾ ನುಡಿ ನುಡಿದರು. 

ಚಿಕ್ಕಮಗಳೂರಿನ ದೇವಿ ಗುರುಕುಲದವರಿಂದ ಪ್ರಾರ್ಥನೆ, ಗಜೇಂದ್ರ ಗೊರಸುಕೂಡಿಗೆ ಇವರಿಂದ ಸ್ವಾಗತ, ಶಿವಮೊಗ್ಗೆಯ ಶಾಂತಾ ಆನಂದ ಇವರಿಂದ ನಿರೂಪಣೆ ನಡೆದವು.

ಸುದ್ದಿ ಓದಿ