ಮೀನುಗಾರರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಹಾರ ನೀಡಲಾಗುವುದು : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ
ಕಾರವಾರ 25: ಮೀನುಗಾರರ ಸಮಸ್ಯೆಗಳನ್ನು ಪರೀಶೀಲಿಸಿ, ಸಂಬಂಧ ಪಟ್ಟ ಅಧಿಕಾರಿಗಳಿಂದ ಪರಿಹಾರಿಸುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಮೀನುಗಾರರ ಕುಂದು ಕೊರತೆ ಪರಿಹರಿಸುವ ಸಭೆಯಲ್ಲಿ ಜಿಲ್ಲೆಯ ಮೀನುಗಾರರ ಹಾಲಿ ಸಮಸ್ಯೆಗಳನ್ನು ಮೀನುಗಾರರಿಂದಲೇ ಆಲಿಸಿದರು. ಮೀನುಗಾರರ ಸಮಸ್ಯೆಗಳ ಕುರಿತು ಮಾಹಿತಿ ನೀಡಿದ ಜಿಲ್ಲಾ ಮೀನುಗಾ ಫೆಡರೇಶನ್ ಅಧ್ಯಕ್ಷ ರಾಜು ತಂಡೇಲ, ಮೀನುಗಾರರಿಗೆ ಮೀನುಗಾರಿಕೆ ಮಾಡಲು ನೌಕ ಪಡೆಯಿಂದ ಸಾಕಷ್ಟು ತೊಂದರೆಗಲಾಗುತ್ತಿದೆ. ಇದರಿಂದ ಮೀನುಗಾರಿಕೆಗೆ ಸಾಕಷ್ಟು ಹೊಡೆತ ಬಿದ್ದಿದೆ. ಜಿಲ್ಲೆಯ ಮೀನುಗಾರರು ನೌಕ ಪಡೆಯು ಗುರುತಿಸಿದ ಅಪಾಯಕಾರಿ ಪ್ರದೇಶವನ್ನು ಹೊರತು ಪಡಿಸಿ, ಮೀನುಗಾರಿಕೆ ಮಾಡುತ್ತಿದ್ದು ಆದಾಗ್ಯೂ ನೌಕ ಪಡೆಯ ಅಧಿಕಾರಿಗಳು ವಿನಾಕಾರಣ ಮೀನುಗಾರರನ್ನು ಹಿಡಿದು ತೊಂದರೆ ನೀಡುತ್ತಿರುತ್ತಾರೆ. ಒಂದು ವೇಳೆ ಮೀನುಗಾರರಿಂದ ತಪ್ಪುಗಳು ಆಗಿದ್ದಲ್ಲಿ ಕೋಸ್ಟಲ್ ಪೊಲೀಸ್ ರಿಂದ ಅದನ್ನು ತಡೆಯುವಂತೆ ಆಗಬೇಕು. ಹೊರತುಪಡಿಸಿ ನೌಕ ಪಡೆಯ ಅಧಿಕಾರಿಗಳು ಯಾವುದೇ ರೀತಿಯಾಗಿ ತೊದರೆಗಳನ್ನು ನೀಡದಂತೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಹಾಗೆಯೇ ಕೇಂದ್ರ ಸರ್ಕಾರದಿಂದ ಮೀನುಗಾರರಿಗೆ ನೀಡುವ ಸಂಕಷ್ಟ ಪರಿಹಾರವು ತ್ವರಿತವಾಗಿ ಸಂಬಂಧ ಪಟ್ಟ ಇಲಾಖೆಯಿಂದ ಸಿಗುವಂತಾಗಬೇಕು, ನಾಡ ಮೀನುಗಾರ ದೋಣಿಗಳಿಗೆ ಸೀಮೆ ಎಣ್ಣೆ ಸರಿಯಾಗಿ ವಿತರಣೆಯಾಗಬೇಕು, ಮೀನುಗಾರ ಮಹಿಳೆಯರಿಗೆ ಮೀನು ಮಾರಾಟ ಮಾಡಲು ಮಾರುಕಟ್ಟೆ ನಿರ್ಮಾಣ ಮಾಡಿಕೊಡಬೇಕು, ಸರ್ಕಾರ ಮೀನುಗಾರರಿಗೆ ಜಾರಿ ತಂದಿರುವ ಕಾರ್ಯ ಚಟುವಟಿಕೆಗಳನ್ನು ಜಾರಿಗೊಳಿಸಬೇಕು ಹೀಗೆ ಮುಂತಾದ ಬೇಡಿಕೆಗಳನ್ನು ಪೂರೈಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಬಳಿಕ ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟ ನೌಕ ಪಡೆಯ ಅಧಿಕಾರಿಗಳಿಗೆ ಸಭೆಯಲ್ಲೇ ನಿರ್ದೇಶನ ನೀಡಿದರು. ಮೀನುಗಾರರು ಮೀನುಗಾರಿಕೆ ಸಂದರ್ಭದಲ್ಲಿ ನಿಗದಿ ಪಡಿಸಿದ ಗಡಿ ದಾಟಿ ಮೀನುಗಾರಿಕೆ ಮಾಡದಂತೆ ತಿಳಿಸಿದರು .ಒಂದು ವೇಳೆ ಮೀನುಗಾರರ ಅರಿವಿಗೆ ಬಾರದೆ ಸರ್ಕಾರ ನೌಕ ಪಡೆಗಾಗಿ ನಿಗದಿ ಪಡಸಿದ ಗಡಿ ದಾಟಿ ಮೀನುಗಾರಿಕೆ ಮಾಡಿದರೆ, ಅದನ್ನು ಪರೀಶೀಲಿಸಿ ಅವರಿಗೆ ಮಾಹಿತಿ ನೀಡಿ ಅಲ್ಲಿಂದ ತೆರಳುವಂತೆ ಸೂಚಿಸಬೇಕು , ಹೊರತು ಮೀನುಗಾರರ ಮೇಲೆ ಯಾವುದೇ ರೀತಿ ತೊಂದರೆಗಳನ್ನು ನೀಡದಂತೆ ನೌಕ ಪಡೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೆಯೇ ಸರ್ಕಾರದಿಂದ ಮೀನುಗಾರರಿಗೆ ಜಾರಿಯಾದ ಸಂಕಷ್ಟ ಪರಿಹಾರ ಯೋಜನೆಗಳ ಕುರಿತು ಪರೀಶೀಲಿಸಿ ಪರಿಹಾರ ಒದಗಿಸಲಾಗುವುದು ಎಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಹೆಚ್ಚುವರಿ ಎಸ್ ಪಿ ಜಯರಾಜ್, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು, ಫ್ಲಾಗ್ ಆಫೀಸರ್ ಕಾಮೋಡಿಂಗ್ ಆರ್ ಡಿ ಪವಾರ, ಮೀನುಗಾರ ಸಂಘದ ಅಧ್ಯಕ್ಷ ರಾಜು ತಾಂಡೇಲಿ ಹಾಗೂ ಮೀನುಗಾರರು ಉಪಸ್ಥಿತರಿದ್ದರು.