ಗೂಗಲ್‌ ಮ್ಯಾಪ್ ನಂಬಿ ಕಾಡಿನಲ್ಲಿ ಸಿಕ್ಕಿಕೊಂಡಿದ್ದ ಕುಟುಂಬ ಪತ್ತೆ ಹಚ್ಚಿದ ಪೊಲೀಸರು

ಗೂಗಲ್‌ ಮ್ಯಾಪ್ ನಂಬಿ ಕಾಡಿನಲ್ಲಿ ಸಿಕ್ಕಿಕೊಂಡಿದ್ದ ಕುಟುಂಬ ಪತ್ತೆ ಹಚ್ಚಿದ ಪೊಲೀಸರು

ಬೆಳಗಾವಿ : ಗೂಗಲ್ ಮ್ಯಾಪ್ ಮೂಲಕ ಕಾರಿನಲ್ಲಿ ಹೊರಟಿದ್ದ ಕುಟುಂಬವು ದಾರಿ ತಪ್ಪಿಸಿಕೊಂಡು ಖಾನಾಪುರದ ದಟ್ಟ ಕಾಡಿನಲ್ಲಿ ನಾಪತ್ತೆಯಾಗಿ ಯಾವದೇ ಸಂಪರ್ಕ ಇಲ್ಲದೆ ಗೋಳಾಡುತ್ತಿತ್ತು. ಆದರೆ ಕಾಡಿನಲ್ಲಿ ದಿಕ್ಕು ತೋಚದೆ ಗೋಳಾಡುತಿದ್ದ ಕುಟುಂಬವನ್ನು ಪೊಲೀಸರು ಕೊನೆಗೂ ಪತ್ತೆ ಮಾಡಿ ಅವರ ರಾಜ್ಯಕ್ಕೆ ವಾಪಸ್ ಕಳಿಸಿರುವ ಘಟನೆ ವರದಿಯಾಗಿದೆ. 

    ದಿ. 5ರಂದು ಬಿಹಾರ ರಾಜ್ಯದ ರಾಜದಾಸ್ ರಂಜಿತ ಅವರು ತಮ್ಮ ಕುಟುಂಬದ ಜೊತೆಗೆ ಉಜ್ಜಯಿನಿಯಿಂದ ಗೂಗಲ್ ‌ಮ್ಯಾಪ್ ಮೂಲಕ ಕಾರ್ ಸಂಖ್ಯೆ WB 06 H 8550 ಇದರಲ್ಲಿ ಗೋವಾಕ್ಕೆ ತೆರಳುತಿದ್ದರು. 

   ಗೂಗಲ್ ಮ್ಯಾಪ್ ಹಾಕಿಕೊಂಡು ಹೋಗುವಾಗ ದಾರಿ ತಪ್ಪಿ ಖಾನಾಪುರ ಬಳಿಯ ಶಿರೋಲಿಯ ದಟ್ಟ ಕಾಡಿನಲ್ಲಿ ಸಿಕ್ಕಿಕೊಂಡಿದ್ದರು. ಹೇಗೋ ಮಾಡಿ ಖಾನಾಪುರ ಇಆರ್ ಎಸ್ ಎಸ್ ಪೋಲೀಸ್ ರ ನೆರವಿನಿಂದ ಲೈವ್ ಲೊಕೇಶನ್ ಬಿಡಿಸಿಕೊಂಡು ಆ ಸ್ಥಳಕ್ಕೆ ಪೋಲಿಸ್ ರು ತೆರಳಿದ್ದಾರೆ.

  ಅವಾಗ ದಾರಿ ತಪ್ಪಿ ಕಾಡಿನಲ್ಲಿ ಗೋಳಾಡುತಿದ್ದ ಕುಟುಂಬವನ್ನು ಶಿರೋಲಿ ಕಾಡಿನಲ್ಲಿ ಪತ್ತೆ ಮಾಡಿದ ಪೋಲಿಸರು ಕಾಡಿನಿಂದ ಕುಟುಂಬ ಸಮೇತ ಕಾರನ್ನು ಹೊರಗೆ ತಂದು ಅವರ ರಾಜ್ಯಯಾದ ಬಿಹಾರಕ್ಕೆ ಮತ್ತೆ ಕಳುಸಿಕೊಡುವ ಮೂಲಕ ಎ.ಎಸ್.ಐ ಕೆ.ಐ. ಬಡಿಗೇರ ಹಾಗೂ  ಪೊಲೀಸರು ಪ್ರಶಂಸೆಗೆ ಪಾತ್ರರಾಗಿದ್ದಾರೆ. 

ಸುದ್ದಿ ಓದಿ