ರಾಣೆಬೆನ್ನೂರ

ನಾಡಿನ ಹೆಮ್ಮೆಯ ಸಾಧಕಿ - ಪಾರ್ವತಿ ಹೊಸಮನಿ. "ಚಿತ್ರ ಸಂತೆ"ಎಕ್ಸಲೆನ್ಸ್ ಅವಾರ್ಡ್.

ನಾಡಿನ ಹೆಮ್ಮೆಯ ಸಾಧಕಿ - ಪಾರ್ವತಿ ಹೊಸಮನಿ. "ಚಿತ್ರ ಸಂತೆ"ಎಕ್ಸಲೆನ್ಸ್ ಅವಾರ್ಡ್.

ರಾಣೇಬೆನ್ನೂರು : ಇಲ್ಲಿನ ಪ್ರತಿಷ್ಠಿತ ಶ್ರೀ ಸರಸ್ವತಿ ಮಹಿಳಾ ಮಂಡಳದ ಸಂಸ್ಥಾಪಕ ಅಧ್ಯಕ್ಷ ಶ್ರೀಮತಿ ಪಾರ್ವತಿ ವಿರುಪಾಕ್ಷಪ್ಪ  ಹೊಸಮನಿ ಅವರು 26-ನೇ ಸಾಲಿನ  ಸಾಧಕ ಮಹಿಳೆಯರಿಗೆ ಕೊಡ ಮಾಡುವ "ಯುಗಾದಿ" ಪುರಸ್ಕಾರ  ಎಕ್ಸಲೆನ್ಸ್" ಇನ್ ಸೋಶಿಯಲ್"  ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ 35 ವರ್ಷಗಳಿಂದ, ತಾವೇ ಸ್ಥಾಪಿಸಿದ ಮಹಿಳಾ ಮಂಡಳದ ಮೂಲಕ,  ಸ್ವಯಂ ಉದ್ಯೋಗ, ವೃತ್ತಿ ಕೌಶಲ್ಯ, ಟೈಲರಿಂಗ್, ಕರಕುಶಲ ಕಲೆ, ಇತರೆ ಸ್ವಯಂ ಉದ್ಯೋಗ ಸೃಷ್ಟಿಯ  ತರಬೇತಿ ನೀಡುವುದರ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾಗಿದ್ದಾರೆ.

ಬೆಂಗಳೂರಿನ ಹೈಡ್ ಪಾರ್ಕ್ ಅರಮನೆ ಸಭಾಂಗಣದಲ್ಲಿ ನಡೆದ ಗಿರೀಶ್ ಪಿ. ಗೌಡ ಅವರ ಸಾರತ್ಯದ ಸಿನಿಮಾ, ಸಂಸ್ಕೃತಿ, ಸಂಭ್ರಮ "ಚಿತ್ರಸಂತೆ" ಅದ್ದೂರಿ ಸಮಾರಂಭದಲ್ಲಿ  ಹೆಮ್ಮೆಯ  ಸಾಧಕಿ ಶ್ರೀಮತಿ ಪಾರ್ವತಿ ಹೊಸಮನಿ ಅವರಿಗೆ ಚಿತ್ರನಟಿ ರಚನಾ ರೈ ಅವರು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು. ಪ್ರಶಸ್ತಿ ಪುರಸ್ಕೃತರಿಗೆ ಹಾವೇರಿ  ಜಿಲ್ಲಾ ಫೇವಾರ್ಡ್. ಕೆ. ಅಧ್ಯಕ್ಷರು ಪದಾಧಿಕಾರಿಗಳು, ಸಂಘ ಸಂಸ್ಥೆಗಳು, ಮಹಿಳಾ ಸಂಘಟನೆಗಳು  ಅಭಿನಂದಿಸಿದ್ದಾರೆ.

ಸುದ್ದಿ ಓದಿ