ಶಿಗ್ಗಾವ್

ಸರಕಾರದ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರು ಅಕ್ರೋಶ

ಸರಕಾರದ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರು ಅಕ್ರೋಶ

ಶಿಗ್ಗಾವಿ 06: ಶಿಗ್ಗಾವಿಯಲ್ಲಿ ಜನ ಸ್ಪಂದನ ಕಾರ್ಯಕ್ರಮ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಅಕ್ರೋಶ ವ್ಯಕ್ತಪಡಿಸಿದ ಮಹಿಳೆ.ಕನ್ನಡಪ್ರಭ ವಾರ್ತೆ ಶಿಗ್ಗಾಂವ ,ಸರಕಾರ ನಿಂತ ನಿರಲ್ಲಾ ಹರಿಯುವ ನೀರು ಇದ್ದಂತೆ ಯಾವುದೆ ಸರಕಾರವು ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯವನ್ನು ನಿರ್ವಹಿಸಬೇಕು ಸರಕಾರ ಜನ ಸಾಮಾನ್ಯರಿಗೆ ಸ್ಪಂದಿಬೇಕು ಸರಕಾರದ ಆದೀನದಲ್ಲಿರಿವ ಅಧಿಕಾರಿಗಳು ಸ್ಪಂದಿಸಬೆಕಾಗುತ್ತದೆ. ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. 

ಶಿಗ್ಗಾಂವ ಪಟ್ಟಣದ ಸರಕಾರದ ಜನಸ್ಪಂದನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದವರು ಚುನಾಯಿತ ಪ್ರತಿನಿಧಿಗಳು ತಮ್ಮ ಅಳಿಲು ಸೇವೆಯನ್ನು ಮಾಡುತ್ತಾರೆ, ಜನ ಸಾಮಾನ್ಯರ ಸಮಸ್ಯಗಳು ಉಳಿದಿರುತ್ತವೆ ಅದನ್ನು ಸ್ಪಂದಿಸಿ ಕಾರ್ಯನಿರ್ವಹಿಸುವ ಅವುಗಳಿಗೆ ಸ್ಪಂದಿಸಿ ನಾವೆಲ್ಲರೂ ಮಾಡಬೇಕಾದ ಅನಿವಾರ್ಯತೆ ನಮ್ಮಲ್ಲರಿಗೂ ಸ್ಪಂದಿಸುವದು ಅವಶ್ಯವಾಗಿದೆ ಸರಕಾರವು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನ ಸಂಪರ್ಕ ಸಭೆಯನ್ನು ಹಿಂದಿನ ಜಿಲ್ಲಾಧಿಕಾರಿಗಳು ಮಾಡಿ ಹಲವಾರು ಸಮಸ್ಯಗಳಿಗೆ ಪರಿಹರಿಸಿದ್ದಾರೆ ಇಂದು ಅವರ ಮಾಡಿದ ಕೆಲಸವನ್ನು ಅವರು ಇಲ್ಲಂದರೂ ಅವರ ಶ್ಲಾಂಘನೆಯನ್ನು ಮಾಡಬೇಕಾಗುತ್ತದೆ. 

 ಅವರ ಅನುಪಸ್ತೀತಿಯಲ್ಲಿ 163 ಅರ್ಜಿಗಳಲ್ಲಿ 66 ಅರ್ಜಿಗಳನ್ನು ವಿಲೇವಾರಿ ಮಾಡಿ ಪರಿಹಾರವನ್ನು ಕಂಡುಕೊಂಡಿದ್ದಾರೆ. ಉಳಿದ ಸಮಸ್ಯಗಳನ್ನು ಹಂತ ಹಂತವಾಗಿ ಪರಿಹರಿಸಲು ಮುಂದಾದರು, ನಂತರ 28 ಅರ್ಜಿಗಳನ್ನು ಬಂದವು ಈಗಲೂ ಕೂಡಾ 75 ಕ್ಕೂ ಅರ್ಜಿಗಳು ಬಂದಿವೆ ಅಂದರೆ ತಮ್ಮಲ್ಲಾ ಪರಿಹಾರವನ್ನು ಜನರು ಕಂಡುಕೋಳ್ಳುತ್ತಿದ್ದಾರೆ, ಜಿಲ್ಲಾ ಹಾಗೂ ತಾಲೂಕಾ ಆಡಳಿತವು ಪರಿಹಾರನ್ನು ಕಂಡುಕೋಂಡಿದ್ದಾರೆ, 

