ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ: ಕಾಂಬಳೆ
ಮಹಾಲಿಂಗಪುರ : ಕರ್ನಾಟಕ ಸರ್ಕಾರದ ನಿರ್ದೇಶನ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್-19, 3 ನೇ ಅಲೆ ( ಓಮಿಕ್ರಾನ್ ) ಸಾಂಕ್ರಾಮಿಕ ರೋಗ ರಾಜ್ಯದಲ್ಲಿ ತೀವ್ರತರವಾಗಿ ಹಬ್ಬುತ್ತಿರುವ ಕಾರಣ ಅದರ ನಿಯಂತ್ರಣಕ್ಕೆ ಪಟ್ಟಣದ ಎಲ್ಲ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸಬೇಕೆಂದು ಪಿಎಸ್ ಐ ವಿಜಯ ಕಾಂಬಳೆ ಸಾರ್ವಜನಿಕರನ್ನು ಕೋರಿದರು.
ಪಟ್ಟಣದ ಪೊಲೀಸ ಠಾಣೆಯಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಈಗಾಗಲೇ ಇರುವ ಶುಕ್ರವಾರ ರಾತ್ರಿ 10 ಗಂ.ಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್್ಯೂ ಮತ್ತು ರಾತ್ರಿ 10 ರಿಂದ ಬೆಳಿಗ್ಗೆ 5 ಗಂ.ವರೆಗೆ ನೈಟ್ ಕರ್್ಯೂ ಜಾರಿಯಲ್ಲಿರುತ್ತದೆ.
ವಾರದ ಸಂತೆ, ಜಾತ್ರೆ ರಾ್ಯಲಿಗಳು, ಧರಣಿ ಹಾಗೂ ಮುಷ್ಕರಗಳನ್ನು ರದ್ದುಪಡಿಸಲಾಗಿದೆ. ವೀಕೆಂಡ್ ಕರ್್ಯೂನಲ್ಲಿ ಅಗತ್ಯ ವಸ್ತುಗಳ ಮಾರಾಟದ ದಿನಸಿ. ಹಣ್ಣಿನ ಅಂಗಡಿ, ತರಕಾರಿ, ಮಾಂಸ, ಮೀನು, ಹಾಲಿನ ಅಂಗಡಿ, ಪಶು ಆಹಾರ, ಬೀದಿ ವ್ಯಾಪಾರಸ್ಥರು, ರೇಶನ ಅಂಗಡಿ ಇವುಗಳು ಮಾತ್ರ ತೆರೆದಿರುತ್ತವೆ, ಉಳಿದಂತೆ ಸರ್ಕಾರದ ಮಾರ್ಗದರ್ಶನದಂತೆ ಸೂಚಿಸಲಾಗಿರುವ ಅಂಗಡಿಗಳು ಕಡ್ಡಾಯವಾಗಿ ಬಂದ್ ಮಾಡಬೇಕು. ಹೋಮ್ ಡೆಲಿವರಿಗೆ ಅವಕಾಶವಿದೆ.
ತುರ್ತು ಕೆಲಸವಿದ್ದರೆ ಅಗತ್ಯ ದಾಖಲೆಗಳನ್ನು ಕೊರೋನಾ ವಾರಿಯರ್ಸ್ ಗಳಿಗೆ ತೋರಿಸಬೇಕು, ಅನಗತ್ಯವಾಗಿ ಓಡಾಟ ನಿಬಂರ್ಧಿಸಲಾಗಿದೆ. ತಪ್ಪಿದಲ್ಲಿ ಸೆಕ್ಸನ್-144 ಕರ್್ಯೂ ಜಾರಿಯಲ್ಲಿರುವುದರಿಂದ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ನಂತರ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್ ಚಿತ್ತರಗಿ ಮಾಸ್ಕ ಧರಿಸದ ವ್ಯಕ್ತಿಗಳಿಗೆ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಲಾಗುವುದು.ಈ ಆದೇಶವು ಜನೆವರಿ 19 ವರೆಗೆ ಜಾರಿಯಲ್ಲಿರುತ್ತದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಅಪರಾಧ ವಿಭಾಗ ಪಿ.ಎಸ್.ಐ ಎಸ್.ಎನ್ ಘಾಟಗೆ, ಗಣ್ಯರಾದ ಅಶೋಕ ಅಂಗಡಿ, ಶ್ರೀಶೈಲಪ್ಪ ಹಿಪ್ಪರಗಿ, ರಾಜು ನಂದೆಪ್ಪನವರ, ಚನ್ನಪ್ಪ ಪಟ್ಟಣಶೆಟ್ಟಿ, ಸೈಯದ ಯಾದವಾಡ, ಹನಮಂತ ಶಿರೋಳ, ಮಹಾಂತೇಶ ಟಿರಕನ್ನವರ, ಗಂಗಾಧರ ಮೇಟಿ, ಸಜನಸಾಬ ಪೆಂಡಾರಿ, ಸುರೇಶ ಕಲಾಲ, ಚಂದ್ರು ಸಂಶಿ, ಸೈಯದ್ ಯಾದವಾಡ, ಜಮೀರ ಯಕ್ಷಂಬಿ ಪೊಲೀಸ ಸಿಬ್ಬಂದಿಗಳಾದ ಜೆ.ಜಿ ಪಾಟೀಲ, ವಾಯ್.ವಾಯ್ ಗಚ್ಚನ್ನವರ, ಎಸ್.ಎಂ ಸಣ್ಣಕ್ಕಿ, ಎಲ್.ವ್ಹಿ. ಹುಕುಮನವರ, ಎಸ್.ಎನ್ ದರಿಗೊಂಡ, ಆರ್.ಆರ್ ಆಲಗೂರ ಸೇರಿದಂತೆ ಹಲವರು ಇದ್ದರು.