ಜೀವನಕ್ಕೆ ಆಸರೆಯಾಗಿದ್ದ ಸೂರು ಕಿತ್ತುಕೊಂಡ ಮಳೆರಾಯ : ಬೀದಿಗೆ ಬಂದ ಬಡ ಕುಟುಂಬದಿಂದ ನೆರವಿಗಾಗಿ ಪರದಾಟ
ಪಾರೇಶ ಭೋಸಲೆ
ಬೆಳಗಾವಿ : ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆ ಗಾಳಿಗೆ ಮನೆಯ ಛಾವಣಿ ಕುಸಿದು ಜೀವನಕ್ಕೆ ಇದ್ದ ಆಸರೆಯನ್ನು ಮಳೆರಾಯ ಕಸಿದುಕೊಂಡಿದ್ದು, ಇದರಿಂದ ಮನೆ ಇಲ್ಲದೆ ಬೀದಿಗೆ ಬಂದಿರುವ ಕುಟುಂಬವು ನೆರವಿನ ಹಸ್ತಕ್ಕಾಗಿ ಕಂಡವರಿಗೆ ಕೈಚಾಚುವಂತಾಗಿದೆ.

ಇಂತಹದೊಂದು ಘಟನೆ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಕಾಡಾಪೂರ ಗ್ರಾಮದಲ್ಲಿ ವರದಿಯಾಗಿದೆ. ಇದ್ದ ಸ್ವಲ್ಪ ಜಮೀನಿನಲ್ಲಿ ಉಳುಮಿ ಮಾಡಿ ಅದರ ಜೊತೆಗೆ ಬೇರೆಯವರ ಜಮೀನುಗಳಲ್ಲಿ ಕೂಲಿ ನಾಲಿ ಮಾಡಿ ಕುಟುಂಬದ ಮಾಡುತ್ತ ತನಗಿದ್ದ ಪುಟ್ಟ ಮನೆಯೊಂದರಲ್ಲಿ ಜೀವನ ಸಾಗಿಸುತ್ತಿದ್ದ ಕಾಡಾಪೂರ ಗ್ರಾಮದ ಬಡ ರೈತ ಬಾಬಾಸಾಹೇಬ ಕುಂಡೆಕರ ಅವರ ಕುಟುಂಬವು ಮಳೆರಾಯನ ಆರ್ಭಟಕ್ಕೆ ಬೀದಿಗೆ ಬಂದಿದ್ದು, ಸುಸ್ಥಿರದ ಜೀವನ ಕಳೆಯುವಂತಾಗಿದೆ.

ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಗಾಳಿ ಮಳೆಯಿಂದ ಮನೆಯ ಮೇಲಿನ ಮೇಲ್ಛಾವಣಿ ಸಂಪೂರ್ಣ ವಾಗಿ ಹಾರಿ ಹೋಗಿದ್ದು, ಗೃಹೋಪಯೋಗಿ ವಸ್ತುಗಳು ಕೂಡಾ ಸಂಪೂರ್ಣ ನಾಶವಾಗಿವೆ.
ಇದರಿಂದ ಬಡ ರೈತ ಬಾಬಾಸಾಹೇಬ ಅವರ ಕುಟುಂಬ ಜೀವನ ಸಾಗಿಸುವದು ಕಷ್ಟಕವಾಗಿದ್ದು,ಸಹಾಯ ಹಸ್ತಕ್ಕಾಗಿ ಕಂಡವರಲ್ಲಿ ಕೈಚಾಚುವಂತೆ ಮಾಡಿದೆ. ಮಳೆರಾಯನ ಆರ್ಭಟಕ್ಕೆ ಬಡ ರೈತನ ಕುಟುಂಬದ ಗೋಳಾಟ ನಡೆದಿದ್ದು ದುರ್ಧೈವದ ಸಂಗತಿಯಾಗಿದೆ.