ಮಹಲಿಂಗಪುರ

ನ.11 ರಿಂದ ವಿಠ್ಠಲ ರುಕ್ಮಿಣಿ ಹರಿನಾಮ ಸಪ್ತಾಹ ಜಾತ್ರಾ ಮಹೋತ್ಸವ

ನ.11 ರಿಂದ ವಿಠ್ಠಲ ರುಕ್ಮಿಣಿ ಹರಿನಾಮ ಸಪ್ತಾಹ ಜಾತ್ರಾ ಮಹೋತ್ಸವ

ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲರಿಂದ ಭಿತ್ತಿಪತ್ರ ಬಿಡುಗಡೆ 

ಮಹಾಲಿಂಗಪುರ 16: ಸ್ಥಳೀಯ ಬುದ್ನಿ ಪಿಡಿ ಬಡಾವಣೆಯ ಶ್ರೀ ವಿಠ್ಠಲ ರುಕ್ಮಿಣಿ ಐತಿಹಾಸಿಕ ದೇವಸ್ಥಾನದಲ್ಲಿ ನ.11ರಿಂದ 16ರವರೆಗೆ ಜರುಗಲಿರುವ ಹರಿನಾಮ ಸಪ್ತಾಹದ ನತ್ತು ಜಾತ್ರೋತ್ಸವದ ಭಿತ್ತಿಪತ್ರವನ್ನು  ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ ಬಿಡುಗಡೆಗೊಳಿಸಿದರು. 

ಜಾತ್ರಾ ಕಮಿಟಿ ಮುಖ್ಯಸ್ಥ ಕೃಷ್ಣಗೌಡ ಪಾಟೀಲ ಮಾತನಾಡಿ, 700 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಸ್ಥಳೀಯ ವಿಠ್ಠಲ ರುಕ್ಮಿಣಿ ದೇವಸ್ಥಾನದ ಜಾತ್ರೋತ್ಸವ ಮತ್ತು ಅಖಂಡ ಹರಿನಾಮ ಸಪ್ತಾಹ ನ.11ರಿಂದ 16ರವರೆಗೆ ಫಂಡರಾಪುರದ ಶಿವುರಕೆರೆ ಶಾಖೆಯ ಕೃಷ್ಣ ಮಹಾರಾಜ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಜರುಗಲಿದ್ದು, ನ.11ರಂದು ಸಂಜೆ 5ಕ್ಕೆ ಪೋತಿ ಸ್ಥಾಪನೆ, ರಾತ್ರಿ 8 ರಿಂದ ಭಜನೆ, 12ರಿಂದ 14ರವರೆಗೆ ನಿತ್ಯ ಬೆಳಿಗ್ಗೆ 5 ರಿಂದ 6ರವರೆಗೆ ಕಾಕಡಾರತಿ, 7 ರಿಂದ ಪ್ರವಚನ, 1ರಿಂದ ಭಜನೆ, ಕೀರ್ತನೆ, ಸಂಜೆ 4 ರಿಂದ 6ರವರೆಗೆ ಪರಿಪಾಠ, 7ರಿಂದ 9ರವರೆಗೆ ಕೀರ್ತನೆ, 9ರಿಂದ ಜಾಗರಣೆ ಹಾಗೂ15ರಂದು ಮುಂಜಾನೆ5ರಿಂದ 8ರವರೆಗೆ ಕಾಕಡಾರತಿ, ಶ್ರೀಹರಿ ವಿಠ್ಠಲ ಸೋಹಳಾ ದಿಂಡಿ ನಗರ ಪ್ರದಕ್ಷಿಣೆ, , ಭಾರುಡ , ಮಹಾಪ್ರಸಾದ ಹಾಗೂ ಸಂಜೆ 5ಕ್ಕೆ ಮಹಾರಥೋತ್ಸವ ಹಾಗೂ ಅದೇ ದಿನ ಮ.12ರಿಂದ ಹಳ್ಳಿಯಿಂದ ದಿಲ್ಲಿವರೆಗೆ ನಾಟಕ, 16ರಂದು ಸಂಜೆ5ಕ್ಕೆ ಕಳಸ ಇಳಿಸಿ ಮಹಾಪ್ರಸಾದದೊಂದಿಗೆ ಉತ್ಸವ ಮುಕ್ತಾಯವಾಗುವುದು ಎಂದು ತಿಳಿಸಿದ್ದಾರೆ. 

ಪಾಟೀಲ ಮನೆತನದ ಶಂಕರಗೌಡ, ಗೌಡಪ್ಪಗೌಡ, ವಿಷ್ಣುಗೌಡ, ನಾರಾಯಣಗೌಡ, ವಿಠ್ಠಲಗೌಡ, ಮಹಾಲಿಂಗಗೌಡ, ಶ್ರೀನಿವಾಸಗೌಡ ಮಾಲಬಸರಿ, ಮಲ್ಲಪ್ಪ ಅಂಬಣ್ಣಗೋಳ, ಕುಮಾರ ಪವಾರ, ರಾಜು ಮುದಕಪ್ಪಗೋಳ, ಸದಾಶಿವ ಶೇಗುಣಸಿ, ಮಲ್ಲಿಕಾರ್ಜುನ ಸಂಶಿ, ಲಕ್ಷ್ಮಣ ಮಿರ್ಜಿ, ಶ್ರೀಮಂತ ಒಂಟಗೋಡಿ ಸುರೇಖಾ ಯಾದವಾಡ, ಶಿವಯ್ಯ ಮಠಪತಿ, ಮೌನೇಶ ದಾದನಟ್ಟಿ, ಹನಮಂತ ಬಡಿಗೇರ, ಪಾಪಾ ನಾಲಬಂದ, ಶಿವಬಸು ಗೌಂಡಿ ಇತರರಿದ್ದರು. 


ಸುದ್ದಿ ಓದಿ