ಜೈನ ಧರ್ಮದ ತತ್ವ-ಸಂದೇಶಗಳು ಆಧುನಿಕ ಯುಗದಲ್ಲೂ ಬಹು ಪ್ರಸ್ತುತ
ಬ್ಯಾಡಗಿ 30 : ಜೈನ ಧರ್ಮವು ಕ್ರಿ.ಶ. ಪೂರ್ವ 600 ರಲ್ಲೆ ಪ್ರಚಲಿತದಲ್ಲಿತ್ತು. ಭಗವಾನ ಮಹಾರರ ವೈಜ್ಞಾನಿಕ ಬೋಧನೆಗಳಿಂದ ಇಂದಿನ ಅಧುನಿಕ ಯುಗದಲ್ಲೂ ಕೂಡ ಜೈನ ಧರ್ಮದ ತತ್ವ-ಸಂದೇಶಗಳು ಬಹು ಪ್ರಸ್ತುತವಾಗಿವೆ ಎಂದು ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕ ಕಚೇರಿ ಆವರಣದಲ್ಲಿ ಭಗವಾನ್ ಮಹಾವೀರರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಾತನಾಡಿದವರು.ಒಂದು ಕ್ಷ ಣದ ಕೆಟ್ಟ ಘಟನೆ ಅಥವಾ ಸಂಗತಿ ಮರುಕ್ಷ ಣವೇ ಉತ್ತಮವಾಗಿರುವ ಸಾಧ್ಯತೆಯನ್ನು ಜೈನ ಧರ್ಮ ತೆರೆದಿಡುತ್ತದೆ. ಈ ತತ್ವವನ್ನು ಸರಿಯಾಗಿ ಅರಿತು ಆಚರಣೆಗೆ ತಂದಲ್ಲಿ ಬಹಳಷ್ಟು ಯುದ್ಧ, ಪರಸ್ಪರ ದ್ವೆ?ಷ ಸಾಧನೆ, ಅಸೂಯೆಗಳನ್ನು ನಿಲ್ಲಿಸಬಹುದಾಗಿದೆ ಎಂದು ಹೇಳಿದರು.,
ಕಾರ್ಯಕ್ರಮದಲ್ಲಿ ಜಿಲ್ಲಾ ಜೈನ ಸಂಘದ ಉಪಾಧ್ಯಕ್ಷ ಶಿವ ರಾಯಪ್ಪ ಅಪ್ಪಣ್ಣನವರ್. ತಾಲೂಕು ಕಾರ್ಯದರ್ಶಿ ಶಿವಾನಂದಪ್ಪ ಕಡೂರ್. ಹೈ ಕೋರ್ಟ್ ನ್ಯಾಯವಾದಿ ನಾಗರಾಜ್ ಅಪ್ಪಣ್ಣನವರ್. ಶಿಶು ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್. ಬಿಸಿಎಂ ಇಲಾಖೆಯ ಅಧಿಕಾರಿ ಪ್ರಸಾದಿಮಠ. ನಾಗರಾಜ್ ಗೂಳೇರ ತಹಶೀಲ್ದಾರ್ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.