ಇದಕ್ಕು ಪೂರ್ವದಲ್ಲಿ ವಿಕಲಚೇತನರಿಗೆ ಸಹಾಯವಾಗಲೆಂದು ಕಲ್ಲು ಕೊಡಮಾಡಿದ್ದು ಜಿಲ್ಲೇಯಲ್ಲಿ 211 ತ್‌ರೇ​‍್ಯಸಿಕಲ್ಲು ವಿಲೇವಾರಿ ಮಾಡುತ್ತಿದ್ದು ಶಿಗ್ಗಾವಿ ಕೂಡಾ ಸೇರಿದೆ ಇದರಿಂದ ವಿಕಲಚೇತನರಿಗೆ ಸಹಾಯವಾಗಿದೆ ಎಂದರು, ಗಡಿನಾಡು ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷರು ಗಮನಕ್ಕೆ ತಂದಿದ್ದಾರೆ,ಅವರ ಕೂಡಾ ಸೇರಿಕೊಂಡು ಸಮಸ್ಯಗಳ ಸರಕಾರ ಸ್ಫಂದಿಸುತ್ತದೆ ಎಂದರು. 

ಶಿಗ್ಗಾವಿ ಅಭಿವೃದ್ಧಿ ದೃಷ್ಟಿ ಯಿಂದ ಸರಕಾರದಿಂದ ಒಂದು ನೂರು ಕೋಠಿ ಅನುದಾನವನ್ನು ಕೋಡಿಸುವ ಭರವಸೆಯನ್ನು ನೀಡಿದರು, ಸಾಕಷ್ಟು ಜನರು ರೈತರು ಅನೇಕ ಸಮಸ್ಯಗಳಿಗೆ ಸ್ಪಂದಿಸುವದಾಗಿ ಹೇಳಿದರು. 

ಹಲವಾರು ಅಧಿಕಾರಿಗಳು ಸರಕಾರ ನಿಂತ ನಿರಲ್ಲಾ ಹರಿಯುವ ನೀರು ಇಗಾಗಲೇ ಸರಕಾರ ನಾಲ್ಕು ಕೋಟಿ ಇಪ್ಪತ್ತು ಲಕ್ಷ ಜನರು ಪಂಚಗ್ಯಾರಂಟಿ ಯೋಜನೆಯನ್ನು ಪಡೆದಿದ್ದಾರೆ, ಸೇರಿದಂತೆ ಎಲ್ಲಾ ಅಧಿಕಾರಿಗಳು ಪಧಾದಿಕಾರಿಗಳು.ಸಹಕಾರವನ್ನು ಮಾಡುತ್ತಿದ್ದಾರೆ ಎಂದರು. 

ಜಿಲ್ಲಾಧಿಕಾರಿಗಳಾದ ಡಾ,ವಿಜಯ ಮಹಾಂತೇಶ ದಾನಮ್ಮನವರ, ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣಾ ಬೇವಿನಮರದ ಸೇರಿದಂತೆ ಹಲವರು ಮಾತನಾಡಿದರು. 

ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ,ಶಾಸಕರಾದ ಬಸವರಾಜ ಶಿವಣ್ಣವರ, ಶ್ರೀನಿವಾಸ ಮಾನೆ, ಮಾಜಿ ಸಂಸದ ಮಂಜುನಾಥ ಕುನ್ನೂರ, ಡಾ, ನಾಗರಾಜ ಎನ್‌. ರಂಗಸ್ವಾಮಿ, ಶಿಗ್ಗಾವಿ ಪುರಸಭೆಯ ಅಧ್ಯಕ್ಷ ಸಿದ್ದಾರ್ಥ ಪಾಟೀಲ, ಬಂಕಾಪುರ ಪುರಸಭೆಯ ಅಧ್ಯಕ್ಷೆ ಮಮತಾ ಮಾಗಿ, ಸವಣೂರ ಅಧ್ಯಕ್ಷರಾದ ಅಲ್ಲಹುದ್ದೀನ್ ಮನೀಯಾರ,ಎಸ್‌.ಎಪ್‌.ಮಣಕಟ್ಟಿ, ಸುಭಾಸ ಮಜ್ಜಿಗಿ, ಗುಡ್ಡಪ್ಪ ಜಲದಿ, ಉಪಾಧ್ಯಕ್ಷರಾದ ಶಾಂತಾಬಾಯಿ ಸುಭೇದಾರ, ಆಂಜನೇಯ ಗುಡಗೇರಿ, ಖೈರುನ್ನೀಸಾ ಪಟೇಲ, ಮಮತಾ ಹೊಸಗೌಡ್ರ, 

ಸ್ವಾಗತವನ್ನು ಕ್ಷೇತ್ರಶಿಕ್ಷಣಾಧಿಕಾರಿ ಎಂ.ಬಿ ಬಾರಕೇರ ನೆರವೆರಿಸಿದರೆ, ನಾಗಪ್ಪ ಬೆಂತೂರ, ರಟ್ಟಳ್ಳಿ ನಿರುಪಿಸಿದರು 

ನಮ್ ಊರಿಗೆ ಬಸ್ ನಿಲ್ಲಿಸದಿದ್ದರೆ ಬಸ್ ಗೆ ಕಲ್ಲು ತಗೊಂಡು ಹೊಡೀತೀವಿ ನೋಡ್ರೀ ಎಂದು ಮಹಿಳೆ ಅಕ್ರೋಶವನ್ನು .ಹೊರಹಾಕಿದಳು, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮುಂದೆನೇ ಮಹಿಳೆ ಅವಾಜ್, ಏ ಹಂಗೆಲ್ಲಾ ಮಾಡಬಾ ರದಮ್ಮ, ನಾನು ಬಸ್ ಬಿಡಿಸ್ತೀನಿ ಎಂದ ಶಿವಾನಂದ ಪಾಟೀಲ್ 

ತಾಲೂಕು ಬಿಸನಳ್ಳಿ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ ನಮ್ ಊರಿಗೆ ಬಸ್ ನಿಲ್ಲಸಿ ಜನರನ್ನು ಹತ್ತಸಿಕೊಂಡು ಹೋಗಬೇಕು ಬಸ್ ನಿಲ್ಲಿಸೋಂಗಿಲ್ಲಾ ಇದರಿಂದ ಶಾಲಾ ವಿದ್ಯಾರ್ಥಿಗ ಳಿಗೆ ಬಹಳ ತೊಂದರೆ ಆಗಿದೆ ಬಸ್ ನಮ್ ಊರಿಗೆ ತರಬೋಕೆ ಹೇಳಿ ಎಂದ ಮಹಿಳೆ ಕಮಲವ್ವ 

ತಕ್ಷಣ ಅಲ್ಲಿದ್ದ ಸಾರಿಗೆ ಅಧಿಕಾರಿಗಳನ್ನು ಕರೆಸಿ ಬಸ್ ವ್ಯವಸ್ಥೆ ಮಾಡಿಸಿ ಎಂದು ತಾಕೀತು ಶಿವಾನಂದ ಪಾಟೀಲ್ ಮಾಡಿದರು. 


ಸುದ್ದಿ ಓದಿ