ಮಹಲಿಂಗಪುರ

ಹಡಪದ ಅಪ್ಪಣ್ಣವರ ಶರಣರ ತತ್ವ ಗುಣಗಳು ಎಲ್ಲರಿಗೂ ಮಾದರಿ : ಶೇಖರ

ಹಡಪದ ಅಪ್ಪಣ್ಣವರ ಶರಣರ ತತ್ವ ಗುಣಗಳು ಎಲ್ಲರಿಗೂ ಮಾದರಿ : ಶೇಖರ

ಪುರಸಭೆಯಲ್ಲಿ 890 ನೇ ಅಪ್ಪಣ್ಣನ ಜಯಂತಿ  

ಮಹಾಲಿಂಗಪುರ 20: ಹನ್ನೆರಡನೆಯ ಶತಮಾನದಲ್ಲಿ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು ಇವರು ಹಡಪದ ಸಮಾಜದವರಾಗಿದ್ದು. ಬಸವಣ್ಣನವರ ಬಲಗೈ ಬಂಟನೆಂದೇ ಖ್ಯಾತಿ ಪಡೆದಿದ್ದರು. ಇವರು ವಿಶ್ವದ ​‍್ರ​‍್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ "ಅನುಭವ ಮಂಟಪದಲ್ಲಿ "ಬಸವಣ್ಣವರ ಪ್ರಧಾನ ಕಾರ್ಯದರ್ಶಿಗಳಾಗಿ ನಿಸ್ಕಳಂಕ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆ ಇಂದಿನವರಿಗೆ ಮಾದರಿಯಾಗಿದೆ. ಎಂದು ಪುರಸಭೆಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಶೇಖರ ಅಂಗಡಿ ಹೇಳಿದರು. 

ಪುರಸಭೆಯಲ್ಲಿ ನಡೆದ ಹಡಪದ ಅಪ್ಪಣ್ಣನವರ 890 ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಪ್ಪಣ್ಣವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ಜನ ಮೌಢ್ಯತೆಯನ್ನು ನಂಬುತ್ತಿದ್ದರು. ಅಂದು ಹಡಪದ ಸಮಾಜದವರು ಎದುರುಗಡೆ ಬಂದರೆ ಏನೋ ಆಗುತ್ತದೆ ಎಂಬ ಮೂಢ ನಂಬಿಕೆಯುಳ್ಳವರಾಗಿದ್ದರು.ಇದನ್ನು ಹೋಗಲಾಡಿಸುವುದಕ್ಕಾಗಿಯೇ ಬಸವಣ್ಣವರು ಯಾರೇ ಬಂದರು ಮೊದಲು ಹಡಪದ ಅಪ್ಪಣ್ಣನವರನ್ನು ಭೇಟಿಯಾಗಲೆಂದೇ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡು ಜನರ ಮನಸ್ಸಿನಲ್ಲಿ ಮನೆ ಮಾಡಿದ್ದ ಮೂಢನಂಬಿಕೆ ಹೋಗಲಾಡಿಸಿದ್ದರು.ಎಂದರು. 

ನಂತರ ಮಾತನಾಡಿದ ಪುರಸಭೆ ಅಧಿಕಾರಿಗಳಾದ ಎಸ್ ಎನ್ ಪಾಟೀಲ ಅಪ್ಪಣ್ಣವರು ಹುಟ್ಟಿದ್ದು ಅಂದಿನ ಬಿಜಾಪುರ ಜಿಲ್ಲೆಯ ತಂಗಡಗಿಯಲ್ಲಿ ಅವರ ಧರ್ಮ ಪತ್ನಿ ಲಿಂಗಮ್ಮನವರು ಸಹ ಮಹಾನ ವಚನಗರ್ತಿಯಾಗಿದ್ದರು. ಅಪ್ಪಣ್ಣನವರು ಸುಮಾರು 250 ಕ್ಕೂ ಹೆಚ್ಚು ವಚನಗಳನ್ನು ಚನ್ನಬಸವಣ್ಣ ಎಂಬ ಅಂಕಿತನಾಮದಿಂದ ರಚಿಸಿದ್ದಾರೆ. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರು.ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾಜದ ಸುಧಾರಣೆ ಶ್ರಮಿಸಿದ ಮಹಾನ್ ಶರಣರಾಗಿದ್ದರು. ಅವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ದಾರಕ್ಕೆ ದಾರಿದಿಪಗಳಾಗಿವೆ.ಇವರ ವಚನಗಲ್ಲಿ ಶರಣರಿಗಿರಬೇಕಾದ ಕಾಯಕನಿಷ್ಠೆ, ದಾಸೋಹ, ವೈರಾಗ್ಯ, ಭಕ್ತಿ, ಆಚಾರ, ವಿಚಾರಗಳನ್ನು ವಿಡಂಬಿಸಿ ಅಜ್ಞಾನಿಗಳನ್ನು ಸುಜ್ಞಾನಿಗಳನ್ನಾಗಿ ಮಾಡಲು ಯತ್ನಿಸಿದ್ದಾರೆ ಎಂದರು. 

ನಂತರ ಮಾತನಾಡಿದ ಸಮಾಜದ ಮುಖಂಡರಾದ ಪ್ರಭು ನಾವಿ ಮನುಷ್ಯ ಅಂತರಂಗದ ಅರಿಷಡ್ವರ್ಗಗಳನ್ನು ನಿಗ್ರಹಿಸದ ಹೊರತು ನಿಜ ಮನುಜನಾಗಲು ಸಾಧ್ಯವಿಲ್ಲ. ನಾನು ನಾನು ಎಂದು ಅಹಂಕಾರದಿಂದ ತನ್ನನ್ನು ತಾನು ಅರಿಯದೆ ತಣ್ಣವರು ತನ್ನ ಸಮಾಜ ನಾವು ನಮ್ಮವರು ಎಂದಾಗಲೇ ಸಮಾಜದ ಏಳಿಗೆ ಸಾಧ್ಯವಾಗುತ್ತದೆ. ಸಮಾಜಕ್ಕಾಗಿ ದುಡಿಯಬೇಕು ಸಮಾಜಕ್ಕಾಗಿ ಮಡಿಯಬೇಕು ಆಗಲೇ ಹುಟ್ಟಿದ್ದು ಸ್ವಾರ್ಥಕವಾಗುತ್ತದೆ ಎಂದರು.  

ಈ ಸಂಧರ್ಭದಲ್ಲಿ ಸಮಾಜದ ಮುಖಂಡರಾದ  ಹಣಮಂತ ನಾವಿ, ಚನ್ನಬಸು ಹಡಪದ, ಸಿದ್ದು ಹಡಪದ, ಶ್ರೀಶೈಲ ಹಡಪದ,ಪುರಸಭೆ ಸಿಬ್ಬಂದಿಗಳಾದ ಎಂ ಎಂ ಮುಗಳಖೋಡ, ಎಸ್ ಜಿ ಅಳ್ಳಿಮಟ್ಟಿ, ಆರ್ ಎಸ್ ಹೂಗಾರ, ಎಂ ಕೆ ದಳವಾಯಿ, ಎಸ್ ಜಿ ಕಟ್ಟಿ, ಡಿ ಕೆ ಜಮಖಂಡಿ, ಶ್ರೀಕಾಂತ್ ಹಡಪದ, ಲಕ್ಷ್ಮಿ ಪರಿಟ್, ರಾಮು, ರವಿ ಹಲಸಪ್ಪಗೋಳ ಸೇರಿ ಹಲವರು ಇದ್ದರು. 


ಸುದ್ದಿ ಓದಿ